ಗಾಳಿಗೆ ಹಾರಿದ ತಗಡುಗಳು
ಕೊಟ್ಟೂರು: ಗಾಳಿ ಆರ್ಭಟಕ್ಕೆ ಸಮೀಪದ ಹ್ಯಾಳ್ಯಾ ಗ್ರಾಮ ಪಂಚಾಯಿತಿ ಕಚೇರಿಯ ಚಾವಣಿ ತಗಡುಗಳು ಹಾರಿಹೋಗಿವೆ. ಸೋಮವಾರ ರಾತ್ರಿ ಭರ್ಜರಿ ಮಳೆ ಸುರಿದಿತ್ತು. ಈ ವೇಳೆ ಎದ್ದ ಬಿರುಗಾಳಿ ಈ ಅವಾಂತರ ಸೃಷ್ಟಿಸಿದೆ. ಭೂಸೇನಾ ನಿಗಮ ಹ್ಯಾಳ್ಯಾ ಗ್ರಾಪಂ ಕಟ್ಟಡ ನಿರ್ಮಿಸಿದ್ದು, ತಗಡುಗಳನ್ನು ಅಳವಡಿಸಲಾಗಿದೆ.
ತಗಡು ಕಿತ್ತುಹೋಗಲು ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಗಡು ಹಾರಿಹೋಗಿದ್ದರಿಂದ ಮಳೆ ನೀರು ಕಟ್ಟಡದೊಳಗ್ಗೆ ನುಗ್ಗಿದ್ದು, ಕೆಲವು ದಾಖಲಾತಿ, ಸಾಮಗ್ರಿಗಳಿಗೆ ಹಾನಿಯಾಗಿದೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಅಲಕ್ಷ್ಯ ತೋರಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಭಾರಿ ಮಳೆ, ಗಾಳಿ
ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಮುಂಗಾರು ಆರಂಭದಲ್ಲಿ ಸುರಿದ ಭಾರೀ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರಾತ್ರಿ ಎಂಟು ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಭಾರಿ ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಬೀಸಿದ್ದರಿಂದ ಜನ ಧೂಳಿನಿಂದ ರಕ್ಷಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಓಡಿದರು. ಬೆಳಗ್ಗೆಯಿಂದ ಸಂಜೆ ವರೆಗೂ ಉರಿಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನತೆ ರಾತ್ರಿ ಸುರಿದ ಮಳೆ ತಂಪು ನೀಡಿತು.
ಮಳೆ ವಿವರ: ಹಗರಿಬೊಮ್ಮನಹಳ್ಳಿ- 26.4 ಮಿ.ಮೀ., ಮಾಲವಿ-17.2 ಮಿ.ಮೀ., ಕೊಗಳಿ-10.0 ಮಿ.ಮೀ., ತಂಬ್ರಹಳ್ಳಿ- 6.1ಮಿ.ಮೀ., ಹಾಗೂ ಹಂಪಾಸಾಗರ-3.2 ಮಿ.ಮೀ., ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಗುರುವಾರ ಮಧ್ಯಾಹ್ನ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಿಡಿಲಿಗೆ ಆಕಳು ಬಲಿ
ಹೊಸಪೇಟೆ: ಮಳೆ ಸಿಡಿಲಿಗೆ ಆಕಳವೊಂದು ಮೃತಗೊಂಡಿರುವ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ದೇವಲಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ದೇವಲಾಪುರ ಗ್ರಾಮದ ನಿವಾಸಿ ಮಾರೇಶ್ ಎಂಬುವರಿಗೆ ಸೇರಿದ ಆಕಳು. ಮನೆಯ ಹೊರಗೆ ಮರಕ್ಕೆ ಕಟ್ಟಿ ಹಾಕಿಲಾಗಿದ್ದ ಆಕಳಿಗೆ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗುಡುಗು-ಸಿಡಿಲಿನ ಆರ್ಭಟದಲ್ಲಿ ಮರಕ್ಕೆ ಕಟ್ಟಿ ಹಾಕಲಾಗಿದ್ದ ಆಕಳಿಗೆ ಸಿಡಿಲು ಬಡಿದಾಗ ಆಕಳು ಸ್ಥಳದಲ್ಲೇ ಮೃತಪಟ್ಟಿದೆ. ಆಕಳು ಗರ್ಭಗೊಂಡಿದ್ದ ಆಕಳು ಸಿಡಿಲಿಗೆ ಬಲಿಯಾಗಿರುವುದರಿಂದ ಮಾರೇಸ್ ಎನ್ನುವ ರೈತರಿಗೆ ರು. 15-20 ಸಾವಿರ ನಷ್ಟು ಉಂಟಾಗಿದೆ. ಸಿಡಿಲಿಗೆ ಆಕಳು ಬಲಿಯಾಗಿರುವ ದೇವಲಾಪುರ ಗ್ರಾಮಕ್ಕೆ ಗುರುವಾರ ಬೆಳಗ್ಗೆ ಕಂದಾಯ ನಿರೀಕ್ಷಕ ನಾಗರಾಜ್, ಗ್ರಾಮ ಲೆಕ್ಕಿಗ ವಿ.ಬಿ. ಪಾಟೀಲ್, ಡಣಾಯಕನಕೆರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕೆ. ನಾಗರಾಜ್ರಾವ್, ಕಾರ್ಯದರ್ಶಿ ಜಿಲಾನ್ ಸಾಹೇಬ್, ಪಶುವೈದ್ಯಕೀಯ ಪರಿಕ್ಷಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

