'ಬಿಜೆಪಿ ತತ್ವ ಸಿದ್ಧಾಂತದ ಮೇಲೆ ಬೆಳೆದಿದೆ'
ಇಂಡಿ: ಭಾರತೀಯ ಜನತಾ ಪಕ್ಷ ತತ್ವ, ಸಿದ್ಧಾಂತ, ಆದರ್ಶ ತತ್ವದ ಮೇಲೆ ಬೆಳೆದು ಬಂದಿದೆ. ಪಕ್ಷದ ಸಂಘಟನೆಗಾಗಿ ತನು, ಮನ, ಧನದಿಂದ ಸಮರ್ಪಣೆ ಮಾಡಲು ಪ್ರತಿಯೊಬ್ಬ ಕಾರ್ಯಕರ್ತ ಮುಂದಾಗಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಶಿವಾನಂದ ಕಲ್ಲೂರ ಹೇಳಿದರು.
ಅವರು ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ ಪಂಡಿತ ದಿನದಯಾಳ ಉಪಾಧ್ಯಾಯರ ಸಮರ್ಪಣೆ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ಪ್ರಭಲ ರಾಷ್ಟ್ರವಾಗಿ ಬೆಳೆಯಬೇಕು. ಇಲ್ಲಿನ ಸಂಪನ್ಮೂಲ ಬಳಸಿಕೊಂಡು ದೇಶವನ್ನು ರಾಮರಾಜ್ಯವನ್ನಾಗಿ ಮಾಡಬೇಕು ಎಂದು ಅಟಲ ಬಿಹಾರಿ ವಾಜಪೇಯಿ ಅವರ ಕನಸಾಗಿದೆ. ಅದನ್ನು ನನಸು ಮಾಡಲು ಪಕ್ಷದ ತತ್ವ ಸಿದ್ಧಾಂತಗಳ ಮೂಲಕ ರಾಜಕಾರಣ ಮಾಡಬೇಕಾಗಿದೆ ಎಂದು ಹೇಳಿದರು.
ಇಲ್ಲಿನ ರಾಜಕೀಯ, ಶೈಕ್ಷಣಿಕ ವ್ಯವಸ್ಥೆ ಭಾರತದ ಸಂಸ್ಕೃತಿ, ಸಂಸ್ಕಾರಗಳ ಮೇಲೆ ನಡೆಯಬೇಕು ಎಂಬುದು ದಿನದಯಾಳ ಉಪಾಧ್ಯಾಯರ ಕನಸಾಗಿತ್ತು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಪ್ರಭಾಕರ ಬಗಲಿ, ಪುರಸಭೆ ಅಧ್ಯಕ್ಷ ದೇವೇಂದ್ರ ಕುಂಬಾರ, ಬಿಜೆಪಿ ಮುಖಂಡ ಸಂಕೇತ ಬಗಲಿ, ಶಿವಪ್ಪ ಬಿಲ್ಕರಿ, ಮಲ್ಲಯ್ಯ ಮಠಪತಿ, ಅನಿಲ ಜಮಾದಾರ, ನಾಗೇಂದ್ರ ಮಾಯವಂಶಿ, ದಯಾಸಾಗರ ಪಾಟೀಲ, ಚಂದ್ರಶೇಖರ ಹಳೆಂಬರ, ಶಾಂತು ಶಿರಕನಳ್ಳಿ, ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ, ಅದೃಶ್ಯಪ್ಪ ವಾಲಿ, ಸಂಜೀವ ದಶವಂತ, ಹುಚ್ಚಪ್ಪ ತಳವಾರ, ಶಿವು ಕುಂಬಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

