ಬಳ್ಳಾರಿ

ಮದ್ಯ ಅಕ್ರಮ ಮಾರಾಟ; ಬಂಧನ: ದೂರು

Published On :

ಬಳ್ಳಾರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿ, ಓರ್ವನನ್ನು ಬಂಧಿಸಿ, ಆತನಿಂದ ರು. 61 ಸಾವಿರ ವಶಪಡಿಸಿಕೊಂಡಿದ್ದಾರೆ. ಕುರುಗೋಡು ಸಮೀಪದ ಎಚ್. ವೀರಾಪುರ ಗ್ರಾಮದಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕುರುಗೋಡು ಪಿಎಸ್ಐ ಸೋಮಶೇಖರ್ ಓಮಿನಿ ವ್ಯಾನ್ ತಡೆದು ಪರಿಶೀಲಿಸಿದಾಗ ವಾಹನದಲ್ಲಿದ್ದ ಮದ್ಯ ಇರುವ ಬಾಕ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಚಾಲಕ ಅರುಣಾಕುಮಾರ್ನನ್ನು ವಿಚಾರಿಸಲಾಗಿ ಕುರುಗೋಡಿನ ಸೈನಿಕ್ ವೈನ್ ಶಾಪ್ ಮಾಲೀಕ ಶ್ರೀನಿವಾಸ್ ಅವರು ಎಚ್. ವೀರಾಪುರಕ್ಕೆ ಕೊಟ್ಟು ಬರಲು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮದ್ಯ ಸಾಗಾಣಿಕೆ ವಾಹನವನ್ನು ಸೀಜ್ ಮಾಡಿ ಹಾಗೂ ಮಾರಾಟಕ್ಕೆ ಮುಂದಾಗಿದ್ದವರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಮದ್ಯ ಅಕ್ರಮ ಸಾಗಾಟ: ಮದ್ಯ ವಶ- ದೂರು
ಬಳ್ಳಾರಿ: ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ವ್ಯಾನ್ ಹಾಗೂ ರು. 73 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಮುಷ್ಟಗಟ್ಟೆ ಸಮೀಪದಲ್ಲಿ ನಡೆದಿದೆ. ಮದ್ಯ ಸಾಗಾಣಿಕೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಇನ್ಸ್ಪೆಕ್ಟರ್ ಪ್ರಸಾದ್ ಗೋಖಲೆ ಮುಷ್ಟಗಟ್ಟೆ ಗ್ರಾಮಕ್ಕೆ ಬರುತ್ತಿದ್ದ ವಾಹನ ಪರಿಶೀಲಿಸಿದ್ದಾರೆ. ವಾಹನದಲ್ಲಿದ್ದ ರು. 73,409 ಮೌಲ್ಯದ ಮದ್ಯದ ಬಾಟಲ್ಗಳನ್ನು ವಶಪಡಿಸಿಕೊಂಡು ವ್ಯಾನ್ ಸೀಜ್ ಮಾಡಿದ್ದಾರೆ. ಚಾಲಕ ಮೌನೇಶ್ನನ್ನು ವಿಚಾರಿಸಲಾಗಿ, ಬಾದನಹಟ್ಟಿ ಗ್ರಾಮದ ದುರ್ಗಾ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ಸಣ್ಣ ವೀರಾರೆಡ್ಡಿ ಮದ್ಯವನ್ನು ಮಷ್ಟಗಟ್ಟೆ ಗ್ರಾಮಕ್ಕೆ ತಲುಪಸಲು ತಿಳಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಕುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾದಿಲಿಂಗನಗೌಡ ನಿಧನ
ಬಳ್ಳಾರಿ: ಬಳ್ಳಾರಿಯ ಪಾರ್ವತಿ ನಗರದ ನಿವಾಸಿ ಗಾದಿಲಿಂಗನಗೌಡ (31) ಅವರು ಹೈದಾರಾರಬಾದ್ನಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ನಿಧನಕ್ಕೆ ಕೃಷ್ಣಾರೆಡ್ಡಿ, ನಗರ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಗೋಪಿ ರಕ್ತ ಭಂಡಾರದ ಗೋಪಾಲರೆಡ್ಡಿ, ರಾಮಮೂರ್ತಿ ನವಲಿ ಮತ್ತು ಗೆಳೆಯರು, ಬಂಧುಗಳು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.