ಬಳ್ಳಾರಿ

ನಿತ್ಯ ಅನ್ನದಾಸೋಹ ಪುನರಾರಂಭ

Published On :

ಹೊಸಪೇಟೆ: ದಕ್ಷಿಣ ಕಾಶಿ ಎಂದೇ ವಿಶ್ವವಿಖ್ಯಾತಿ ಹೊಂದಿರುವ ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಭಾನುವಾರದಿಂದ ನಿತ್ಯ ಅನ್ನದಾಸೋಹ ಆರಂಭಿಸಲಾಯಿತು.
ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿಗೆ ಮಹಾನೈವೇದ್ಯ, ಮಂಗಳಾರತಿಯಾದ ನಂತರ ವಿದ್ಯಾರಣ್ಯ ಮಠದ ಅನ್ನಪೂರ್ಣೇಶ್ವರಿ ಭೋಜನ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿತ್ಯ ಉಚಿತ ಅನ್ನದಾಸೋಹಕ್ಕೆ ಚಾಲನೆ ನೀಡಲಾಯಿತು.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್ ಹಾಗೂ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಗೂ ಗಣಿ ಉದ್ಯಮಿ ಹಾಗೂ ದಾನಿಗಳಾದ ಎಚ್.ಆರ್. ರಂಗನಗೌಡ, ವಿರೂಪಾಕ್ಷ ದೇವಸ್ಥಾನದ ಧರ್ಮಕರ್ತ ಶ್ರೀಕೃಷ್ಣದೇವರಾಯ, ವರ್ತಕರಾದ ಕಾಕುಬಾಳ್ ಸೀತಾರಾಮ ಶೆಟ್ಟಿ, ಭೂಪಾಳ್ ರಾಘವೇಂದ್ರ ಶೆಟ್ಟಿ, ಚಿತವಾಡ್ಗಿ ಕುಮಾರಸ್ವಾಮಿ ಶೆಟ್ಟಿ, ತಾಪಂ ಸದಸ್ಯ ಭೀಮನಾಯ್ಕ, ನಿವೃತ್ತ ಶಿಕ್ಷಣಾಧಿಕಾರಿಗಳಾದ ಗಾದಿಲಿಂಗಪ್ಪ, ಸಿದ್ದನಗೌಡ, ದೇವಸ್ಥಾನದ ಮುಖಂಡರು ಉಚಿತ ನಿತ್ಯ ಅನ್ನದಾಸೋಹಕ್ಕೆ ಪೂಜಾ ಕಾರ್ಯ ನಡೆಸಿಕೊಟ್ಟರು. ಅನ್ನದಾಸೋಹಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ದಾನಿಗಳನ್ನು ಸನ್ಮಾನಿಸಿತು. ಬಿ. ನರಸಿಂಹಮೂರ್ತಿ, ಮಂಜುನಾಥ್, ಕ್ಷೇತ್ರ ಪುರೋಹಿತ ಮೋಹನ್ ಚಿಕ್ಕಭಟ್ ಜೋಷಿ, ವಿರೂಪಾಕ್ಷಪ್ಪ, ಮಹಾಲಿಂಗಂ ಇದ್ದರು. ಹಂಪಿಯ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನ ದಾಸೋಹಕ್ಕೆ ಸಹಾಯ ಮಾಡಲು ಬಯಸುವ ಆಸಕ್ತ ಭಕ್ತರು ದೂರವಾಣಿ- 08394- 241241, ಕಾರ್ಯನಿರ್ವಣಾಧಿಕಾರಿ ಪ್ರಕಾಶ ಮೊ: -9449020234ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.