ದೇಶದ ಪ್ರಗತಿಯಲ್ಲಿ ಹಳ್ಳಿಗಳ ಪಾತ್ರ ಮುಖ್ಯ
ಆಲಮೇಲ: ದೇಶದ ಪ್ರಗತಿಯಲ್ಲಿ ಹಳ್ಳಿಗಳ ಅಭಿವೃದ್ಧಿಯ ಪಾತ್ರ ಮುಖ್ಯ ಹೀಗಾಗಿ ರಾಜ್ಯ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಅವರು ಸಮೀಪದ ರಾಮನಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಯೋಜನಾ ಉಪವಿಭಾಗದ ಹಾಗೂ ನಮ್ಮೂರು ನಮ್ಮ ರಸ್ತೆ ಅಡಿಯಲ್ಲಿನ ರಾಮನಳ್ಳಿಯಿಂದ ಬಳಗಾನೂರಕ್ಕೆ ಕೂಡುವ ಸುಮಾರು 6 ಕೀ.ಮಿ ಉದ್ದದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ಸರ್ಕಾರ ಗ್ರಾಮಗಳ ಅಭಿವೃದ್ಧಿಯ ಮೂಲ ಮಂತ್ರದ ಮೇಲೆ ಕಾರ್ಯಮಾಡುತ್ತಾ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಗಳನ್ನು ಖರ್ಚು ಮಾಡುತ್ತಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ಅತ್ಯಂತ ಜನಪರ ವಾಗಿದೆ. ಹಿಂದಿನ ಯಾವ ಸರ್ಕಾರ ಮಾಡಲಾಗದ ಅನೇಕ ಕಾರ್ಯಗಳನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು. ಜಿಪಂ ಸದಸ್ಯ ಮಲ್ಲಪ್ಪ ತೋಡಕರ, ವೆಂಕಟೇಶ ಗುತ್ತೆದಾರ, ಶಂಕರ ತೋಂಟಾಪೂರ, ಸೋಮಲಿಂಗ ಪೂಜಾರಿ, ಭಿಮರಾಯ ನಂದರಗಿ, ಮಹಾದೇವಪ್ಪ ಉಜಳಂಗಿ, ತಾಪಂ ಸದಸ್ಯ ಚಾಯಪ್ಪ ದೇವರಮನಿ, ವಿಠಲ್ ಸಿಂದನಕೇರಿ, ಭಿಮಶ್ಯಾ ಕುಕನೂರ, ಕಾರ್ಯನಿರ್ವಾಹಕ ಅಧಿಕಾರಿ ಆರ್.ಡಿ. ಕಟ್ಟಿಮನಿ, ಎಸ್.ಎಸ್. ಸಜ್ಜನ, ಪೀರಪ್ಪ ಮಾದರ, ನಿಂಗಪ್ಪ ಪೂಜಾರಿ, ಶರಣು ದಂಡಾವತಿ, ಮಹಾಂತೇಶ ಹಳಿಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

