ಬಳ್ಳಾರಿ

ಸಮನ್ವತೆ ಹರಿಕಾರ ಎಂಪಿಪಿ

Published On :

ಬಳ್ಳಾರಿ: ರಂಗಭೂಮಿ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಮನ್ವಯತೆ ಸಾಧಿಸಿದ ವಿಶಿಷ್ಠ ವ್ಯಕ್ತಿ ದಿ. ಎಂ.ಪಿ.ಪ್ರಕಾಶ್ ಎಂದು ಖ್ಯಾತ ಚಿಂತಕ ಪ್ರೊ. ಜಿ.ಕೆ. ಗೋವಿಂದರಾವ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾ ಘಟಕ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿಗಳು, ಜನರ ಮೆಚ್ಚುಗೆಗಲ್ಲದೇ, ಕೇವಲ ತಮ್ಮ ಸಂತೋಷಕ್ಕಾಗಿ ಬರೆದುಕೊಂಡ ಹಲವಾರು ಸಾಹಿತ್ಯಗಳು ಇಂದಿಗೂ ಜನಪ್ರಿಯಗೊಂಡಿವೆ. ಕಾವ್ಯ ಮತ್ತು ನಾಟಕದ ತತ್ವಗಳು ಬೇರೆಬೇರೆಯಾದರೂ, ಕಾವ್ಯದಲ್ಲಿ ಭಾವಗಳೇ ಪ್ರಮುಖವಾದರೆ, ನಾಟಕ ಕಾವ್ಯಮಯವಾಗಲಿದೆ. ಅದರಲ್ಲಿ ಪಾತ್ರಗಳು, ಹೊಸ ಸನ್ನಿವೇಶಗಳು ಅನಾವರಣಗೊಳ್ಳಲಿವೆ ಎಂದರು.
ನಾಡೋಜ, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲ್ ವೀರಣ್ಣ ಮಾತನಾಡಿ, ಪವಿತ್ರವಾದ ರಂಗಭೂಮಿ ಕಲೆಗೆ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರಂತಹ ಮೇರು ನಟರು ಉತ್ತಮ ಪ್ರಾಶಸ್ತ್ಯ ತಂದುಕೊಟ್ಟಿದ್ದು, ಅವರು ಹಾಕಿದ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು. ರಂಗಭೂಮಿಯಲ್ಲಿ ವಿಜ್ಞಾನವೂ ಇದೆ. ಸಾಹಿತ್ಯವೂ ಇದೆ. ಧರ್ಮ, ದಾರ್ಶನಿಕತೆ, ಸಂಗೀತ, ನವರಸ ಭಾವಗಳು, ನಾಟ್ಯ ಎಲ್ಲವನ್ನೂ ರಂಗಭೂಮಿಯಲ್ಲಿ ಮಾತ್ರ ಒಂದೆಡೆ ನೋಡಬಹುದಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ರಂಗಭೂಮಿಯತ್ತಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಸತೀಶ್ ಹಿರೇಮಠ, ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಸಣ್ಣ ಬಸವರಾಜ್, ಉಪನ್ಯಾಸಕರಾದ ಸುಶೀಲಾ ಶಿರೂರು, ಜಯಲಕ್ಷ್ಮಿ, ಸಾಹಿತಿ ಎ.ಎಂ. ಜಯಶ್ರೀ, ವಿದ್ಯಾರ್ಥಿಗಳು ಇದ್ದರು. ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಯರ್ರಿಸ್ವಾಮಿ ಸ್ವಾಗತಿಸಿ, ವಂದಿಸಿದರು. ಈರಮ್ಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಯರ್ರಿಸ್ವಾಮಿ ರಚಿಸಿ, ನಿರ್ಮಿಸಿದ 'ರಂಗಸಂಪನ್ನ ಎಂ.ಪಿ. ಪ್ರಕಾಶ್‌' ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.