ಜಿಲ್ಲೆ ಸಮಗ್ರ ಅಭಿವೃದ್ಧಿ
ಬಳ್ಳಾರಿ: ರಾಜಕೀಯದಲ್ಲಿ ಅನೇಕ ಎಡರು-ತೊಡರು, ನೋವು-ನಲಿವುಗಳನ್ನುಂಡು ಶಾಸಕನಾಗಿ, ಮಂತ್ರಿಯಾಗಿ ಜನಸೇವೆಯಲ್ಲಿ ತೊಡಗಿರುವ ನಾನು ಇದೀಗ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಸಂಸದನಾಗಿ ಆಯ್ಕೆಯಾದಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಬಿಜೆಪಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಿ. ಶ್ರೀರಾಮುಲು ತಿಳಿಸಿದರು.
ಕೌಲ್ ಬಜಾರ್‌ನ 9ನೇ ವಾರ್ಡ್‌ನಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿ ಮತ ಯಾಚಿಸಿದ್ದೇನೆ. ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗಾಗಿ, ಎಲ್ಲ ಸಮುದಾಯದ ರಕ್ಷಣೆಗಾಗಿ ದುಡಿಯುತ್ತೇನೆ. ಮೋದಿ ದೇಶದ ಪ್ರಧಾನಿಯಾದರೆ ದೇಶ ಸಂಪದ್ಭರಿತವಾಗಿರುತ್ತದೆ. ಅವಕಾಶ ನೀಡಿ ಎಂದು ಮನವಿ ಮಾಡಿದರು.
ಮುಸ್ಲಿಂ ಧರ್ಮಪ್ರಚಾರಕ ಮೌಲಾನಾ ಅಬುತಾಲೀಮ್ ಮುತಾಲಿಕ್, ಮುಸ್ಲಿಂ ಮುಖಂಡರಾದ ಗುಜರಿ ಅಜೀಜ್, ವಕ್ಫ್ ಬೋರ್ಡ್ ಅಧ್ಯಕ್ಷ ನೂರ್ ಬಾಷಾ, ಪಾಲಿಕೆ ಸದಸ್ಯರಾದ ಎಂ. ಗೋವಿಂದರಾಜುಲು, ರಾಜ್‌ಕುಮಾರ್, ಬಿಜೆಪಿ ಮುಖಂಡರಾದ ಸತೀಶ್ ಚಕ್ರವರ್ತಿ, ತೂರ್ಪು ಯಲ್ಲಪ್ಪ ಇತರರಿದ್ದರು.
9ನೇ ವಾರ್ಡ್‌ನ ಪಾಲಿಕೆ ಸದಸ್ಯ ರಾಜ್‌ಕುಮಾರ್, ಕೂಡ್ಲಿಗಿಯ ವೈದ್ಯ ಡಾ. ರಮೇಶ್ ಪೂಜಾರಿ ಬಿಜೆಪಿ ಸೇರಿದರು. ಎಸ್. ಗುರುಲಿಂಗನಗೌಡ, ಮುರಾರಿಗೌಡ, ಕೆ.ಎ. ರಾಮಲಿಂಗಪ್ಪ, ನಜೀರ್ ಬಾಷಾ, ಜಿಲಾನಿ ಬಾಷಾ, ಚಂದ್ರು, ಶ್ಯಾಮ್, ಅನಿಲ್ ನಾಯ್ಡು, ಸತೀಶ್ ಚಕ್ರವರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

