ಸದೃಢ ಮನಸ್ಥಿತಿ ಇರಲಿ: ನಫೀಜಾ
ಬಳ್ಳಾರಿ: ಸದೃಢ ಭಾರತದ ನಿರ್ಮಾಣಕ್ಕೆ ಸದೃಢ ಮನಸ್ಸು ಬಹಳ ಮುಖ್ಯ. ಎಲ್ಲಿ ಯುವ ವಿದ್ಯಾರ್ಥಿಗಳು ಶಾರೀರಿಕವಾಗಿ ಬಲಾಢ್ಯರಾಗಿರುತ್ತರೋ ಅಲ್ಲಿ ಸದೃಢ ಮನಸ್ಸು ತಾನಾಗಿಯೇ ನೆಲೆಸಿರುತ್ತೆ. ಅಂಥ ಸದೃಢ ಮನಸ್ಥಿತಿಯಿಂದ ಆರೋಗ್ಯಕರ ಹಾಗೂ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಹಿಂದಿ ಶಿಕ್ಷಕಿ ನಫೀಜಾ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸ ಮೋಕಾ ಗ್ರಾಮದ ಕೊಳಚೆ ಪ್ರದೇಶದಲ್ಲಿ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ 'ಸದೃಢ ಭಾರತಕ್ಕೆ ಸದೃಢ ಯುವಕರು' ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ರಾಷ್ಟ್ರದ ಮೇರು ವ್ಯಕ್ತಿತ್ವವುಳ್ಳ ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಹಾಗೂ ಮದರ್ ತೆರೆಸಾರಂಥ ಆದರ್ಶ ವ್ಯಕ್ತಿತ್ವವನ್ನು ಯುವಕರು ಅಳವಡಿಸಿಕೊಳ್ಳುವುದು ಉತ್ತಮ ಬೆಳವಣಿಗೆಯ ಪ್ರತೀಕವಾಗಿದ್ದು, ರಾಷ್ಟ್ರ ಪ್ರೇಮ, ರಾಷ್ಟ್ರಗೀತೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಂವಿಧಾನಾತ್ಮಕ ಚಿಂತನೆಗಳ ಕುರಿತು ಶಿಬಿರಾರ್ಥಿಗಳಲ್ಲಿ ಮನವರಿಕೆ ಮಾಡಿದರು.
ಮಹಾವಿದ್ಯಾಲಯದ ಗ್ರಂಥಪಾಲಕಿ ಬಿ. ಶ್ರೀದೇವಿ ಮಾತನಾಡಿದರು. ಶಿಬಿರದ ಶ್ರಮದಾನದಲ್ಲಿ ಸ್ವಯಂ ಸೇವಕರು ಗ್ರಾಮದ ಕುಡಿಯುವ ನೀರಿನ ತೊಟ್ಟಿಗಳ ಸುತ್ತ ಇರುವ ಕೊಳಚೆಯನ್ನು ಸ್ವಚ್ಚಗೊಳಿಸಿದರು. ಪ್ರತಿನಿತ್ಯ ಕುಡಿಯುವ ನೀರಿನ ತೊಟ್ಟಿಗಳನ್ನು ಸ್ವಚ್ಚವಾಗಿಟ್ಟು ಉತ್ತಮ ಅರೋಗ್ಯ ಮತ್ತು ಉತ್ತಮ ಪರಿಸರ ಹೊಂದುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.
ಈ ವೇಳೆ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ. ಮಲ್ಲಿಕಾರ್ಜುನ ಮೋಕಾ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ರುದ್ರವೇಣಿ ಸ್ವಾಗತಿಸಿದರು. ಮಹೇಶ.ಟಿ. ನಿರೂಪಿಸಿದರು. ಪುಷ್ಪಾವತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

