ಬಳ್ಳಾರಿ: ಅಬ್ಬರಿಸಿದ ವರುಣ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 8
2-3 ವರ್ಷ ಬರದಿಂದ ತತ್ತರಿಸುವ ಜನರಿಗೆ ಈ ಬಾರಿಯ ಮುಂಗಾರಿನ ಉತ್ತಮ ಬೆಳೆಯ ನಿರೀಕ್ಷೆಯನ್ನು ಗುರುವಾರ ಜಿಲ್ಲಾದ್ಯಂತ ಸುರಿದ ಉತ್ತಮ ಮಳೆಯು ಹುಟ್ಟು ಹಾಕಿದೆ.
ಈ ವರ್ಷದಲ್ಲಿಯೇ ಜಿಲ್ಲಾದ್ಯಂತ ಸುರಿದು ಉತ್ತಮ ಮಳೆಯಾಗಿದೆ. ರೈತರಲ್ಲಿ ಮುಂಗಾರಿನ ಹಂಗಾಮಿನ ಬೆಳೆಗೆ ಆಶಾಕಿರಣವಾಗಿದ್ದರೂ, ಕಳೆದ 3 ವರ್ಷಗಳಲ್ಲಿ ಆರಂಭದಲ್ಲಿ ಶೂರತ್ವ ತೋರಿದ್ದ ಮಳೆರಾಯ ನಂತರದಲ್ಲಿ ಕೈ ಕೊಟ್ಟಿದ್ದರಿಂದ, ಈ ಬಾರಿ ಮಳೆಯು ಆರಂಭದಲ್ಲಿ ಉತ್ತಮವಾಗಿದ್ದರೂ, ನಂತರದಲ್ಲಿಯೇ ಕೈ ಕೊಡಲಿದೆಯೇ ಎಂಬ ಭೀತಿಯಲ್ಲಿ ಗುರುವಾರದ ಮುಂಗಾರಿನ ಮಳೆಯಿಂದ ಜಿಲ್ಲೆಯ ರೈತರು ಸಂತೋಷ ಪಟ್ಟಿದ್ದಾನೆ.
ಮುಂಗಾರು ಬೆಳೆಗೆ ಮಳೆಯು ಸಹಕಾರಿಯಾಗುವುದು ಮಾತ್ರವಲ್ಲದೆ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರಿನ ಸಮಸ್ಯೆ ಉಂಟಾಗುವ ಭೀತಿಯು ಇದೆ, ಇಂತಹ ಭೀತಿಗೆ ಕೊಂಚ ದೂರವಾಗಿದೆ. ಇಂತಹ ಮಳೆ ಬರುವುದರಿಂದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಉಂಟಾಗುವ ನೀರಿನ ಬವಣೆಯನ್ನು ಕೊಂಚ ಮಟ್ಟಿಗೆ ತಪ್ಪಿಸಬಹುದು, ಇನ್ನು ಶಿವಮೊಗ್ಗ ಸೇರಿದಂತೆ ಇತರ ಕಡೆಗಳಲ್ಲಿ ಮಳೆಯಾಗುವುದರಿಂದ ಈ ಭಾಗದ ಜೀವನಾಡಿ ತುಂಗಭದ್ರಾ ತುಂಬುವುದರಿಂದ ನೀರಿನ ಬವಣೆಯನ್ನು ನೀಗಬಹುದು.
ಈ ವರ್ಷದಲ್ಲಿ ಉತ್ತಮ ಮಳೆ
ಗುರುವಾರ ಸಂಜೆ ಜಿಲ್ಲಾದ್ಯಂತ ಸುರಿದ ಮಳೆಯೇ ಈ ಬಾರಿ ಜಿಲ್ಲೆಯ ಮುಂಗಾರಿನ ಉತ್ತಮ ಮಳೆಯಾಗಿದೆ. ಗುರುವಾರ ಮಧ್ಯಾಹ್ನ ಮತ್ತು ಸಂಜೆ ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನ ಹಡಗಲಿಯಲ್ಲಿ ಉತ್ತಮ ಮಳೆಯಾಗಿದೆ. ಈ ಮಳೆಯು ಇಡೀ ಜಿಲ್ಲೆಯ ರೈತರಿಗೆ ಮುಂಗಾರಿನ ಆಶಾಭಾವವನ್ನು ಹುಟ್ಟು ಹಾಕಿದೆ. ಕಳೆದ 2-3 ವರ್ಷದಿಂದ ಬರದಿಂದ ತತ್ತರಿಸಿರುವ ರೈತರಿಗೆ ಈ ಬಾರಿ ಮಳೆಯು ಮುಂಗಾರಿನ ಬೆಳೆಗೆ ಹೊಸ ಚೈತನ್ಯವನ್ನು ಮೂಡಿಸಿದೆ.
ಮುಂಗಾರಿನ ಸಿದ್ಧತೆ: ಮುಂಗಾರು ಬಿತ್ತನೆಗೆ ಬೇಕಾಗುವ ಸಿದ್ಧತೆಗೆ ಈ ಮಳೆಯು ಸಹಕಾರಿಯಾಗಿದೆ. ಗುರುವಾರ ಮಧ್ಯಾಹ್ನ ಮತ್ತು ಸಂಜೆ ಜಿಲ್ಲಾದ್ಯಂತ ಒಂದು ತಾಸಿಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿರುವುದರಿಂದ ರೈತರಿಗೆ ಮುಂಗಾರು ಬಿತ್ತನೆಗೆ ಬೇಕಾಗುವ ಭೂಮಿ ಹದಗೊಳಿಸುವ ಕಾರ್ಯಕ್ಕೆ ಮುಂದಾಗುವಂತೆ ಮಾಡಿದೆ.
ಕೆಲ ರೈತರು ಭೂಮಿಯನ್ನು ಹದಗೊಳಿಸಿದ್ದರೆ, ಇನ್ನು ಕೆಲವು ರೈತರು ಮುಂಗಾರು ಮಳೆಗಾಗಿ ಕಾಯುತ್ತಾ ಕುಳಿತಿದ್ದರು. ಇದರಿಂದಾಗಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲು ಕಾರಣವಾಗಿದೆ. ಈ ಮಳೆಯಿಂದಲೇ ಮುಂಗಾರು ಬಿತ್ತನೆ ಸಾಧ್ಯವಿಲ್ಲ, ಆದರೆ ಮುಂಗಾರಿಗೆ ಭೂಮಿ ಹದಗೊಳಿಸಲು ಸಹಕಾರಿಯಾಗಿದೆ.
ಪದವೀಧರ ರೈತ ಸುಧೀರ್ ಮಾತನಾಡಿ, ಈ ಮಳೆಯು ಮುಂಗಾರು ಬಿತ್ತನೆ ಸಹಕಾರಿಯಾಗಿದೆ, ಹತ್ತಿ, ಟೋಮೆಟೋ, ಮೆಣಸಿನಕಾಯಿ ಸೇರಿದಂತೆ ಇತರ ಬೆಳೆಯನ್ನು ಬಿತ್ತನೆ ಮಾಡುವುದಕ್ಕೆ ಭೂಮಿ ಸಿದ್ಧತೆಗೆ ಇದು ಸೂಕ್ತ ಮಳೆಯಾಗಿದೆ. ಕಳೆದ 2-3 ವರ್ಷ ಮುಂಗಾರು ಇರಲಿಲ್ಲ, ಈ ಮಳೆ ಜಿಲ್ಲಾದ್ಯಂತ ಆಗಿರುವುದರಿಂದ ರೈತರು ಬಿತ್ತನೆ ಮಾಡಲು ಇದು ಸಹಕಾರಿಯಾಗಲಿದೆ ಎಂದುತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

