30ರಿಂದ ಮಕ್ಕಳ ರಂಗಹಬ್ಬ: ಯಲ್ಲನಗೌಡ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 21
ಮಕ್ಕಳಲ್ಲಿ ನಾಟಕ ಕಲೆ ಪ್ರೋತ್ಸಾಹಿಸುವ ಉದ್ದೇಶದಿಂದ ರಂಗಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಮಕ್ಕಳ ರಂಗಹಬ್ಬ- 2014ನ್ನು ಜ. 30ರಿಂದ 3 ದಿನಗಳ ಕಾಲ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಜಂಗಮ ಗ್ರಾಮೀಣಭಿವೃದ್ಧಿ ಸಂಸ್ಥೆ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಕಣ್ಣಾಜಿ ಕೃಷ್ಣಾರೆಡ್ಡಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಹಬ್ಬ ಹಮ್ಮಿಕೊಳ್ಳಲಾಗಿದೆ. 15 ವರ್ಷದೊಳಗಿನ ಮಕ್ಕಳು ಐತಿಹಾಸಿಕ, ಸಾಮಾಜಿಕ ಹಾಗೂ ಪೌರಾಣಿಕ ನಾಟಕ ಪ್ರದರ್ಶನ ನೀಡಲಿದ್ದಾರೆ. ನಾಟಕದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು, ಮಕ್ಕಳ ಹೊಸ ತಂಡ, ಹೊಸ ನಿರ್ದೇಶಕರ ಪರಿಚಯ ಕಾರ್ಯಕ್ರಮ ಇದಾಗಿದೆ. ಮಕ್ಕಳ ರಂಗತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ರಂಗ ಕಲಾವಿದರಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಇನ್ನು 8 ನಾಟಕಗಳು ಪ್ರದರ್ಶನ ಕಾಣಲಿವೆ ಎಂದರು.
ನಾಟಕ ಪ್ರದರ್ಶನ: ಹೀರದ ಸೂಗಮ್ಮ ಶಾಲೆ ವಿದ್ಯಾರ್ಥಿಗಳಿಂದ ಭಾವೈಕ್ಯತೆ ನಾಟಕ, ಚೇಳ್ಳಗುರ್ಕಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಆದರ್ಶ ನಾಟಕ, ಸರ್ಕಾರಿ ಬಾಲಮಂದಿರ ಶಾಲೆಯಿಂದ ದಾರ್ಶನಿಕರ ದಾರಿ, ಯರಂಗಳಿಗಿ ಮೊರಾರ್ಜಿ ವಸತಿ ಶಾಲೆಯಿಂದ ಭಕ್ತಪ್ರಹ್ಲಾದ, ಕಪ್ಪಗಲ್ ಸರ್ಕಾರಿ ಶಾಲೆ ಮಕ್ಕಳಿಂದ ಅರಿವು, ಸಂಗನಕಲ್ ವಿಜ್ಡಂ ಲ್ಯಾಂಡ್ ಶಾಲೆಯಿಂದ ಸಂಗೊಳ್ಳಿ ರಾಯಣ್ಣ ಹಾಗೂ ಅಕ್ಷರ ಜಾತ್ರೆ ಮತ್ತು ವಾಸವಿ ಶಾಲೆ ವಿದ್ಯಾರ್ಥಿಗಳಿಂದ ಒಗ್ಗಟ್ಟಿನಲ್ಲಿ ಬಲ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಲಾವಿದರಾದ ಆದೋನಿ ವೀಣಾ, ಬಳ್ಳಾರಿಯ ಕೊಟ್ನೆಕಲ್ ರಂಗಮ್ಮ, ಶಕ್ತಿನಗರದ ರಂಗಸಂಘಟಕ ನಾಗಭೂಷಣ ನಾಗಳ್ಳಿ, ಚಿತ್ರದುರ್ಗದ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಅವರಿಗೆ ಕಾರ್ಯಕ್ರಮದಲ್ಲಿ ರಂಗಜಂಗಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು. ರಂಗಹಬ್ಬಕ್ಕೆ ಜ. 30ರಂದು ಹಿರಿಯ ರಂಗಕರ್ಮಿ ಧಾರವಾಡದ ಬಸಲಿಂಗಯ್ಯ ಹಿರೇಮಠ್ ಚಾಲನೆ ನೀಡಲಿದ್ದಾರೆ. ಹಿರಿಯ ರಂಗಚಿಂತಕ ಬಾಗಲಕೋಟೆಯ ಬಿ.ಆರ್. ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಎನ್. ವೀರಭದ್ರಗೌಡ, ಬಳ್ಳಾರಿ ಡಾಟ್ ಕಾಂನ ಬಸವರಾಜ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
2ನೇ ದಿನದ ನಾಕಟವನ್ನು ಕೊಪ್ಪಳದ ವೃತ್ತಿರಂಗ ಕಂಪನಿ ಮಾಲೀಕ ರೇವಣಸಿದ್ಧಯ್ಯ ತಾತ ಉದ್ಘಾಟಿಸಲಿದ್ದಾರೆ. ಡಾ. ಅರವಿಂದ ಪಾಟೀಲ್, ವಿಜ್ಡಂ ಲ್ಯಾಂಡ್ ಶಾಲೆ ಮುಖ್ಯಸ್ಥ ಕಟ್ಟೇಗೌಡ, ಪತ್ರಕರ್ತ ಸಿ. ಮಂಜುನಾಥ ಭಾಗವಹಿಸುವರು. ಫೆ. 1ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಧಾರವಾಡದ ಜಾನಪದ ತಜ್ಞ ಕೆ.ಆರ್. ದುರ್ಗದಾಸ್, ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ವೈ. ದೊಡ್ಡಬಸಪ್ಪ, ವೀರೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

