ಬಿಸಿಲು, ಧೂಳಿಗೆ ತತ್ತರಿಸಿದ ಸಾಹಿತ್ಯಾಸಕ್ತರು
ಬಿಜಾಪುರ: ಇಲ್ಲಿನ ಸೈನಿಕ ಮೈದಾನದಲ್ಲಿ ಶನಿವಾರ ಪ್ರಾರಂಭಗೊಂಡಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯಾಸಕ್ತರ ಪೈಕಿ ಕೆಲವರು ಇಲ್ಲಿನ ಬಿಸಿಲು ಮತ್ತು ಧೂಳಿಗೆ ಅನಾರೋಗ್ಯಕ್ಕೀಡಾಗಿ ಕಾರ್ಯಕ್ರಮದ ಮುಖ್ಯ ವೇದಿಕೆ ಹತ್ತಿರ ಇರುವ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಥಮ ತುರ್ತು ಚಿಕಿತ್ಸಾ ಘಟಕದಲ್ಲಿ ಔಷಧೋಪಚಾರ ಪಡೆದುಕೊಂಡರು. ವಿವಿಧೆಡೆಯಿಂದ ಸಮ್ಮೇಳನಕ್ಕೆ ಆಗಮಿಸಿದ್ದ 5-6 ಸಾಹಿತ್ಯಾಸಕ್ತರು ಇಲ್ಲಿನ ವಾತಾವರಣ ಹೊಂದಿಕೊಳ್ಳಲಾಗದೇ ತಲೆಸುತ್ತು, ಧೂಳು, ಅಲರ್ಜಿ ಮುಂತಾದ ಸಣ್ಣಪುಟ್ಟ ಸಮಸ್ಯೆಗಳಿಂದ ಬಳಲಿದರು. ಈ ವೇಳೆ ಇವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆತಂದು ಅಗತ್ಯ ಮಾತ್ರೆ ನೀಡಲಾಯಿತು. ಕೆಲವರನ್ನು ಘಟಕದಲ್ಲಿಯೇ ಇರಿಸಿಕೊಂಡು ಉಪಚರಿಸಲಾಯಿತು. ಘಟಕದಲ್ಲಿ ಜಿಲ್ಲಾ ಆರೋಗ್ಯ ಕೇಂದ್ರದ 6 ವೈದ್ಯರು, 4 ಸ್ಟಾಫ್ ನರ್ಸ್, 3 ಔಷಧಿ ತಜ್ಞರು, 5 ವಿದ್ಯಾರ್ಥಿ ವೈದ್ಯರು. 1 ಅಂಬ್ಯೂಲೆನ್ಸ್ ಘಟಕದಲ್ಲಿ ಸನ್ನದ್ಧವಾಗಿವೆ.
ಭದ್ರತೆಯ ಬಿಸಿ: ತೀವ್ರ ಅಸ್ವಸ್ಥಗೊಂಡ ಓರ್ವ ವ್ಯಕ್ತಿಯನ್ನು ತುರ್ತು ಘಟಕದಿಂದ ಹೆಚ್ಚಿನ ಉಪಚಾರಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳಿಸುವ ವೇಳೆ ಪೊಲೀಸರು ಅಂಬ್ಯೂಲೆನ್ಸ್ ವಾಹನ ಹೊರಬಿಡದೆ ಸಿಎಂ ಹೆಲಿಕಾಪ್ಟರ್ ಹೋಗಲಿ, ನಂತರ ಬಿಡುತ್ತೇವೆ ಎಂದು ತಡೆದರು. ಇದರಿಂದಾಗಿ ಕನಿಷ್ಠ 2 ಗಂಟೆವರೆಗೆ ಅಸ್ವಸ್ಥ ವ್ಯಕ್ತಿ ಅಂಬುಲೆನ್ಸ್ ವಾಹನದಲ್ಲಿಯೇ ಪರದಾಡಬೇಕಾಯಿತು.
ಇಂಥ ಸಂದರ್ಭದಲ್ಲಿ ಪೊಲೀಸರು ಮಾನವೀಯತೆ ಮರೆತು ನಡೆದುಕೊಂಡರು ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

