ಬಳ್ಳಾರಿ

ಮಹಾತ್ಮರ ಮೌಲ್ಯಗಳ ಪರಿಚಯ ಅಗತ್ಯ

Published On :

ಕೂಡ್ಲಿಗಿ: ಇಂದಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರಂತಹ ಮಹಾತ್ಮರ ಜೀವನ ಮೌಲ್ಯಗಳ ಪರಿಚಯ ಅಗತ್ಯವಾಗಿದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಯಂತ್ ಪಂತರ್ ತಿಳಿಸಿದರು.
ಅವರು ಕೂಡ್ಲಿಗಿ ಸಮೀಪದ ಸಂಡೂರು ತಾಲೂಕಿನ ಗೌರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಜಗತ್ತಿನ ಅನ್ಯ ರಾಷ್ಟ್ರಗಳಲ್ಲಿ ಹಿಂದು ಪ್ರೇಮವನ್ನು ಪಸರಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ದೇಶದ ಪಠ್ಯಕ್ರಮದಲ್ಲಿ ಹೆಚ್ಚಾಗಿ ದೇಶಭಕ್ತಿ, ಮಹಾತ್ಮರ, ಆದರ್ಶ ಪುರುಷರ ಜೀವನ, ಸಾಹಸ, ಮಾನವೀಯ ಚಿಂತನೆಗೆ ಹೆಚ್ಚಿನ ಒತ್ತು ನೀಡುವಂಥ ಪಠ್ಯಗಳನ್ನು ಅಳವಡಿಸುವುದು ಉತ್ತಮ ಎಂದರು.
ಜಿ. ಹನುಮಂತ ಪ್ರಾಸ್ತಾವಿಕ ಮಾತನಾಡಿದರು. ಜಯಂತ್ ಪಂತರ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಕ್ಕೆಗುಂದಿ ನಾಗರಾಜ್, ಹೊಸಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ವಿನಾಯಕಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ದೇವೇಂದ್ರಪ್ಪ,  ಮುಖ್ಯಶಿಕ್ಷಕಿ ಲಕ್ಷ್ಮೀದೇವಿ, ಗ್ರಾಪಂ ಸದಸ್ಯ ಭೀಮಪ್ಪ, ಸೋವೇನಹಳ್ಳಿ ಪುರುಷೋತ್ತಮ, ಬೊಮ್ಮಗಟ್ಟ ವಿರೂಪಾಕ್ಷಿ, ಸುಬ್ಬಣ್ಣ, ಶಿಕ್ಷಕ ನಾಗಭೂಷಣ, ಎಂ. ಹುಲಿಕುಂಟೆ, ಟಿ.ಎಚ್. ಹುಲೇಶ್, ಎ. ತಿಪ್ಪೇಸ್ವಾಮಿ, ಓಬಣ್ಣ, ಪ್ರಶಾಂತ್, ಚಂದ್ರಪ್ಪ, ಶಿವಕುಮಾರ್, ಜಯರಾಮ್, ಎಚ್. ಹುಲಿರಾಜ್ ಇದ್ದರು. ಜಿ. ಶಿವಕುಮಾರ್ ನಿರ್ವಹಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.