ಅಕ್ಷರ ಜಾತ್ರೆಗೆ 10 ಸಾವಿರ ಸಜ್ಜೆ ರೊಟ್ಟಿ
ತಾಳಿಕೋಟೆ: ಬಿಜಾಪುರದಲ್ಲಿ ಫೆ, 9ರಿಂದ ಮೂರು ದಿನ ನಡೆಯಲಿರುವ 79ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದ ಕವೀ ಪೌಂಡೇಶನ್ ವತಿಯಿಂದ 10 ಸಾವಿರ ಸಜ್ಜೆ ರೊಟ್ಟಿಗಳನ್ನು ತಯಾರಿಸಿ ಬುಧವಾರ ರೊಟ್ಟಿ ತುಂಬಿದ ವಾಹನಕ್ಕೆ ಪೂಜೆ ಸಲ್ಲಿಸಿ ಬಿಜಾಪುರಕ್ಕೆ ಕಳುಹಿಸಿಕೊಡಲಾಯಿತು.
ರೊಟ್ಟಿಗಳನ್ನು ತುಂಬಿದ ವಾಹನಕ್ಕೆ ಹಾರ ಹಾಕಿ, ಪೂಜೆಯನ್ನ ರಾಜಶೇಖರ ಹಿರೆಮಠ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕವೀ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಕೋರಿ, 90 ವರ್ಷಗಳ ನಂತರ ಬಿಜಾಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಬಂದೊದಗಿದೆ. ಸಮ್ಮೇಳನ ಯಶಶ್ವಿಯಾಗಲಿ ಎಂದು ಹಣ ನೀಡಿ ಸಂಘಟಕರ ಮೇಲೆ ಭಾರ ಹಾಕುವುದಕ್ಕಿಂತ ನಾವೂ ಕೂಡಾ ಅದೇ ಹಣದಲ್ಲಿ ರೊಟ್ಟಿಗಳನ್ನು ತಯಾರಿಸಿ ಕೊಡುವುದು ಸೂಕ್ತ ಎಂದು ನಿರ್ಧರಿಸಿ ರೊಟ್ಟಿ ತಯಾರಿಸಲು ಸಿದ್ದವಾದಾಗ ಗೆಳೆಯರ ಬಳಗವೂ ಕೈಜೋಡಿಸಿ ಸುಮಾರು ರು. 40 ಸಾವಿರ ವೆಚ್ಚದಲ್ಲಿ ರೊಟ್ಟಿ ತಯಾರಿಸಲಾಗಿದೆ.
ಸಮ್ಮೇಳನವನ್ನು ಯಶಶ್ವಿಗೊಳಿಸಲು ಸ್ನೇಹಿತರೊಂದಿಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ತೆರಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕವೀ ಪೌಂಡೇಶನ್ ಸದಸ್ಯರಾದ ಸಚಿನ ಹಂಚಾಟೆ, ಮುತ್ತು ಬಿರಾದಾರ, ಕಾಶಿನಾಥ ಪಾಟೀಲ, ಹಣಮಂತ್ರಾಯ ಢವಳಗಿ, ಸೋಮಶೇಖರ ವಡವಡಗಿ, ದೇವರಾಜ ಬಾಗೇವಾಡಿ, ಎಸ್.ಟಿ. ಬೊಮ್ಮನಹಳ್ಳಿ, ಎಂ.ಎಸ್.ಬಿರಾದಾರ, ಆರ್.ಎಲ್.ಕೊಪ್ಪದ, ಆರ್.ಬಿ.ದಾನಿ, ಅನಿಲ ಇರಾಜ, ಆರ್.ಕೆ.ಮ್ಯಾಗೇರಿ. ಎ.ಟಿ.ಹರಿಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

