ಎಂಇಎಸ್ ಪ್ರತಿಕೃತಿ ದಹನ
ಹಗರಿಬೊಮ್ಮನಹಳ್ಳಿ: ವಿವಾದಾತ್ಮಕ ಮಹಾರಾಷ್ಟ್ರ ನಾಮಫಲಕ ತೆರವಿಗೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕು ಯಳ್ಳೂರಿನಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸುತ್ತಿರುವ ಪುಂಡಾಟ, ಪತ್ರಕರ್ತರು, ಪೊಲೀಸರ ಮೇಲಿನ ಹಲ್ಲೆ ಖಂಡಿಸಿ, ಎಂಇಎಸ್ ಗೂಂಡಾಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಕರವೇ (ಸ್ವಾಭಿಮಾನಿ ಕೃಷ್ಣೆ ಗೌಡ ಬಣ) ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ಮಧ್ಯಾಹ್ನ ಪಟ್ಟಣದಲ್ಲಿ ಎಂಇಎಸ್ ಪ್ರತಿಕೃತಿಗೆ ಬೆಂಕಿಹಚ್ಚಿ ಪ್ರತಿಭಟಿಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಕರವೇ ಕಾರ್ಯಕರ್ತರು ಪಟ್ಟಣದ ರಾಮನಗರದ ಶ್ರೀಈಶ್ವರ ದೇವಸ್ಥಾನ ಆವರಣದಿಂದ ರೈಲ್ವೆ ಗೇಟ್, ಬೈಪಾಸ್, ಬಸವೇಶ್ವರ ಬಜಾರ್, ಬಸವ ಸರ್ಕಲ್ ಮೂಲಕ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಸವ ಸರ್ಕಲ್ ಬಳಿ ಎಂಇಎಸ್ ಪ್ರತಿಕೃತಿಗೆ ಬೆಂಕಿಹಚ್ಚಿ ಎಂಇಎಸ್ ಸಂಘಟನೆ ನಿಷೇಧಿಸಿ, ಎಂಇಎಸ್ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ತಾಲೂಕಾಧ್ಯಕ್ಷ ಇ. ಭರತ್, ಸ್ವಾಭಿಮಾನಿ ಕರವೇ ಹಿರಿಯ ಮುಖಂಡರಾದ ಅಮಿನುದ್ದೀನ್, ಸರ್ದಾರ್ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ. ರಾಘವೇಂದ್ರ, ಬಂಡಿಹಳ್ಳಿಗುರು, ತಾಲೂಕು ಘಟಕದ ಉಪಾಧ್ಯಕ್ಷ ಕೆ.ಎಂ. ಗಿರೀಶ್, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಸಂತೋಷ್, ತಳವಾರ ರಾಘವೇಂದ್ರ, ತಟ್ಟಿ ವಾದಿರಾಜ, ವಿಶ್ವನಾಥ, ಎಚ್.ಎಂ. ಶ್ರೀಧರ್, ವಕ್ತಾರ ಎಂ. ಅರವಿಂದ್, ನಾಣಿಕೇರಿ ಮಂಜು, ಯಡ್ರಮ್ಮನಹಳ್ಳಿ ದುರುಗಪ್ಪ, ಸೊನ್ನ ಕೊಟ್ರೇಶ್, ತಂಬ್ರಹಳ್ಳಿ ಗಿರೀಶ್, ದಯಾನಂದ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

