ಶಿಕ್ಷಣದಿಂದ ದೌರ್ಜನ್ಯ ತಡೆ
ಹೊಸಪೇಟೆ: ಜಾತಿ ನಿಂದನೆ ಅಪರಾಧ. ಜಾತಿ ನಿಂದಕರನ್ನು 10 ವರ್ಷ ಜೈಲಿನಲ್ಲಿ ಇರಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೂ, ದಲಿತ ಸಮುದಾಯ ನಿಂದನೆಗೆ ಒಳಪಡಬಾರದು ಎಂದರೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ವಕೀಲ ಮಹಾಂತೇಶ್ ಹೇಳಿದರು.
ನಗರದ ಸ್ಲಂ ಕಚೇರಿಯಲ್ಲಿ ಸೋಮವಾರ ಸ್ಲಂ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ, ಮಹಿಳಾ ಘಟಕ ಹಮ್ಮಿಕೊಂಡಿದ್ದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ನ್ಯಾಯವಾದಿ ಪುಷ್ಪಲತಾ ಮಾತನಾಡಿ, ಒಬ್ಬ ಹೆಣ್ಣು ಮಗುವಾಗಿ, ಅಕ್ಕ-ತಂಗಿಯಾಗಿ, ಪತ್ನಿಯಾಗಿ, ತಾಯಿಯಾಗಿ ಸಮಾಜವನ್ನು ಮುನ್ನಡೆಸುತ್ತಾಳೆ ಎಂದರು. ಹೊಸಪೇಟೆ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ, ಹೊಸಪೇಟೆ ಸ್ಲಂ ಸಮಿತಿ ಅಧ್ಯಕ್ಷ ಕೆ. ಸುನೀಲ್, ಯುವ ಘಟಕದ ಅಧ್ಯಕ್ಷೆ ಶಿಲ್ಪಾ, ಕಮಲಾಪುರ ಮಹಿಳಾ ಘಟಕ ಉಪಾಧ್ಯಕ್ಷ ಸಂಪತ್ಬಾಯಿ, ಯುವ ಘಟಕದ ಹನುಮಂತರಾಯ, ಸಮಾನ ಮಕ್ಕಳ ಮಂಟಪ ಸಂಯೋಜಕ ಕೆ. ವೆಂಕಟೇಶಲು, ದೇವಕಮ್ಮ, ಖಾಜಾಬನಿ, ಹನುಮಂತಿ, ಯಲ್ಲಮ್ಮ, ತಾರಾಬಾಯಿ, ಬಸಮ್ಮ, ಮಾಣಿಕಬಾಯಿ ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

