ಮಡಿವಾಳ ಮಾಚಿದೇವರ ಜಯಂತಿ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರ ಕೆಚ್ಚಿನಬಂಡಿ ರಸ್ತೆಯಲ್ಲಿರುವ ಶ್ರೀ ಮಡಿವಾಳ ಮಾಚಿದೇವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಮುಂಜಾನೆ ತಾಲೂಕು ಮಡಿವಾಳರ ಸಂಘದ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತಿ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮ, ಮೆರವಣಿಗೆ ಕೈಬಿಟ್ಟು ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣ, ತಾಲೂಕಿನ ವಿವಿಧ ಗ್ರಾಮಗಳ ಮಡಿವಾಳರ ಬಂಧುಗಳು ಭಾಗವಹಿಸಿದ್ದರು. ಬೆಳಗಿನ ಜಾವ ಅಭಿಷೇಕ, ಅನಂತರ ವಿಶೇಷ ಪೂಜೆ ನೇರವೇರಿಸಲಾಯಿತು. ಬಳಿಕ ಕಳಸ ಹೊತ್ತ ಮಹಿಳೆಯರು ಮಹಾಮಂಗಳಾರತಿ ಸೇವೆ ಸಲ್ಲಿಸಿದರು.
ಸಮಾಜದ ತಾಲೂಕಾಧ್ಯಕ್ಷ ಎಂ. ರಾಮಣ್ಣ ಮಾತನಾಡಿ, ರಾಜ್ಯಮಟ್ಟದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗುತ್ತಿದೆ. ಆದರೆ ಪ್ರಸ್ತುತ ರಾಜ್ಯದಲ್ಲಿ ನೀತಿ ಸಂಹಿತೆ ಇರುವುದರಿಂದ ಮೆರವಣಿಗೆ, ಅದ್ಧೂರಿ ಜಯಂತಿ ಆಚರಿಸಲು ಸಾಧ್ಯವಾಗಿಲ್ಲ. ಸಮಾಜದ ಬಂಧುಗಳು ಸಹಕರಿಸಬೇಕು. ನಮ್ಮ ಸಮಾಜದ ಸಂಘಟನೆಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.
ಸಂಘದ ಅಧ್ಯಕ್ಷ ಎಂ. ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯ ಮುಖಂಡರಾದ ಲಾಟರಿ ಕರಿಯಪ್ಪ, ಮಡಿವಾಳರ ಬಾಳಪ್ಪ, ಶ್ರೀನಿವಾಸ ಕಟ್ಟಿಮನಿ, ಅಗಸರ ಮಂಜುನಾಥ, ವೆಲ್ಡಿಂಗ್ ಹುಲುಗಪ್ಪ, ಅಗಸರ ಕೊಟ್ರೇಶ, ಮಡಿವಾಳಪ್ಪ, ಭರ್ಮಪ್ಪ, ಎಂ. ಬಸವರಾಜ ಅಗಸರ ಪ್ರಕಾಶ, ಟೀಪುಡಿ ನಾಗರಾಜ, ಉಪನ್ಯಾಸಕ ಎಂ. ಶಿವಮೂರ್ತಿ, ಯುವಕ ಸಂಘದ ಮುಖಂಡರಾದ ಅಶೋಕ, ಮಾರುತಿ, ರಾಘವೇಂದ್ರ, ನೀಲಪ್ಪ, ಕುಮಾರ, ನಾಗರಾಜ, ಮುರುಳಿ, ಮಹಿಳಾ ಮುಖಂಡರಾದ ಮಡಿವಾಳರ ಗಂಗಮ್ಮ, ನಾಗಮ್ಮ, ರತ್ನಮ್ಮ ಕಟ್ಟಿಮನಿ, ಗಿರಿಜಮ್ಮ, ದ್ರಾಕ್ಷಾಯಣಮ್ಮ, ಮಂಜಮ್ಮ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

