ಬಳ್ಳಾರಿ

ಕ್ಷೌರ, ಗೋಪೂಜೆ, ಮದುವೆ...

Published On :

ಬಳ್ಳಾರಿ: ಗೆಲವಿನ ಹಂಬಲದಲ್ಲಿ ಪ್ರಚಾರ, ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಸದಾ ತಲ್ಲೀನರಾಗಿದ್ದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಚುನಾವಣೆ ಮರುದಿನವಾದ ಶುಕ್ರವಾರ ಮನೆಯಲ್ಲೇ ಸಂಪೂರ್ಣ ವಿಶ್ರಾಂತಿ ಪಡೆದರು.
ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ರಾಜ್ಯದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡುತ್ತಿರುವ ಶ್ರೀರಾಮುಲು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಾ ಕುಟುಂಬದಿಂದ ದೂರವುಳಿದಿದ್ದರು. ಶುಕ್ರವಾರ ಅವಕ್ಕೆಲ್ಲವಿರಾಮ ಹೇಳಿ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಬೆರೆತು ತಮ್ಮ ಖಾಸಗಿ ಜೀವನಕ್ಕೆ ಒತ್ತು ನೀಡಿದರು. ಶುಕ್ರವಾರ ಬೆಳಗ್ಗೆ 6ಕ್ಕೆ ನಿದ್ರೆಯಿಂದೆದ್ದು, ಕ್ಷೌರ ಮಾಡಿಸಿಕೊಂಡು, ಸ್ನಾನ ಮಾಡಿದ ಶ್ರೀರಾಮುಲು, ತಮ್ಮ ಮನೆಯಲ್ಲೇ ದೇವರು, ಗೋ ಮಾತೆಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಬಳಿಕ ಮನೆಯಲ್ಲೆ ಟಿವಿ ನೋಡುತ್ತಾ ಉಪಾಹಾರ ಸೇವಿಸಿದರು. ಎಲ್ಲ ಪತ್ರಿಕೆಗಳ ಮೇಲೆ ಒಮ್ಮೆ ಕಣ್ಣಾಡಿಸಿದರು. ಕೆಲಕಾಲ ಕುಟುಂಬದ ಸದಸ್ಯರು, ಮಕ್ಕಳೊಂದಿಗೆ ಬೆರೆತು, ತಮ್ಮ ಸಹೋದರನ ಮಗನ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸಿದ್ಧಗೊಂಡರು. ಕಾರ್ಯಕರ್ತರು ಎಂದಿನಂತೆ ಬಂದು, ಸ್ವಾಭಿಮಾನಿಯನ್ನು ಮಾತನಾಡಿಸಿದರು.
ಚುನಾವಣೆ ಫಲಿತಾಂಶಕ್ಕೆ ಇನ್ನೂ ತಿಂಗಳು ಬಾಕಿ ಇದ್ದು, ನಿತ್ಯವೂ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಪಕ್ಷದ ಕಾರ್ಯಕರ್ತರು, ಪ್ರಮುಖರು, ಅಧ್ಯಕ್ಷರು, ಪದಾಧಿಕಾರಿಗಳೆಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ವಿಶ್ರಾಂತಿ ಪಡೆದರು. ನಿತ್ಯವೂ ಸಭೆ, ಸಮಾರಂಭ, ಪಕ್ಷ ಸೇರ್ಪಡೆ ಕಾರ್ಯಕ್ರಮಗಳಿಂದ ಸುದ್ದಿಯಲ್ಲಿದ್ದ ಪಕ್ಷಗಳ ಕಚೇರಿಗಳೂ ಶುಕ್ರವಾರ ಮೌನಕ್ಕೆ ಶರಣಾಗಿದ್ದವು.ಮಗ ತೇಜಸ್ ಜತೆ ಆಟವಾಡುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.