ದೇವದಾಸ್ ನಾಮಪತ್ರ ಸಲ್ಲಿಕೆ
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಎಸ್‌ಯುಸಿಐ ಅಭ್ಯರ್ಥಿಯಾಗಿ ದೇವದಾಸ್ ಅವರು ಪಕ್ಷದ ಜಿಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾ. ಸೋಮಶೇಖರ್ ನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ದೇವದಾಸ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ್ ಮಾತನಾಡಿ, ಸ್ವಂತ ಲಾಭಕ್ಕಾಗಿ ಅನೇಕ ರಾಜಕೀಯ ನಾಯಕರು ಪಕ್ಷದಿಂದ ಪಕ್ಷಕ್ಕೆ ಹಾರುತ್ತಿರುವ ಕೊಳಕು ವಾತಾವರಣವನ್ನು ನಾವಿಂದು ರಾಜ್ಯಾದ್ಯಂತ ಗಮನಿಸುತ್ತಿದ್ದೇವೆ. ಸಿದ್ಧಾಂತ, ಮೌಲ್ಯ ಹಾಗೂ ಜನಪರ ಆದರ್ಶಗಳಿಲ್ಲದವರು ಜನಪ್ರತಿನಿಧಿಗಳಾಗಲು ಹೊರಟಿರುವುದು ಪ್ರಜಾತಂತ್ರ ಮೌಲ್ಯದ ಅಣಕವಷ್ಟೇ ಎಂದರು.
ಕಾಂಗ್ರೆಸ್, ಬಿಜೆಪಿ ಹಾಗೂ ಇನ್ನಿತರ ಪಾದೇಶಿಕ ಪಕ್ಷಗಳ ಬಹುತೇಕರು ವಿವಿಧ ಹಗರಣಗಳಲ್ಲಿ ಸಿಲುಕಿಕೊಂಡವರು, ಅಪರಾಧ ಹಿನ್ನೆಲೆಯವರು, ಸ್ವಾರ್ಥ ಹಾಗೂ ಅಧಿಕಾರದ ಲಾಲಸೆಯಲ್ಲಿ ಮುಳುಗಿದವರು. ಅಲ್ಲದೆ, ಜನಹಿತ ಮರೆತು ಲಾಭಕೋರ ಉದ್ಯಮಪತಿಗಳ ಪಾದ ಸೇವೆಯೆ ತಮ್ಮ ಪರಮ ಧ್ಯೇಯವೆಂದು ನಂಬಿದವರು. ಇವರು ಜನಪ್ರತಿನಿಧಿಗಳಾಗಲು ಅರ್ಹರೆ ಎಂದು ಪ್ರಶ್ನಿಸಿದರು.
25 ವರ್ಷಗಳಿಂದ ಸಾಮಾನ್ಯ ಜನರ, ರೈತ ಕಾರ್ಮಿಕರ, ವಿದ್ಯಾರ್ಥಿ, ಮಹಿಳೆಯರ ಜ್ವಲಂತ ಸಮಸ್ಯೆಗಳ ವಿರುದ್ಧ ನಡೆದ ಹತ್ತು ಹಲವು ಹೋರಾಟಗಳಲ್ಲಿ ದೇವದಾಸ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಇಡೀ ಜೀವನವನ್ನು ಶೋಷಿತರ ಚಳವಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಇಂದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗಾಣಿಸಿ ಸಮಾಜವಾದಿ ಕ್ರಾಂತಿ ನೆರವೇರಿಸುವ ಎಸ್‌ಯುಸಿಐ (ಸಿ) ಪಕ್ಷದ ಉದ್ದೇಶಕ್ಕಾಗಿ ದೇವದಾಸ್ ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ.
ಈ ಹೋರಾಟದ ಭಾಗವಾಗಿ ದೇವದಾಸ್ ಚುನಾವಣ ಕಣದಲ್ಲಿದ್ದಾರೆ. ಜನರ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ದೇವದಾಸ್ ಅವರಿಗೆ ಮತ ಹಾಕಲು ಮನವಿ ಮಾಡಿದರು. ಮಂಜುಳಾ, ಸೋಮಶೇಖರಗೌಡ, ನಾಗಲಕ್ಷ್ಮೀ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

