ಬಿಜಾಪುರ

ಸಮ್ಮೇಳನದಲ್ಲಿ ಮಕ್ಕಳ ಕಡೆಗಣನೆ: ಪೂಜಾರ

Published On :

ಸಿಂದಗಿ: 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಗೋಷ್ಠಿಗೆ ಅವಕಾಶ ಕೊಡದೇ ಅವರನ್ನು ಕಡೆಗಣಿಸಿರುವುದು ಖಂಡನಿಯ ಎಂದು ಸ್ಥಳೀಯ ಮಕ್ಕಳ ಬಳಗದ ಅಧ್ಯಕ್ಷ ಹ.ಮ.ಪೂಜಾರ ಹೇಳಿದ್ದಾರೆ.
ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಯ ಮೇಲೆ ಮಕ್ಕಳು ತಮ್ಮ ನೋವು-ನಲಿವು ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಸುವ ಗೋಷ್ಠಿ ಜರುಗಿಸಬೇಕಾಗಿತ್ತು. ತನ್ಮೂಲಕ ಮಕ್ಕಳಿಗೆ ಅಭಿವೃದ್ಧಿ ಹೊಂದುವ ಮತ್ತು ಭಾಗವಹಿಸುವ ಹಕ್ಕುಗಳನ್ನು ಅನುಭವಿಸುವ ಅವಕಾಶ ಕೊಟ್ಟಂತಾಗುತ್ತಿತ್ತು ಎಂದವರು ತಿಳಿಸಿದ್ದಾರೆ. ಮಕ್ಕಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು  ಗೋಷ್ಠಿ ನಡೆಸದೇ ಇರುವುದು ಖಂಡನಿಯ. ಮಕ್ಕಳೇ ಅಧ್ಯಕ್ಷರು, ಮಕ್ಕಳೇ ಅತಿಥಿಗಳು ಮತ್ತು ಮಕ್ಕಳೇ ನಿರೂಪಿಸುವಂಥ ಗೋಷ್ಠಿನಡೆಸಿ, ನಾವೆಲ್ಲ ಎದುರು ಕುಳಿತು ಆನಂದ ಪಡೋಣ ಎಂದು ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಪೂರ್ವದಲ್ಲಿಯೇ ಸೂಚಿಸಿದ್ದರು. ಆಗ ಒಪ್ಪಿಗೆ ಕೊಟ್ಟ ಸಂಘಟಕರು ಮಕ್ಕಳ ಗೋಷ್ಠಿಯನ್ನು ಜರುಗಿಸದೇ ಕಡೆಗಣಿಸಿದ್ದು ವಿಷಾದನೀಯ. ಭವಿಷತ್ತಿನಲ್ಲಿ ಹೀಗಾಗದಂತೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಮ್ಮೇಳನಗಳ ಸಂಘಟಕರು ಲಕ್ಷ್ಯವಹಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ನಾಳೆ ಕಾಲ್ನಡಿಗೆ ಜಾಥಾ
ಬಿಜಾಪುರ: ನಗರದಲ್ಲಿ ಫೆ. 9, 10 ಹಾಗೂ 11ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜನ ಜಾಗೃತಿ ಮೂಡಿಸಲು ಫೆ. 8ರಂದು ಬೆಳಗ್ಗೆ 9 ಗಂಟೆಗೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ತಿಳಿಸಿದ್ದಾರೆ.
ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆಯುವ ಕಾಲ್ನಡಿಗೆ ಜಾಥಾ ನಗರದ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಿಂದ ಸೈನಿಕ ಶಾಲೆಯ ವರೆಗೆ ನಡೆಯಲಿದೆ. ಜಾಥಾದಲ್ಲಿ ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಬಿ.ಎಂ. ಕೋಕರೆ, ಡಾ. ಕೆ.ಬಿ. ನಾಗೂರ, ಸಿ.ಎಂ. ಕುರಣಿ, ಅಲ್ಕಾ ಪಡತಾರೆ, ಡಾ. ಚಂದಪ್ಪ, ರಾಜು ಚವ್ಹಾಣ, ಸದಾಶಿವ, ಬಿ.ಎಂ. ಹಕೀಂ,  ವೈ.ಬಿ. ಝಂಪ್ಲೆ, ಬಸವರಾಜ ಇಜೇರಿ, ವಿ.ಬಿ. ನಾವಿ, ಎಸ್.ಕೆ. ಇನಾಮದಾರ, ಟಿ.ಎಸ್. ಶಿವಪ್ರಕಾಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.