ಬಳ್ಳಾರಿ

ಶೌಚಾಲಯ ನಿರ್ಮಾಣಕ್ಕೆ ಮನವಿ

Published On :

ಬಳ್ಳಾರಿ: ಕೌಲ್‌ಬಜಾರ್ ಪ್ರದೇಶದ ಕುರಿಕಮೇಲಕ್ಕೆ ತೆರಳುವ ರಸ್ತೆಯಲ್ಲಿದ್ದ ಮಹಿಳಾ ಶೌಚಾಲಯ ಕಟ್ಟಡವನ್ನು ವಾರದ ಹಿಂದೆ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಕೂಡಲೇ ಶೌಚಾಲಯ ಪುನರ್ ನಿರ್ಮಾಣ ಮಾಡುವಂತೆ ನವಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾ ಘಟಕ ಆಗ್ರಹಿಸಿದೆ.
ಅನೇಕ ವರ್ಷಗಳಿಂದ ಇರುವ ಮಹಿಳಾ ಶೌಚಾಲಯವನ್ನು ವಾರದ ಹಿಂದೆ ದುಷ್ಕರ್ಮಿಗಳು ಸಾರ್ವಜನಿಕರಿಗಾಗಲಿ ಅಥವಾ ಕಾಲೊನಿಯ ಮುಖಂಡರಿಗಾಗಲಿ ಮಾಹಿತಿ ನೀಡದೇ ರಾತ್ರೋ ರಾತ್ರಿ ಒಡೆದು ಹಾಕಿದ್ದು, ಇದರಿಂದ ಇಲ್ಲಿ ವಾಸಿಸುವ ಮಹಿಳೆಯರು ಶೌಚಾಲಯಕ್ಕೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸಲ್ಲಿಸುವ ಮನವಿಯಲ್ಲಿ ತಿಳಿಸಿದ್ದಾರೆ.
ಕೌಲ್‌ಬಜಾರ್ ಪ್ರದೇಶದಲ್ಲಿದ್ದ ಮಹಿಳಾ ಶೌಚಾಲಯವು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಮಹಿಳೆಯರಿಗೆ ತುಂಬಾ ಅನುಕೂಲವಾಗಿತ್ತು. ಆದರೆ, ಸರ್ಕಾರಿ ಜಾಗದಲ್ಲಿದ್ದ ಈ ಮಹಿಳಾ ಶೌಚಾಲಯ ಕಟ್ಟಡ ಧ್ವಂಸಗೊಳಿಸಲು ಕಾರಣ ಏನೆಂಬುದು ತಿಳಿಯದೇ ಹಲವು ಸಂಶಯಗಳಿಗೆ ಕಾರಣವಾಗಿದೆ. ಇದಕ್ಕೆ ಕಾರಣವಾದವರನ್ನು ಕೂಡಲೇ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಮಹಿಳಾ ಶೌಚಾಲಯವನ್ನು ಶೀಘ್ರ ಪುನರ್ ನಿರ್ಮಾಣ ಮಾಡಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ವೇದಿಕೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಜಿಲ್ಲಾಧ್ಯಕ್ಷ ಪಿ. ಶೇಖರ್,  ಕೆ. ಕುಪ್ಪುಸ್ವಾಮಿ, ಕೆ. ಗೂಳಪ್ಪ, ಎಂ. ವಿಶ್ವನಾಥ, ಬಿ. ದಿಲೀಪ್‌ಕುಮಾರ್, ಸುರೇಶ್, ಕೃಷ್ಣಮೂರ್ತಿ, ಕರ್ಣ, ಮಾಣಿಕ್ಯಂ, ಧನರಾಜ್, ಗೋವಿಂದಸ್ವಾಮಿ, ರವಿಕುಮಾರ್, ಉದಯ್‌ಕುಮಾರ್, ರಾಘವೇಂದ್ರ, ರಾಜೇಶ್, ಮನೋಜ್, ಅಮರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.