ಬಿಜಾಪುರ

ಸಮ್ಮೇಳನ: ಸಿಹಿ ತಿಂಡಿ ತಯಾರಿಕೆ ಆರಂಭ

Published On :

ಬಿಜಾಪುರ: ನಗರದಲ್ಲಿ ಫೆ. 9,10 ಹಾಗೂ 11ರಂದು ನಡೆಯಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಜನರಿಗಾಗಿ ಊಟದ ವ್ಯವಸ್ಥೆಗಾಗಿ ಬಾಲುಶಾ, ಬುಂದೆ ಲಾಡು ತಯಾರಿಸುವ ಕಾರ್ಯ ಬುಧವಾರ ಆರಂಭಗೊಂಡಿತು.
ನಗರದ ಸೈನಿಕ ಶಾಲೆಯ ಬೃಹತ್ ವೇದಿಕೆಯ ಪಕ್ಕದ ಅಡುಗೆ ಕೋಣೆಯಲ್ಲಿ ಸುಮಾರು 350 ಅಡುಗೆ ಕೆಲಸಗಾರರು ಆಹಾರ ಪದಾರ್ಥ ತಯಾರಿಸುವ ಕೆಲಸದಲ್ಲಿ ತೊಡಗಲಿದ್ದಾರೆ. ಈಗಾಗಲೇ 200 ಜನ ಅಡುಗೆ ಕೆಲಸಗಾರರು ಬಾಲುಶಾ, ಬುಂದಾ ತಯಾರಿಸುವಲ್ಲಿ ನಿರತರಾಗಿದ್ದರು. ಅಡುಗೆ ಕೆಲಸಗಾರರು ಗುರುವಾರ ಮೈಸೂರು ಪಾಕ್ ತಯಾರಿಸಲು ಅಣೆಯಾಗಲಿದ್ದಾರೆ. ರು. 1 ಕೋಟಿ ಅಂದಾಜು ವೆಚ್ಚದಲ್ಲಿ ಹುಬ್ಬಳ್ಳಿಯ ಬೈರು ಕೇಟರಿಂಗ್ ಕಂಪನಿಯ ಬಾಬುಲಾಲ್ ಅವರು ಅಡುಗೆ ಗುತ್ತಿಗೆದಾರರಾಗಿದ್ದು. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಾಬುಲಾಲ್ ಅಡುಗೆ ಗುತ್ತಿಗೆ ಹಿಡಿದಿದ್ದರು. ಬಿಜಾಪುರದಲ್ಲಿ ನಡೆಯುವ ಸಮ್ಮೇಳನದಲ್ಲಿಯೂ ಅವರೇ ಅಡುಗೆ ಗುತ್ತಿಗೆ ಪಡೆದುಕೊಂಡಿದ್ದಾರೆ.
ಬಾಬುಲಾಲ್ ಅವರ ಬಳಿ ಸುಮಾರು 500 ಅಡುಗೆ ಕೆಲಸಗಾರರು ಏಕ ಕಾಲಕ್ಕೆ ಲಭ್ಯವಿದ್ದಾರೆ. ಹೀಗಾಗಿ ದೊಡ್ಡ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುವುದು ಬೈರು ಕೆಟರಿಂಗ್ ಕಂಪನಿಗೆ ದೊಡ್ಡದೇನಲ್ಲ. 500 ಕ್ವಿಂಟಲ್ ಅಕ್ಕಿ, 150 ಕ್ವಿಂಟಲ್ ಗೋಧಿ ಹಿಟ್ಟು, 30 ಕ್ವಿಂಟಲ್ ತೊಗರಿ ಬೇಳೆ, 600 ಡಬ್ಬಿ ಎಣ್ಣೆ, 15 ಕ್ವಿಂಟಲ್ ಹೆಸರು, 70 ಕ್ವಿಂಟಲ್ ಬೆಲ್ಲ, 20 ಕ್ವಿಂಟಲ್ ಮೂಕಣಿ, 20 ಕ್ವಿಂಟಲ್ ಅವಲಕ್ಕಿ, 10 ಕ್ವಿಂಟಲ್ ಎಂಟಿಆರ್ ಶಾವಿಗೆ, 10 ಕ್ವಿಂಟಲ್ ಹುಣಸೆ ಹಣ್ಣು, 1,000 ಟೆಂಗಿನಕಾಯಿ, 25 ಕ್ವಿಂಟಲ್ ರವೆ, 20 ಕ್ವಿಂಟಲ್ ಕಡಲೆ ಹಿಟ್ಟು, 10 ಕ್ವಿಂಟಲ್ ಬುಂದಿ ಕಾಳು, ಮೈಸೂರು ಪಾಕ್ ಹಾಗೂ ಬಾಲುಶಾ ಹಿಟ್ಟು, 30 ಕ್ವಿಂಟಲ್ ಡೊಣ್ಣ ಮೆಣಸಿನಕಾಯಿ ಮುಂತಾದವುಗಳು ಸೇರಿದಂತೆ ರು. 1 ಕೋಟಿ ವೆಚ್ಚದ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಲಾಗಿದೆ. ಊಟ ಬಡಿಸಲು 50,000 ಸ್ಟೀಲ್ ಹಾಗೂ ಫೈಬರ್ ಪ್ಲೇಟ್‌ಗಳನ್ನು ಖರೀದಿಸಿ ದಾಸ್ತಾನು ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.