ಶುಲ್ಕ ರದ್ದು; ಜನರ ಸ್ಪಂದನೆ
ಪ್ರವೇಶಾತಿ ಶುಲ್ಕವನ್ನು ರದ್ದುಪಡಿಸಿರುವುದು ಹಾಗೂ ಕೆಲವೊಂದು ನ್ಯೂನತೆಯಲ್ಲಿ ಸರಿಪಡಿಸುವುದರೊಂದಿಗೆ ಹಂಪಿ ಉತ್ಸವ ಜನರೋತ್ಸವದತ್ತ ಹೆಜ್ಜೆ ಹಾಕಿದೆ. ಜಿಲ್ಲಾಡಳಿತ ತನ್ನ ಪಟ್ಟು ಸಡಿಲಿಸಿದ ಹಿನ್ನೆಲೆಯಲ್ಲಿ ಆರಂಭದ ದಿನಕ್ಕೆ ಹೋಲಿಸಿಕೊಂಡರೆ ಕೊಂಚ ಜನರಲ್ಲಿ ಹಂಪಿ ಉತ್ಸವದ ಬಗ್ಗೆ ಉತ್ಸಾಹ ಇತ್ತು.
ಹಂಪಿ ಉತ್ಸವದಲ್ಲಿ ವಸ್ತುಪ್ರದರ್ಶನ, ಕರಕುಶಲ ಪ್ರದರ್ಶನ ಸೇರಿದಂತೆ ಇತರ ಕಡೆಗಳಲ್ಲಿ ಹಾಗೂ ಶ್ರೀಕೃಷ್ಣದೇವರಾಯ ವೇದಿಕೆ ಹಾಗೂ ಎಂ.ಪಿ. ಪ್ರಕಾಶ್ ವೇದಿಕೆಗೆ ಮಾತ್ರ ಗೋಲ್ಡಾನ್ ಪ್ಲಾಟಿನಮ್ ಕಾರ್ಡ್ ಮಾಡಲಾಗಿತ್ತು. ಆದರೆ, ಇದು ಜನಸಾಮಾನ್ಯರಿಗೆ ಹಂಪಿ ಉತ್ಸವಕ್ಕೆ ಟಿಕೆಟ್ ಮಾಡಿದ್ದಾರೆ ಎಂಬ ಸಂದೇಶ ಹೋಗಿದ್ದರಿಂದ ಆರಂಭದ ದಿನವೇ ಹಂಪಿ ಉತ್ಸವವು ಕೊಂಚ ಜನರ ಉತ್ಸವವಾಗದೆ ಬಿಕೋ ಎನ್ನುವಂತಾಗಿತ್ತು.
ನಮಗೆ ಪಾಸ್ ಸಿಕ್ಕಿಲ್ಲ, ದೂರದ ಹಂಪಿಗೆ ಹೋಗಿ, ಅಲ್ಲಿ ಕಾರ್ಯಕ್ರಮ ನೋಡಲು ಬಿಡಲಿಲ್ಲ ಎಂದರೆ ಹೇಗೆ ಎಂದು ಕೆಲವರು ಉತ್ಸವಕ್ಕೆ ಹಿಂದೇಟು ಹಾಕಿದ್ದುಂಟು. ಇದರಿಂದಾಗಿ ಈ ಬಾರಿ ಆರಂಭದ ದಿನವೇ ಉತ್ಸವದಲ್ಲಿ ಜನರ ಕಡಿಮೆಯಾಗಲು ಕಾರಣವಾಗಿತ್ತು.
ಮುಖ್ಯಮಂತ್ರಿಗಳು ಜನರ ನಿರುತ್ಸಾಹದ ಬಗ್ಗೆ ಅರ್ಥವಾದರೂ ಅದನ್ನು ಹೊರಗಡೆ ಹಾಕದೆ, ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಪ್ರವೇಶಾತಿ ಶುಲ್ಕ ರದ್ದುಪಡಿಸಲಾಗುತ್ತದೆ ಎಂದು ಹೇಳುತ್ತಾ, ಇನ್ನು ಪ್ರಮುಖ ವೇದಿಕೆಗಳಲ್ಲಿ ಆಸನಗಳು ಖಾಲಿಯಿರುವ ಸಂದರ್ಭದಲ್ಲಿ ಎಲ್ಲಾ ದ್ವಾರಗಳ ಮೂಲಕ ಜನರಿಗೆ ಬರುವುದಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದ್ದು, ಜನರ ಕೊರತೆ ಇದೆ ಎಂಬುದನ್ನು ಪರೋಕ್ಷವಾಗಿ ಎತ್ತಿ ತೋರಿಸಿತ್ತು. ಇದನ್ನು ಮನಗಂಡ ಜಿಲ್ಲಾಡಳಿತವು ಮುಖ್ಯಮಂತ್ರಿಗಳ ಆದೇಶದಂತೆ ಎರಡನೇ ದಿನವಾದ ಶನಿವಾರ ವಸ್ತುಪ್ರದರ್ಶನ, ಕರಕುಶಲ ಪ್ರದರ್ಶನ ಸೇರಿದಂತೆ ಕೆಲವು ಕಡೆಗಳಲ್ಲಿ ಪ್ರವೇಶಾತಿ ಶುಲ್ಕ ರದ್ದುಪಡಿಸಿದ್ದರಿಂದ ಸ್ಪಂದನೆ ವ್ಯಕ್ತವಾಯಿತು.
ಗಮನ ಸೆಳೆದ ಡಿಸಿ ಮಕ್ಕಳ ಡ್ಯಾನ್ಸ್: ಬಳ್ಳಾರಿಯ ಕೃಷ್ಣ ದೇವಸ್ಥಾನದ ಎದುರುಗಡೆ ಇರುವ ಎಸಿಬಿಡಿ ಎನಿ ಬಡಿ ಕ್ಯಾನ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನಿಶಾನ್ ಮತ್ತು ಇಹಾನ್ ಅವರು ಹಿಂದಿ ಹಾಡಿಗೆ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಬಿಸ್ವಾಸ್ ಅವರ ಪತ್ನಿ ಮೈತ್ರಿ ಬಿಸ್ವಾಸ್ ಅವರೇ ಖುದ್ದಾಗಿ ಮಕ್ಕಳಿಗೆ ಡ್ರೆಸ್ ಹಾಕಿಸಿಕೊಂಡು ಬಂದು, ಡ್ಯಾನ್ಸ್ ಮಾಡಿಸಿದ್ದು ವಿಶೇಷವಾಗಿತ್ತು.
ಜಿಲ್ಲಾಧಿಕಾರಿಗಳು ಮಕ್ಕಳು ಡ್ಯಾನ್ಸ್ ಮಾಡುತ್ತಿದ್ದಾರೆ ಎಂದಾಕ್ಷಣ, ಜನರು ಕುತೂಹಲದಿಂದ ವೀಕ್ಷಿಸಿದರು. ಆರಂಭ ದಿನ ಡ್ಯಾನ್ಸ್ ಮಾಡಲು ರು. 20 ನಿಗದಿಪಡಿಸಲಾಗಿತ್ತು. ಶನಿವಾರದಿಂದ ಉಚಿತ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು.
ಕುಸ್ತಿ ಅಖಾಡಕ್ಕೆ ಉತ್ತಮ ಸ್ಪಂದನೆ: ಆರಂಭದ ದಿನವಾದ ಶುಕ್ರವಾರ ಹಂಪಿಯಲ್ಲಿ ಬೆಳಗ್ಗೆ ಹೊತ್ತು ಜನರ ಕೊರತೆ ಎದ್ದು ಕಾಣುತ್ತಿತ್ತು. ಶನಿವಾರ ವಸ್ತು ಪ್ರದರ್ಶನ, ಆಹಾರ ಮೇಳೆ, ವಿಜ್ಞಾನ ಮೇಳ, ಎನಿಬಡಿ ಕ್ಯಾನ್ ಡ್ಯಾನ್ಸ್ನಲ್ಲಿ ಪ್ರೇಕ್ಷಕರು ಶುಕ್ರವಾರಕ್ಕಿಂತ ಕೊಂಚ ಹೆಚ್ಚಿಗೆ ಕಂಡು ಬಂದರು. ಇನ್ನು ವೇದಿಕೆಯ ಕಾರ್ಯಕ್ರಮಗಳಲ್ಲಿ ಆಗಮಿಸುವ ಜನರ ಮೇಲೆ ಉತ್ಸವದ ಯಶಸ್ಸು ನಿಂತಿದೆ.
ಶುಕ್ರವಾರ ಬದಲಾಗಿ ಶನಿವಾರ ಕುಸ್ತಿ ಅಖಾಡ ನಡೆಯಿತು. 70ಕ್ಕೂ ಹೆಚ್ಚು ಕುಸ್ತಿ ಪಟುಗಳಿದ್ದು, ನೂರಾರು ಕುಸ್ತಿ ಆಸಕ್ತರು ಪಾಲ್ಗೊಂಡಿದ್ದರು. ಇನ್ನು ಕವಿ ಕಾವ್ಯ ಗಾಯನ ಕೂಡವು ಯಶಸ್ವಿಯಾಗಿ ನಡೆಯುವ ಮೂಲಕ ಹಂಪಿ ಉತ್ಸವಕ್ಕೆ ನಿರುತ್ಸಾಹ ಎಂಬ ಭಯದಿಂದಲೆ ಇದ್ದ ಜಿಲ್ಲಾಡಳಿತಕ್ಕೆ ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು.
ನಿಟ್ಟುಸಿರು ಬಿಟ್ಟ ಅಧಿಕಾರಿಗಳು: ಶುಕ್ರವಾರ ಜನರ ಕೊರತೆಯಿಂದಾಗಿ ಮುಖ್ಯವೇದಿಕೆ ಸೇರಿದಂತೆ ವಿವಿಧ ವೇದಿಕೆಗಳು ಬಿಕೋ ಎನ್ನುತ್ತಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿತ್ತು.
ಹಲವು ದಿನಗಳಿಂದ ಹಂಪಿ ಉತ್ಸವಕ್ಕೆ ಸಿದ್ಧತೆಗೊಳಿಸಿ, ಕೋಟ್ಯಾಂತರ ರು. ಖರ್ಚು ಮಾಡಿದರೂ, ಉತ್ಸವಕ್ಕೆ ಸರಿಯಾದ ಜನರ ಸ್ಪಂದನೆ ಇಲ್ಲ ಎಂಬ ಕೊರಗು ಹೊರಗಡೆ ಹೇಳದಿದ್ದರೂ ಅಧಿಕಾರಿಗಳಿಗೆ ಒಳಗಡೆ ಇತ್ತು. ಆದರೆ, ಶನಿವಾರ ಬೆಳಗ್ಗೆ ಕೊಂಚ ಜನರು ಉತ್ಸವಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಕೊಂಚ ನಿಟ್ಟುಸಿರುವ ಬಿಡುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

