ರು. 15 ಲಕ್ಷದ ಅಕ್ರಮ ಮರಳು ವಶ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 29
ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳಿನ ಮೇಲೆ ಲೋಕೋಪಯೋಗಿ ನೇತೃತ್ವದ ದಾಳಿ 5ನೇ ದಿನವೂ ಮುಂದುವರಿದಿದೆ.
ಲೋಕೋಪಯೋಗಿ, ಪೊಲೀಸ್, ಕಂದಾಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಆಕಸ್ಮಿಕ ದಾಳಿಗೆ ಪ್ರಭಾವಿ ಮರಳು ದಂಧೆಕೋರರು ಬೆದರಿದ್ದು, ಯಾವ ಗ್ರಾಮಗಳಲ್ಲಿಯೂ ಮರಳಿನ ಮೇಲೆ ದಾಳಿ ನಡೆದಾಗ ಯಾರು ಅಡ್ಡಿಪಡಿಸುವ ಗೋಜಿ ಹೋಗಿಲ್ಲ.
ತುಂಗಭದ್ರಾ ನದಿ ತೀರ ಬತ್ತುತ್ತಿರುವ ಸಂದರ್ಭ ಅಕ್ರಮ ಮರಳು ದಂಧೆಕೋರರು ಲಕ್ಷಾಂತರ ರು.ಗಳ ವೆಚ್ಚದಲ್ಲಿ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ರಾತ್ರೊರಾತ್ರಿ ಮರಳು ಸಂಗ್ರಹಿಸಿ ಮರಳಿಗೆ ಬಂಗಾರದ ಬೆಲೆ ಬಂದಾಗ ಮಾರಾಟ ಮಾಡಿ ಸಾಕಷ್ಟು ಹಣ ಗಳಿಸಬಹುದೆಂಬ ಲೆಕ್ಕಾಚಾರದಲ್ಲಿ ದಂಧೆಕೋರರಿಗೆ ದೊಡ್ಡ ಬಿಸಿ ಮುಟ್ಟಿದೆ.
ಅಕ್ರಮ ಮರಳು ದಂಧೆಕೋರರ ಮೇಲೆ ದಾಳಿ ಮಾಡಿರುವ ಸಂದರ್ಭದಲ್ಲಿ ಕೆಲವು ಪ್ರಭಾವಿ ಮುಖಂಡರು ಸಚಿವರ ಬಳಿ ಸಾಕಷ್ಟು ಲಾಬಿ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಆದರೆ, ಲೋಕೋಪಯೋಗಿ ಹಾಗೂ ಇತರೆ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಈವರೆಗೂ ಯಾವುದೇ ಒತ್ತಡಗಳು ಬಂದಿಲ್ಲ. ತಮ್ಮ ಪಾಡಿಗೆ ತಾವು ಅಕ್ರಮ ಮರಳು ದಂಧೆಕೋರರ ವಿರುದ್ಧ ದಾಳಿ ಮುಂದುವರಿಸಿದ್ದಾರೆ.
ತಾಲೂಕಿನ ನದಿ ತೀರದ ಮುದ್ಲಾಪುರ, ಮುದ್ಲಾಪುರ ಸಣ್ಣ ತಾಂಡಾ, ಮುದ್ಲಾಪುರ ದೊಡ್ಡ ತಾಂಡಾ, ಕಂದಗಲ್, ಸೋವೇನಹಳ್ಳಿ, ಸೋವೇನಹಳ್ಳಿ ಪ್ಲಾಟ್, ಕೊಂಬಳಿ, ಕೊಂಬಳಿ ನವನಗರ, ಕಾಗನೂರು, ಮದಗಲಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ರಮ ಮರಳಿನ ಮೇಲೆ ದಾಳಿ ಮಾಡಿದ್ದಾರೆ.
ಕಾಗನೂರು ಗ್ರಾಮದ ಬಹುತೇಕ ಕಡೆಗಳಲ್ಲಿ ಭಾರಿ ಪ್ರಮಾಣದ ಮರಳನ್ನು ಸಂಗ್ರಹಿಸಿರುವುದನ್ನು ಕಂಡ ಅಧಿಕಾರಿಗಳು ತಬ್ಬಿಬ್ಬಾಗಿ ಆಶ್ಚರ್ಯ ವ್ಯಕ್ತಪಡಿಸಿ, ಸರ್ಕಾರವೂ ಇಷ್ಟು ಪ್ರಮಾಣದ ಮರಳನ್ನು ಕಡಿಮೆ ದಿನಗಳಲ್ಲಿ ಸಂಗ್ರಹಿಸಲು ಸಾಧ್ಯವಿಲ್ಲ. ಎಲ್ಲ ಕೆಲಸ ಬದಿಗೊತ್ತಿ ಇದೇ ದಂಧೆ ಮಾಡಿದ್ದಾರೆ. ಕಾಗನೂರಿನ ದೇವಸ್ಥಾನದ ಹಿಂದೆ ಸುಮಾರು 50 ಟಿಪ್ಪರ್ನಷ್ಟು ಮರಳು ಸಂಗ್ರಹಿಸಿದ್ದಾರೆ. ಅಕ್ರಮ ಮರಳು ದಂಧೆಯಲ್ಲಿ ಆಂಧ್ರ ರೈತರು ಬಾಗಿಯಾಗಿದ್ದು, ಸಾಕಷ್ಟು ಪ್ರಮಾಣ ದ ಮರಳನ್ನು ಸಂಗ್ರಹಿಸಿದ್ದಾರೆ.
ನದಿ ತೀರದ ಎಲ್ಲ ಗ್ರಾಮಗಳಲ್ಲೂ ಅಕ್ರಮ ಮರಳಿನ ಮೇಲೆ ದಾಳಿ ಮಾಡಲಾಗುವುದು. ನದಿ ತೀರದ ಕೆಲವು ಕಡೆಗಳಲ್ಲಿ ಬಾರಿ ಪ್ರಮಾಣದ ಮರಳು ಸಂಗ್ರಹಿಸಿದ್ದಾರೆ. ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಯಾರ ಜಮೀನಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದ್ದಾರೋ ಆ ವ್ಯಕ್ತಿ ಮೇಲೆ ಕ್ರಿಮಿನಲ್ ದೂರು ದಾಖಲಿಸುತ್ತಾರೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

