ಊರುಗಳಿಗೆ ಮರಳಲು ಗಡಿಬಿಡಿ
ಬಿಜಾಪುರ: ಬಿಜಾಪುರದಲ್ಲಿ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಸೋಮವಾರ ಸಾಹಿತ್ಯಾಸಕ್ತರು, ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದವರಿಗೆ ತಮ್ಮ ಊರುಗಳಿಗೆ ಮರಳುವ ತವಕ, ಗಡಿಬಿಡಿ ಎದ್ದು ಕಂಡು ಬಂತು.
ಎಲ್ಲರೂ ತಮ್ಮ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಬ್ಯಾಗ್, ಕೈ ಚೀಲ ಕೈಯಲ್ಲಿ ಹಿಡಿದುಕೊಂಡು ಲಗುಬಗೆಯಿಂದ ಬಸ್ ನಿಲ್ದಾಣ ಕಡೆಗೆ ಧಾವಿಸುತ್ತಿದ್ದರು. ತಮ್ಮ ಊರುಗಳಿಗೆ ಬಸ್ ಎಷ್ಟು ಹೊತ್ತಿಗೆ ಇದೆ. ಮುಂಗಡ ಟಿಕೆಟ್ ತೆಗೆಸುವುದರಲ್ಲಿಯೇ ಬಹುತೇಕ ಜನರು ಬಸ್ ನಿಲ್ದಾಣದಲ್ಲಿ ವಿಚಾರಣೆ ಕೌಂಟರ್ ಮುಂದೆ ಮುಗಿ ಬಿದ್ದಿದ್ದರು.
ಮಾಧ್ಯಮ ಕೇಂದ್ರಕ್ಕೆ ನುಗ್ಗಿದ ಜನ
ಬಿಜಾಪುರ: 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ಪ್ರಚಾರ ಮಾಧ್ಯಮದವರಿಗೆ ತೆರೆಯಲಾದ ಮಾಧ್ಯಮ ಕೇಂದ್ರ ಒಳಗೆ ಪತ್ರಕರ್ತರು ಕಾರ್ಯನಿರ್ವಹಿಸುವುದನ್ನು ನೋಡಲು ಕನ್ನಡಾಸಕ್ತರು ಪೊಲೀಸರ ರಕ್ಷಣಾ ಕೋಟೆ ಬೇಧಿಸಿ ಓಳನುಗ್ಗಿದರು. ಇದು ಪತ್ರಕರ್ತರಿಗೆ ಕಿರಿಕಿರಿ ಉಂಟು ಮಾಡಿತು. ಮಾಧ್ಯಮ ಕೇಂದ್ರದೊಳಗೆ ನುಸಳದಂತೆ ಜನರನ್ನು ತಡೆಯಲು ಪೊಲೀಸರು ಹರಸಾಹಪಟ್ಟರು.
ಸಮ್ಮೇಳನದಲ್ಲಿ 'ಮಹಾ' ವಿದ್ಯಾರ್ಥಿಗಳು
ಬಿಜಾಪುರ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಹಾರಾಷ್ಟ್ರದ ಜತ್ತ ತಾಲೂಕಿನ 44 ಹಳ್ಳಿಗಳ 100ಕ್ಕೂ ಹೆಚ್ಚು ಶಾಲೆಗಳಿಗೆ ರಜೆ ಘೋಷಿಸಿದ್ದರಿಂದಾಗಿ ಮಹಾರಾಷ್ಟ್ರದ ಗಡಿ ಪ್ರದೇಶದ ನೂರಾರು ವಿದ್ಯಾರ್ಥಿಗಳು ಸೋಮವಾರ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಹಾರಾಷ್ಟ್ರದ ಗಡಿಪ್ರದೇಶದ ಶಿಕ್ಷಣ ಸಂಸ್ಥೆಗಳು ಶಾಲೆ, ಕಾಲೇಜುಗಳಿಗೆ ರಜೆ ನೀಡಿ ಕನ್ನಡಾಭಿಮಾನ ಪ್ರದರ್ಶಿಸಿರುವುದು ಸಮ್ಮೇಳನದಲ್ಲಿ ಗಡಿ ಕನ್ನಡಿಗರ ಗುಣಗಾನಕ್ಕೆ ಕಾರಣವಾಯಿತು.
ಶೌಚಕ್ಕೆ ಪರದಾಟ
ಬಿಜಾಪುರ: ನಗರದ ಸೈನಿಕ ಶಾಲೆ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಕನ್ನಡಾಭಿಮಾನಿಗಳು ಶೌಚಕ್ಕೆ ಪರದಾಡಬೇಕಾಯಿತು. ಸೈನಿಕ ಶಾಲೆಯ ಆವರಣದಲ್ಲಿ ಶೌಚಕ್ಕೆ ವ್ಯವಸ್ಥೆ ಮಾಡಿದ್ದರಾದರೂ ಜನರು ನಿರೀಕ್ಷೆ ಮೀರಿ ಆಗಮಿಸಿದ್ದರಿಂದಾಗಿ ಶೌಚಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಯಿತು. ಹೀಗಾಗಿ ಕೆಲವರು ಸ್ವಲ್ಪ ಮರೆಯಾಗುವ ಪ್ರದೇಶ ಇದ್ದರೆ ಸಾಕು ಅಲ್ಲಿಯೇ ಮೂತ್ರ ವಿಸರ್ಜನೆ, ಬಹಿರ್ದೆಶೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

