ಬಳ್ಳಾರಿ

ಅಂಬೇಡ್ಕರ್ ಧೀಮಂತ ನಾಯಕ

Published On :

ಕೂಡ್ಲಿಗಿ: ಸಮಾಜದಲ್ಲಿ ತುಳಿತಕ್ಕೊಳಗಾದ, ದಲಿತರ ಬದುಕಿಗೆ ನೆಲೆ ಕಲ್ಪಿಸಿಕೊಟ್ಟ ಧೀಮಂತ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಎಂದು ತಹಸೀಲ್ದಾರ್ ಎಲ್. ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ 123ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಶತಮಾನಗಳಿಂದ ತುಳಿತಕ್ಕೊಳಗಾದ ದಲಿತರಿಗೆ ಶಿಕ್ಷಣದ ಅರಿವು ಮೂಡಿಸುವ ಮೂಲಕ ಸಂಘಟನೆ ಮೂಲಕ ಶೋಷಿತರ ಹಕ್ಕುಗಳಿಗಾಗಿ ಹೋರಾಡಿದವರು. ಕೇವಲ ದಲಿತರ ಪರ ಅಲ್ಲದೆ ಎಲ್ಲ ವರ್ಗದ ಬಡವರ ಪರ ಹೋರಾಟ ನಡೆಸಿದ ಧೀಮಂತ ನಾಯಕರಾಗಿದ್ದು, ಆದರ್ಶ ಪುರುಷರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜಯಂತಿ ಅರ್ಥಪೂರ್ಣವಾಗಿಸಬೇಕಿದೆ ಎಂದರು.
ಚುನಾವಣಾಧಿಕಾರಿ ಡಿ.ಟಿ. ನಂದೀಶ್, ಹಿರಿಯ ನಾಗರಿಕ ಕೆ. ಮಲ್ಲಣ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಿ.ಎಲ್.ಎನ್. ಮೂರ್ತಿ, ಇಒ ಶಿವಪ್ಪ, ಡಿವೈಎಸ್ಪಿ ಗಜಕೋಶ್, ಸಿಪಿಐ ಕಲ್ಲೇಶಪ್ಪ, ಪಿಎಸ್‌ಐ ಕೃಷ್ಣನಾಯ್ಕ, ಗುಡೇಕೋಟೆ ಪಿಎಸ್‌ಐ ನವೀನ್ ಗೌಡ, ಜಿಪಂ ಎಇಇ ವೀರಪ್ಪ, ಬಿಇಒ ಮಂಜುನಾಥ, ಬಿಆರ್‌ಸಿ ಸಮನ್ವಯಾಧಿಕಾರಿ ಮೈಲೇಶ್ ಬೇವೂರ್, ಪಪಂ ಸದಸ್ಯರಾದ ಎಸ್. ದುರುಗೇಶ್, ಚೌಡಪ್ಪ, ದಲಿತ ಮುಖಂಡರಾದ ಶಿವಣ್ಣ ಸಾಲುಮನಿ, ಹಿರೇಕುಂಬಳಗುಂಟೆ ಉಮೇಶ್, ಎಚ್. ಕರಿಬಸಪ್ಪ, ಮರಿಯಪ್ಪ, ಸಾಲುಮನಿ ರಾಘವೇಂದ್ರ, ಪಿಜಿಬಿ ರಾಮಪ್ಪ, ಪರುಶುರಾಮ್, ಕೋಗಳಿ ಕೊಟ್ರೇಶ್, ಬಂಡೆ ರಾಘವೇಂದ್ರ, ಎಸ್. ಚಾರೇಶ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಶಿವರಾಜ, ಮಹೇಶ್, ರಾಜಶೇಖರ್, ತಿಪ್ಪೇಸ್ವಾಮಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.