ಬಿಜಾಪುರ

ಪಂಕ್ತಿ ಭೇದ ವಿರುದ್ಧ ಸಹಿ ಸಂಗ್ರಹ

Published On :

ಬಿಜಾಪುರ:  ಸಾಹಿತ್ಯ ಸಮ್ಮೇಳನದಲ್ಲೂ ಪಂಕ್ತಿ ಭೇದ ವಿರುದ್ಧದ ಚಳುವಳಿ ಮಾರ್ಧನಿಸಿದೆ. ಬಿಜಾಪುರದ ಸೈನಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆರು ಪಂಕ್ತಿ ಭೇದ ವಿರುದ್ಧ ಸಹಿ ಸಂಗ್ರಹಿಸುವ ಚಳವಳಿ ಹಮ್ಮಿಕೊಂಡಿದ್ದಾರೆ.
ಪಂಕ್ತಿ ಭೇದ ವಿರುದ್ದ ರಾಜ್ಯಾಧ್ಯಂತ ಸಹಿ ಸಂಗ್ರಹಿಸುವ ಚಳುವಳಿ ನಡೆದಿದೆ. ಸಾಹಿತ್ಯ ಸಮ್ಮೇಳನದಲ್ಲಿ ಬುದ್ದಿಜೀವಿಗಳು, ಪ್ರಜ್ಞಾವಂತರು, ಸಮಾಜಸೇವಾ ಕಾರ್ಯಕರ್ತರು, ಸಾಹಿತಿಗಳು ಬರುವುದರಿಂದ ಅವರು ಪಂಕ್ತಿ ಭೇದದ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬ ಆಶಾ ಭಾವನೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಮ್ಮೇಳನಕ್ಕೆ ಬಂದಿರುವ ಹಲವು ಜನರು ಸ್ವ ಇಚ್ಛೆಯಿಂದ ಪಂಕ್ತಿ ಭೇದದ ವಿರುದ್ಧ ಸಹಿ ಮಾಡುತ್ತಿದ್ದಾರೆ. ಸುಮಾರು 1 ಲಕ್ಷ ಸಹಿ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ನೀಲಾ ತಿಳಿಸಿದ್ದಾರೆ.
ವಿವಿಧ ಪ್ರಗತಿಪರ ಸಂಘಟನೆಗಳು ಇದರ ವಿರುದ್ಧ ಹಲವು ಹೋರಾಟ ಮಾಡಿವೆ. ಈ ಅನಿಷ್ಟ ಸಂಪ್ರದಾಯದ ತೆಗೆದುಹಾಕಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲು ಈ ಸಹಿ ಸಂಗ್ರಹ ಚಳುವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ಐತಿಹಾಸಿಕ ಚಳುವಳಿ ಆಗಲಿದೆ ಎಂದು ಭೀಮಸಿ ಕಲಾದಗಿ ತಿಳಿಸಿದ್ದಾರೆ.
ಸಮ್ಮೇಳನ ಮುಗಿಯುವುದೊರಳಗೆ ಸಾಧ್ಯವಾದಷ್ಟು ಸಹಿ ಸಂಗ್ರಹಿಸಿ ನಂತರ ತಾಲೂಕುಗಳಿಗೆ ಭೇಟಿ ನೀಡಿ ಸಹಿ ಸಂಗ್ರಹಿಸುವ ಕೆಲಸ ಪ್ರಾರಂಭವಾಗುತ್ತದೆ ಎಂದವರು ತಿಳಿಸಿದರು.
ಸಾಹಿತ್ಯ ಸಮ್ಮೇಳನಕ್ಕೆ ಬಂದವರಲ್ಲಿ ಕೆಲವರು ಸಹಿ ಮಾಡಲು ಮುಂದಾದರೆ, ಕೆಲವರು ಬೇಡ ಎಂದು ದೂರ ಸರಿದು ಹೋದರು. ಪಂಕ್ತಿ ಭೇದ ವಿರುದ್ಧ ತಮ್ಮ ಅನಿಸಿಕೆ ವ್ಯಕ್ತಪಿಡಿಸುವ ಫಾರ್ಮ ಮೇಲೆ ಜನರ ಹೆಸರು, ಸಹಿ, ಮೊಬೈಲ್ ಸಂಖ್ಯೆ ಹಾಗೂ ನಿರ್ವಹಿಸುವ ಹುದ್ದೆ ಹೀಗೆ ಎಲ್ಲಾ ವಿವಿರಗಳನ್ನು ಪಡೆದುಕೊಳ್ಳುವ ಕೆಲಸ ಸಂಘಟನೆಯ ಕಾರ್ಯಕರ್ತೆಯರು ನಡೆಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.