ಪ್ರಪಂಚದಲ್ಲಿ ಭಾರತ ಪುಣ್ಯಭೂಮಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 31
ಪ್ರಪಂಚದಲ್ಲೇ ಭಾರತ ಪುಣ್ಯಭೂಮಿಯಾಗಿದೆ. ಧರ್ಮದ ಬಗ್ಗೆ ಅಪಾರವಾದ ಅಭಿಮಾನ ಮತ್ತು ಶ್ರದ್ಧೆಯನ್ನು ದೇಶದ ಜನ ಹೊಂದಿದ್ದು, ಪ್ರಪಂಚಕ್ಕೆ ಮಾದರಿ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಭಗವತ್ಪಾದಂಗಳವರು ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಶುಕ್ರವಾರ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಗುರು ವಂದನ, ಈಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ ಮತ್ತು ದೇವಸ್ಥಾನದ ಗೋಪುರ ಕಳಸಾರೋಹಣ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬರು ದ್ವೇಷರಹಿತವಾಗಿ ಸಹಕಾರ ಮನೋಭಾವದಿಂದ ಜೀವನ ಸಾಗಿಸಬೇಕು. ಇನ್ನೊಬ್ಬರಲ್ಲಿ ಬೇಡದೆ, ಅಪಕಾರ ಮಾಡದೆ ಸ್ವಂತ ಶ್ರಮದಿಂದ ಬದುಕಲು ಕಲಿಯಬೇಕು ಎಂದು ಹೇಳಿದರು.
ಮರಿಯಮ್ಮನಹಳ್ಳಿಯ ಕಣವಿ ಬಸಾಪುರದ ಅರಳಿಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗರಗ-ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮಿಗಳು ಸಭೆಯಲ್ಲಿ ಮಾತನಾಡಿದರು.
ಉಜ್ಜಯಿನಿ, ಕೊಟ್ಟೂರು, ಹನಸಿ, ಉತ್ತಂಗಿ ಕ್ರಿಯಾಮೂರ್ತಿ ಶಂಕರಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ, ಮಳೆ ಶಿವಯೋಗಿ ಸ್ವಾಮೀಜಿ ಭಾಗವಹಿಸಿದ್ದರು.
ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ.ಎಸ್. ಮಲ್ಲಿಕಾರ್ಜುನ, ಸ್ಥಳೀಯ ಮುಖಂಡರಾದ ವೀರಭದ್ರಯ್ಯ, ಶಿವಶಂಕ್ರಯ್ಯ, ಎಂ. ವಿಶ್ವನಾಥ ಶೆಟ್ಟಿ, ಬಿ.ಎಂ.ಎಸ್. ಚಂದ್ರಶೇಖರಯ್ಯ, ಎಸ್. ಕೃಷ್ಣನಾಯ್ಕ, ಕೆ. ಶಿವಮೂರ್ತಿ, ಡಾ. ಜಿ.ಎಂ. ಸೋಮೇಶ್ವರ, ಕರಣಂ ಕಮಲಾಕ್ಷಮ್ಮ ಶಾಂತಮೂರ್ತಿ, ಜಿಪಂ ಮಾಜಿ ಸದಸ್ಯ ಎಲ್. ಮಂಜುನಾಥ, ಮುಖಂಡರಾದ ಬಿ. ವಿಜಯಕುಮಾರ್, ಕನಳಪ್ಪ, ಸರ್ಪಭೂಷಣಸ್ವಾಮಿ, ಗುಂಡ ಈರಣ್ಣ, ಗರಗ ಈರಣ್ಣ, ಕಂಪ್ಲಿಯ ಶಶಿಧರ ಶಾಸ್ತ್ರಿ, ಬಿ.ಎಂ.ಎಸ್. ಚನ್ನವೀರಯ್ಯ, ಸಂಗಮನಾಥ, ಬಿ.ಎಂ.ಎಸ್. ಮೃತ್ಯಂಜಯ, ಜಿ.ಎಂ. ಕೊಟ್ರೇಶ್, ಎಸ್ಎಲ್ಆರ್ ಕಾರ್ಖಾನೆಯ ಪಾಟೇಲ್, ಗೌಡರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಉಜ್ಜಯಿನಿ ಸದ್ಧರ್ಮ ಸಿದ್ಧಲಿಂಗ ರಾಜದೇಶೀಕೇಂದ್ರ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಯಿಂದ ಆರಂಭಗೊಂಡು ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ, ಕಳಸ, ನಂದಿಕೋಲು ಸೇರಿದಂತೆ ಮಂಗಳವಾದ್ಯಗಳು ಹಾಗೂ ಜನಪದ ಕಲಾತಂಡಗಳು ಪಾಲ್ಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

