ಬಳ್ಳಾರಿ: ದಾಖಲೆ ಮತದಾನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 18
ಬಳ್ಳಾರಿ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಈ ಬಾರಿ ಅತಿ ಹೆಚ್ಚು ಶೇ. 70.31 ದಾಖಲೆ ಮತದಾನವಾಗಿದೆ.
ಈ ಪ್ರಮಾಣದಲ್ಲಿ ಮತದಾನವಾಗಲು ಕಾರಣವೇನು? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದರೆ, ಅಧಿಕಾರಿ ವರ್ಗದವರಿಗೆ ಸಂತಸ ತಂದಿದೆ. ನಿರೀಕ್ಷೆಗಿಂತ ಹೆಚ್ಚು ಮತದಾನವಾಗಿರುವುದು ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ತಿರುವು-ಮುರುವು ಮಾಡುವ ಸಾಧ್ಯತೆ ಇದೆ.
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ 1999ರಲ್ಲಿ ಕಾಂಗ್ರೆಸ್ನಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದಾಗ ಅತಿ ಹೆಚ್ಚು (ಶೇ. 69.80) ಮತದಾನವಾಗಿತ್ತು. 1952ರಿಂದ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಅದೇ ದಾಖಲಾಗಿ ಉಳಿದಿತ್ತು. ಈ ಬಾರಿ ಈ ದಾಖಲೆ ಮುರಿದಿರುವುದು ಎಲ್ಲರ ಅಚ್ಚರಿ, ಕುತೂಹಲಕ್ಕೆ ಕಾರಣವಾಗಿದೆ. ಸೋನಿಯಾಗಾಂಧಿ ರಾಜಿನಾಮೆ ಕೊಟ್ಟ ಮೇಲೆ, 2000ರಲ್ಲಿ ನಡೆದ ಉಪಚುನಾವಣೆಯಲ್ಲಿ ಅತ್ಯಂತ ಕಡಿಮೆ (ಶೇ. 42.31) ಮತದಾನವಾಗಿತ್ತು. 2014ರಲ್ಲಿ ಶೇ. 70.31ರಷ್ಟು ಮತದಾನವಾಗಿದೆ.
ರಾಜಕೀಯ ವಲಯದಲ್ಲಿ ಚರ್ಚೆ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಪ್ರಮಾಣದಲ್ಲಿ ಮತದಾನವಾಗಿರುವುದು ಹೇಗೆ ಎಂಬ ಚರ್ಚೆ ನಡೆಯುತ್ತಿದೆ. ಹೆಚ್ಚಿನ ಮತದಾನ ಯಾವ ಪಕ್ಷಕ್ಕೆ ವರ ಎಂಬ ಕುರಿತು ಕುತೂಹಲವಿದೆ. ಕ್ಷೇತ್ರದಲ್ಲಿ ಮೋದಿ ಅಲೆ ಕೆಲಸ ಮಾಡಿದೆಯೇ? ಕಾಂಗ್ರೆಸ್ ಅಭ್ಯರ್ಥಿ ಹನುಮಂತ ಮೇಲಿನ ಅನುಕಂಪ ಕಾರಣವೇ? ಅಥವಾ ಶ್ರೀರಾಮುಲು ರಾಜಕೀಯ ಭವಿಷ್ಯದ ಅಸ್ತಿತ್ವ ಪ್ರಶ್ನೆಯನ್ನು ಜನ ಗಂಭೀರವಾಗಿ ಪರಿಗಣಿಸಿದರೇ? ಎಂಬಿತ್ಯಾದಿ ವಿಷಯಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹೆಚ್ಚಳಕ್ಕೆ ಕಾರಣ?: ಸ್ವೀಪ್ ಯೋಜನೆ ಅಡಿ ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳು, ವೈದ್ಯರು, ಶಾಲೆ ವಿದ್ಯಾರ್ಥಿಗಳು, ಹೋಟೆಲ್ಗಳು, ಆಟೋ ಚಾಲಕರ ನೆರವಿನೊಂದಿಗೆ ನಡೆಸಿದ ಮತದಾನ ಜಾಗೃತಿ ಫಲವೋ? ಅಥವಾ ಪ್ರಥಮ ಬಾರಿಗೆ 'ನೋಟಾ' (ಯಾರೂ ಅರ್ಹರಲ್ಲ) ಎಂಬ ಆಯ್ಕೆಗೆ ಅವಕಾಶ ನೀಡಿದ್ದು ಕಾರಣವೋ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ವರೆಗಿನ ಮತದಾನ
1952 ಶೇ. 62.21
1957 ಶೇ. 62.59
1962 ಶೇ. 62.20
1967 ಶೇ. 67.50
1971 ಶೇ. 62.63
1977 ಶೇ. 65.03
1980 ಶೇ. 54.24
1984 ಶೇ. 66.41
1989 ಶೇ. 66.67
1991 ಶೇ. 51.27
1996 ಶೇ. 55.60
1998 ಶೇ. 63.20
1999 ಶೇ. 69.80
2000 ಶೇ. 42.31
2004 ಶೇ. 66.78
2009 ಶೇ. 61.42
2014 ಶೇ. 70.31
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

