ಬಳ್ಳಾರಿ

ವಿಜಯನಗರ ಕಾಲೇಜಿಗೆ 10 ರ್ಯಾಂಕ್

Published On :

ಹೊಸಪೇಟೆ:  ಇಲ್ಲಿನ ವಿಜಯನಗರ ಕಾಲೇಜಿನ 10 ವಿದ್ಯಾರ್ಥಿಗಳು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣದಲ್ಲಿ ರ್ಯಾಂಕ್ ಪಡೆದು ಕಾಲೇಜ್ಗೆ ಕೀರ್ತಿ ತಂದಿದ್ದಾರೆ.  ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹೆಚ್ಚು ರ್ಯಾಂಕ್ ಗಳಿಸಿರುವ ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳ ವಿವರ ಇಂತಿದೆ. ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸರಸ್ವತಿ 1ನೇ ರ್ಯಾಂಕ್, ಎಂ.ಪಿ.ಎಂ. ನಯನ 2ನೇ ರ್ಯಾಂಕ್, ರೆಹನಾ ಬೇಗಂ 3ನೇ ರ್ಯಾಂಕ್, ಅಶ್ವಿನಿ ವೇದಪಾಠಕ್ 4ನೇ ರ್ಯಾಂಕ್, ದೀಪಾ 5ನೇ ರ್ಯಾಂಕ್, ವಿಜಯಲಕ್ಷ್ಮೀ ಮಂಜುನಾಥ ಮುದ್ದಿ 6ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.  ಎಂ.ಎಸ್ಸಿ ಭೌತಶಾಸ್ತ್ರ ವಿಭಾಗದಲ್ಲಿ ಎಂ.ಆರ್. ಅನಸೂಯಾ 1ನೇ ರ್ಯಾಂಕ್, ಅವಿನಾಶ್ ಕುಮಾರ್ 2ನೇ ರ್ಯಾಂಕ್, ಹನುಮಂತ 3ನೇ ರ್ಯಾಂಕ್, ದಳವಾಯಿ ಶ್ವೇತಾ 5ನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು  ಪ್ರಾ. ಎಸ್. ಎಸ್. ಪೊಲೀಸ್ ಪಾಟೀಲ್ ತಿಳಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಾಲಿಸಿದ್ದಯ್ಯಸ್ವಾಮಿ, ಗುಡೇಕೋಟೆ ನಾಗರಾಜ, ಎಂ. ವಿರೂಪಾಕ್ಷಯ್ಯ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.