ಸಾವಲ್ಲೂ ಮಾನವೀಯತೆ ಮೆರೆದ...
ಸಿರುಗುಪ್ಪ: ಸಾವಿನಲ್ಲೂ ಮಾನವಿಯತೆ ಮೆರೆದ ವ್ಯಕ್ತಿಯೊಬ್ಬ ತನ್ನ ಕಣ್ಣುಗಳನ್ನು ದಾನವಾಗಿ ನೀಡಿದ್ದಾನೆ. ತಾಲೂಕಿನ ಶಾಲಿಗನೂರು ಗ್ರಾಮದ ಬಸವನಗೌಡ (68) ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಮೃತರು ಒಂದು ತಿಂಗಳಿಗೆ ಮುನ್ನವೇ ತಮ್ಮ ಸಾವಿನ ನಂತರ ಕಣ್ಣನ್ನು ದಾನ ಮಾಡುವಂತೆ ಕುಟುಂಬದವರಿಗೆ ಮಾಹಿತಿ ನೀಡಿದ್ದರು ಎಂದು ಪುತ್ರ ದೊಡ್ಡನಗೌಡ ತಿಳಿಸಿದರು. ಅವರ ಮಾತಿನಂತೆ ಶನಿವಾರ ಬೆಳಗಿನ ಜಾವ ಕೊನೆಯೂಸಿರೆಳೆಯುತ್ತಿದ್ದಂತೆ ಬಳ್ಳಾರಿಯ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ವೈದ್ಯರ ತಂಡ ಮೃತರ ಕಣ್ಣುಗಳನ್ನು ಪಡೆದಿದ್ದಾರೆ.
ತಮ್ಮ ಇಳಿ ವಯಸ್ಸಿನಲ್ಲಿಯೂ ತಮ್ಮ ಸಾವಿನಲ್ಲಿ ಮಾನವೀಯತೆ ಮೆರೆದ ಬಸವನಗೌಡ ಹಾಗೂ ಕುಟುಂಬದ ಕಾರ್ಯಕ್ಕೆ ಗ್ರಾಮೀಣ ಭಾಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚೊಕ್ಕಬಸವನಗೌಡ, ಶಿವಶಂಕರಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮನಗೌಡ, ತಾಪಂ ಸದಸ್ಯ ಚನ್ನನಗೌಡ ಸೇರಿದಂತೆ ಕುಟುಂಬದ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

