ಬಳ್ಳಾರಿ

ಆಕಸ್ಮಿಕ ಬೆಂಕಿ: ಅಪಾರ ಹಾನಿ

Published On :


ಹಗರಿಬೊಮ್ಮನಹಳ್ಳಿ: ಆಕಸ್ಮಿಕ ಬೆಂಕಿಯಿಂದಾಗಿ ಎರಡು ಬಂಡಿ ಸಹಿತ ಹತ್ತು ಮೇವಿನ ಬಣವೆಗಳು ಹಾಗೂ ಒಂದು ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಮೊರಗೇರಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಘಟನೆಯಲ್ಲಿ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ, ರು. 3.55 ಲಕ್ಷ ಮೌಲ್ಯದಷ್ಟು ಆಸ್ತಿಪಾಸ್ತಿ ಬೆಂಕಿಗಾಹುತಿಯಾಗಿದೆ ಎಂದು ಅಂದಾಜಿಸಲಾಗಿದೆ. ಗ್ರಾಮದ ಹೊಸಪ್ಲಾಟ್ ಏರಿಯಾದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ಡಿ.ಎಂ. ಕೊಟ್ರಯ್ಯ, ಉತ್ತಂಗಿ ಲೋಕಪ್ಪ, ಅನಂದಳ್ಳಿ ಲಲಿತಮ್ಮ, ಹಳ್ಳಿ ಚನ್ನ್ನಬಸಪ್ಪ, ಅಕ್ಕಿ ತಾಟೇಶ, ಅಕ್ಕಿ ಮಲ್ಲೇಶಪ್ಪ, ನೀಲನಗೌಡ್ರ ಫಕ್ಕೀರಗೌಡ್ರ, ಮಡಿವಾಳರ ಸುರೇಶ ಎಂಬ ರೈತರಿಗೆ ಸೇರಿದ ಮೇವಿನ ಬಣವೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ಅಕ್ಕಿ ತಾಟೇಶ ಕಣದಲ್ಲಿ ಕಟ್ಟಿಕೊಂಡಿದ್ದ ವಾಸದ ಗುಡಿಸಲು ಸಂಪೂರ್ಣ ಸುಟ್ಟಿದ್ದರೆ, ಗುಡಿಸಲಿನಲ್ಲಿದ್ದ ರು. 15 ಸಾವಿರ ನಗದು, ಬಟ್ಟೆ ಹಾಗೂ ಒಂದು ಎತ್ತಿನ ಬಂಡಿ ಸುಟ್ಟಿವೆ ಎಂದು ತಹಸೀಲ್ದಾರ್ ಏಜಾಜ್ ಬೇಗ್ ತಿಳಿಸಿದ್ದಾರೆ.
ಸಾಂತ್ವನಃ ಘಟನೆ ತಿಳಿಯುತ್ತಲೆ ಜಿಪಂ ಸದಸ್ಯೆ ಕರಿಬಸವನಗೌಡ್ರ ರತ್ನಮ್ಮ, ತಾಪಂ ಸದಸ್ಯೆ ಭಾರತಮ್ಮ ಬೆಲ್ಲದ್, ಪಂಚಾಯ್ತಿ ಸದಸ್ಯರಾದ ಜಯಮ್ಮ, ಅಂಜಿನಪ್ಪ, ರಾಚಪ್ಪ, ಪರುಸಪ್ಪ, ಚೌಡಮ್ಮ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿನೀಡಿ, ರೈತರಿಗೆ ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ ಅದಷ್ಟು ಬೇಗ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಸ್ಥಳಕ್ಕೆ ಹೂವಿನಹಡಗಲಿ ಸಿಪಿಐ ಪ್ರಕಾಶ ರಾಥೋಡ್ ಭೇಟಿ ನೀಡಿ ಪರೀಶಿಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.