ಬಳ್ಳಾರಿ

ಉತ್ಸವಕ್ಕಿಂದು ಸಮಾರೋಪ

Published On :

ಹಂಪಿ: ಉತ್ಸವದ ಸಮಾರೋಪ ಸಮಾರಂಭವು ಜ.12ರಂದು ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದ್ದು, ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮಾರೋಪ ಭಾಷಣ ಮಾಡುವರು. ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅಧ್ಯಕ್ಷತೆ ವಹಿಸುವರು.
ಸಚಿವ ಅಂಬರೀಷ್, ಜಿಪಂ ಅಧ್ಯಕ್ಷೆ ಶೋಭಾ ಬೆಂಡಗೇರಿ, ಸಂಸದರಾದ ಜೆ. ಶಾಂತಾ, ಶಿವರಾಮಗೌಡ, ಶಾಸಕರಾದ ಬಿ. ಶ್ರೀರಾಮುಲು, ಅನಿಲ್ ಎಚ್.ಲಾಡ್, ಈ. ತುಕಾರಾಮ್, ಎಲ್.ಬಿ.ಪಿ. ಭೀಮಾ ನಾಯ್ಕ, ಬಿ.ಎಂ. ನಾಗರಾಜ್, ಮೃತ್ಯುಂಜಯ ಜಿನಗಾ, ಅಮರನಾಥ ಪಾಟೀಲ್, ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಸಂಗನಬಸವ ಶ್ರೀ, ಗಾಯತ್ರಿ ಪೀಠದ ದಯಾನಂದ ಪುರಿ ಶ್ರೀ ಭಾಗವಹಿಸುವರು.
ಎಂ.ಪಿ. ಪ್ರಕಾಶ್ ವೇದಿಕೆ: ಸಂಜೆ 6ಕ್ಕೆ ಪಂಡಿತ್ ಮೈಸೂರಿನ ರಾಜೀವ್ ತಾರಾನಾಥ್ರ ಸರೋದ್ ವಾದನ, 6.30ಕ್ಕೆ ಮುಂಬೈನ ರಮಿಂದರ್ ಖುರಾನರ ಒಡಿಸ್ಸಿ ನೃತ್ಯ, 7ಕ್ಕೆ ಬೆಂಗಳೂರಿನ ಸಂಗೀತಾ ಕಟ್ಟಿ ಮತ್ತು ತಂಡದಿಂದ ಸಂಗೀತ-ನಿನಾದ (ನೃತ್ಯ ಗಾಯನ), 8 ಗಂಟೆಗೆ ಬೆಂಗಳೂರಿನ ಎಂ.ಪಿ. ಸುಮಾ ವಿಜಯ್ ಅವರ ನಿರ್ದೇಶನ ಮತ್ತು ಕೋರಿಯೋಗ್ರಾಫಿಯಲ್ಲಿ ಓಂಕಾರ್ ಕ್ರಿಯೇಷನ್ಸ್ರಿಂದ ಬುದ್ಧ ಚರಿತೆ ಕುರಿತು ನೃತ್ಯ ರೂಪಕ, 8.30ಕ್ಕೆ ಮುಂಬೈನ್ ಭಾರತಿ ಅಮೋಂಕರ್ ಅವರಿಂದ ಒಡಿಸ್ಸಿ ನೃತ್ಯ, 9 ಗಂಟೆಗೆ ಧಾರವಾಡದ ಸುಜಾತಾ ಗೌರವ್ ಕಮ್ಮಾರ್ ಅವರಿಂದ ಹಿಂದೂಸ್ತಾನಿ ಗಾಯನ, 10 ಗಂಟೆಗೆ ಶಿರಸಿಯ ವಿದುಷಿ ಸಹನಾ ಭಟ್ ಅವರಿಂದ ಭರತನಾಟ್ಯ ನೃತ್ಯ, 10.30ಕ್ಕೆ ಬೆಂಗಳೂರಿನ ಹೆಗ್ಗರ ಅನಂತ ಹೆಗಡೆ ಅವರು ಹಿಂದುಸ್ತಾನಿ ಗಾಯನ ನಡೆಯಲಿದೆ.
ಶ್ರೀ ವಿದ್ಯಾರಣ್ಯ ವೇದಿಕೆ: ಸಂಜೆ 6ಕ್ಕೆ ಬಳ್ಳಾರಿಯ ಕಾಳಿದಾಸ ಅವರಿಂದ ಮಾತನಾಡುವ ಮಂಗ, 6.30ಕ್ಕೆ ಅಭಿಷೇಕ್ ಮತ್ತು ಸಂಗಡಿಗರಿಂದ ಕುಚಿಪುಡಿ ನೃತ್ಯ, 7ಕ್ಕೆ ಬೆಂಗಳೂರಿನ ರಾಗಿಣಿ ನಾಗರಾಜ್ ಮತ್ತು ಸಂಗಡಿಗರಿಂದ ದಶಾವತಾರ ಕುರಿತು ನೃತ್ಯರೂಪಕ, 7.30ಕ್ಕೆ ಕೊಪ್ಪಳದ ಯಮನೂರಪ್ಪ ಎಸ್. ಭಜಂತ್ರಿ ಅವರಿಂದ ತತ್ವಪದ, 8ಕ್ಕೆ ಹೊಸಪೇಟೆಯ ಕೇಶವ್ರಾಜ್ ಅವರಿಂದ ಕೊಳಲು ವಾದನ, 8.30ಕ್ಕೆ ಧಾರವಾಡದ ಜಯದೇವಿ ಜಂಗಮಶೆಟ್ಟಿ ಅವರಿಂದ ವಚನಗಾಯನ, 9 ಗಂಟೆಗೆ ಹೊಸಪೇಟೆಯ ಇಮ್ತಿಯಾಜ್ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, 9.30ಕ್ಕೆ ಬೆಂಗಳೂರಿನ ನಟೇಶ್ವರ ನೃತ್ಯ ಶಾಲೆಯಿಂದ ಸತೀಶ್ ಬಾಬು ಅವರ ನಿರ್ದೇಶನದಲ್ಲಿ ಗೊಂಬೆ ವೈಭವ, 10ಕ್ಕೆ ಬೆಂಗಳೂರಿನ ವೆಂಕಟೇಶ್ ಅಲ್ಕೋಡ್ರಿಂದ ವಚನಗಾಯನ, 10.30ಕ್ಕೆ ಹೊಸಪೇಟೆಯ ಜೀವನ್ ವಾಲಿಕರ್ ಮತ್ತು ಹಡಗಲಿಯ ಪರಶುರಾಮ್ ಅಂಗೂರ್ರಿಂದ ಜನಪದ ಸಂಗೀತ, 11ಕ್ಕೆ ಬೆಂಗಳೂರಿನ ಬಿ.ಕೆ. ಅನಂತಕುಮಾರ್ ಅವರಿಂದ ಕೊಳಲು ವಾದನ, 11.30ಕ್ಕೆ ಬೆಂಗಳೂರಿನ ನಾಟ್ಯಾಂಜಲಿ ಟ್ರಸ್ಟ್ ಇವರಿಂದ ಎ. ಅಶೋಕ್ ಕುಮಾರ್ ಅವರ ನಿರ್ದೇಶನದಲ್ಲಿ ಶಕ್ತಿ ನೃತ್ಯ ರೂಪಕ, 12ಕ್ಕೆ ಚಿತ್ರದುರ್ಗದ ಜಮುರಾ ಸುತ್ತಾಟ ಅವರಿಂದ ತಲ್ಲಣಿಸದಿರುವ ಕಂಡ್ಯಾ ತಾಳು ಮನವೆ ಕುರಿತು ನಾಟಕ ಪ್ರದರ್ಶನ  ನಡೆಯಲಿದೆ.
ಶ್ರೀ ಹಕ್ಕ-ಬುಕ್ಕ ವೇದಿಕೆ: ಸಂಜೆ 3ಕ್ಕೆ ನಡೆಯಲಿರುವ ವಿಕಲಚೇತನರ ಉತ್ಸವದಲ್ಲಿ ಬಳ್ಳಾರಿ ಕೆ. ದೊಡ್ಡಬಸವ ಗವಾಯಿಗಳ ಸುಗಮ ಸಂಗೀತ. 3.30ಕ್ಕೆ ಹೊಸಪೇಟೆ ಎಸ್. ಪುಂಡಲೀಕ್ರ ಹಿಂದುಸ್ತಾನಿ ಗಾಯನ, 3.45ಕ್ಕೆ ಬಳ್ಳಾರಿ ಕಿವುಡ-ಮೂಕ ಶಾಲೆಯಿಂದ ಸಮೂಹ ನೃತ್ಯ, 4.15ಕ್ಕೆ ಹೊಸಪೇಟೆ  ಸಾಗರ್ ಹುಸೇನ್ ಪೀರ್ರ ತಬಲಾ ವಾದನ, 4.45ಕ್ಕೆ ಬಳ್ಳಾರಿ ನಿರಾಶ್ರಿತ ಪರಿಹಾರ ಕೇಂದ್ರದಿಂದ ಸಂಗೀತ ಕಾರ್ಯಕ್ರಮ. 4 ವೇದಿಕೆಗಳ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 2.30ಕ್ಕೆ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಮುಖ್ಯ ವೇದಿಕೆ ವರೆಗೆ ಜನಪದ ವಾಹಿನಿ ಕಾರ್ಯಕ್ರಮ. ಹೊಸಪೇಟೆ ನಾರಾಯಣಪ್ಪ ತಂಡದಿಂದ ನಾಗಸ್ವರ, ಮಲಪನಗುಡಿಯ ಪ್ರಕಾಶ್ ತಂಡದಿಂದ ಡೊಳ್ಳು ಕುಣಿತ, ಕಂಪ್ಲಿಯ ಶಿಕಾರಿ ರಾಮು ಮತ್ತು ತಂಡದಿಂದ ತಾಷಾರಂಡೋಲ್, ಕೂಡ್ಲಿಗಿ ತಾಲೂಕಿನ ಬೇವೂರಿನ ನಾರಪ್ಪ ಮತ್ತು ತಂಡದಿಂದ ನಂದಿ ಧ್ವಜ, ಇಮಡಾಪುರದ ತಿಪ್ಪೇರುದ್ರಪ್ಪ ಮತ್ತು ತಂಡದಿಂದ ಉರುಮೆ ವಾದ್ಯ, ಕೆ. ರಾಯಾಪುರ ವಿ.ಎಸ್. ನಾಗಲಿಂಗಪ್ಪ ಮತ್ತು ತಂಡದಿಂದ ಕೀಲುಕುದುರೆ ಹಾಗೂ ಕುರಿಹಟ್ಟಿಯ ಸತ್ಯಪ್ಪ ಅವರಿಂದ ಕಹಳೆ ವಾದನ, ಸಂಡೂರು ತಾಲೂಕಿನ ಭುಜಂಗನಗರ ರೇವಣ್ಣಸಿದ್ಧಯ್ಯ ಸ್ವಾಮಿ ಅವರು ವೀರಭದ್ರನ ಕುಣಿತ, ಚೋರನೂರಿನ ಅಂಜಿನಪ್ಪ ಅವರಿಂದ ಕಹಳೆ ವಾದನ ಹಾಗೂ ಹಳೇದರೋಜಿಯ ಮಲ್ಲಿಕಾರ್ಜುನಪ್ಪ ಮತ್ತು ತಂಡದಿಂದ ಹಗಲುವೇಷ ಹಾಗೂ ಅಗಸನೂರಿನ ರಾಮಪ್ಪ ಮತ್ತು ತಂಡದಿಂದ ತಮಟೆ ವಾದನ, ಮಂಡ್ಯ ಜಿಲ್ಲೆಯ ಕಾರಸವಾಡಿಯ ಸಂತಕಸಲಕೆರಿಯ ಪಿ. ಗಂಗಾಧರ ಮತ್ತು ತಂಡದಿಂದ ಗೊಂಬೆ ಕುಣಿತ ಹಾಗೂ ಮದ್ದೂರು ತಾಲೂಕಿನ ಚಿಕ್ಕ ಅರಸಿನಕೆರೆಯ ಚಿಕ್ಕಬೋರಯ್ಯ ಮತ್ತು ತಂಡದಿಂದ ಪೂಜಾಕುಣಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚೆನ್ನಪಟ್ಟಣ ತಾಲೂಕು ನಾಗವಾರದ ಜನಧೀಶ್ ಮತ್ತು ತಂಡದಿಂದ ಪಟ ಕುಣಿತ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತುಬಿನಕೆರೆ ಕಾಸರಯ್ಯ ಮತ್ತು ತಂಡದಿಂದ ಸೋಮನ ಕುಣಿತ ಹಾಗೂ ವಿ. ಮಂಜುನಾಥ್ ಮತ್ತು ತಂಡದಿಂದ ವೀರಗಾಸೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಹಳ್ಳಿಯ ಬಸವರಾಜ್ ಗೌರಾಪುರ ಅಂಗಡಿ ಮತ್ತು ತಂಡದಿಂದ ಮಹಿಳಾ ವೀರಗಾಸೆ, ಹಡಗಲಿ ತಾಲೂಕಿನ ಮೈಲಾರದ ಮಾಲತೇಶಪ್ಪ ಮತ್ತು ತಂಡದಿಂದ ಗೊರವರ ಕುಣಿತ ಹಾಗೂ ಮೆಹಬೂಬ್ ಅಲಾಯಿ ಹೆಜ್ಜೆ ಮೇಳ ಅವರಿಂದ ಅಲಾಯಿ ಹೆಜ್ಜೆ ಮೇಳ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಂಸಾಳೆ ಮಹದೇವಯ್ಯ ಮತ್ತು ತಂಡದಿಂದ ಕಂಸಾಳೆ, ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಬೀರಲಿಂಗೇಶ್ವರ ಡೊಳ್ಳಿನ ಕಲಾ ಸಂಘ ಇವರಿಂದ ಡೊಳ್ಳು ಕುಣಿತ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.