ಬಿಜಾಪುರ

12 ಸುತ್ತು ಗುಂಡು, 10 ಜನ ವಶಕ್ಕೆ: ಐಜಿಪಿ ಚರಣ ರೆಡ್ಡಿ

Published On :

ಸಿಂದಗಿ: ಪಟ್ಟಣದ ಪೊಲೀಸ್ ಠಾಣೆಯ ಮೇಲೆ ಬುಧವಾರ ನಡೆದ ದಾಳಿ ದುರದೃಷ್ಟಕರವಾಗಿದ್ದು, ಈ ಸಂಬಂಧ ಈಗಾಗಲೇ 10 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾಗಿ ಐಜಿಪಿ ಚರಣರೆಡ್ಡಿ ತಿಳಿಸಿದರು.
ಬುಧವಾರ ಸಂಜೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '150ಕ್ಕೂ ಹೆಚ್ಚು ಜನರು ಠಾಣೆಯನ್ನು ಸುತ್ತುವರಿದಿದ್ದರು. ಮಹಿಳೆಯನ್ನು ಅವರ ವಶಕ್ಕೆ ಒಪ್ಪಿಸಲಿಲ್ಲ ಎಂದು ಕೋಪೋದ್ರಕ್ತರಾಗಿ ಠಾಣೆ ಮೇಲೆ ದಾಳಿ ನಡೆಸಿ, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದರು' ಎಂದು ತಿಳಿಸಿದರು. ಗುಂಪು ಚದುರಿಸಲು 12 ಸುತ್ತು ಗುಂಡು ಹಾರಿಸಲಾಯಿತು. ಘಟನೆಯಲ್ಲಿ 11 ಜನ ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಸಿಪಿಐ ಚಿದಂಬರ ಮತ್ತು ಪಿಎಸೈ ಮಂಜುನಾಥ ಅವರಿಗೂ ತೀವ್ರ ಗಾಯಗಳಾಗಿದೆ. ಈ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಸಲು ಬಿಜಾಪುರದ ಎಎಸ್ಪಿ ಆರ್.ಚೇತನ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಆರೋಪಿಗಳನ್ನು ಬಂಧಿಸಲು 10-15 ಪೊಲೀಸ್ ತುಕಡಿಗಳನ್ನು ಕಳುಹಿಸಲಾಗಿದೆ. ಚನ್ನಾಬಾಯಿ ಗಂಡ ಗೋಪಿ ಸೇರಿದಂತೆ ಸುಮಾರು 50 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಐಜಿಪಿ ಚರಣರೆಡ್ಡಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.