ಬಿಜಾಪುರ

ಸಿಂದಗಿ ಠಾಣೆ ಮೇಲೆ ದಾಳಿ ಮಾಡಿದ್ದು ಏಕೆ?

Published On :

ಸಿಂಧಗಿ: ಸಿಂದಗಿ ಠಾಣೆ ಮೇಲೆ ನೂರಾರು ಜನರು ದಾಳಿ ನಡೆಸಿ ಹಲ್ಲೆ ಮಾಡಿದ್ದಕ್ಕೆ ಪ್ರಮುಖ ಕಾರಣ ಗೃಹಿಣಿಯೊಬ್ಬಳ ಪ್ರೇಮ ಪ್ರಕರಣ!
ನಾಗಾವಿ 1ರ ತಾಂಡಾದ ವಿವಾಹಿತ ಮಹಿಳೆ ಚನ್ನಾಬಾಯಿ ಗೋಪಿ ಚವ್ಹಾಣ್ ತನ್ನಿಬ್ಬರು ಮಕ್ಕಳನ್ನು ಬಿಟ್ಟು ಕೆಲ ತಿಂಗಳ ಹಿಂದೆ ತನ್ನ ಪ್ರಿಯಕರನೊಂದಿಗೆ ಮಹಾರಾಷ್ಟ್ರಕ್ಕೆ ಓಡಿ ಹೋಗಿದ್ದಳು. ಇವಳ ಪತಿ ಗೋಪಿ ದುಬೈಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಆಗಾಗ ಮನೆಗೆ ಹಣ ಕಳುಹಿಸುತ್ತಿದ್ದ. ಹೀಗೆ ಸಂಗ್ರಹವಾದ ಸುಮಾರು 3 ಲಕ್ಷ ಹಾಗೂ ಒಡವೆಯೊಂದಿಗೆ ಮಹಿಳೆ ಪರಾರಿಯಾಗಿದ್ದಳು. ಈ ಕುರಿತಂತೆ ಪತಿಯ ಮನೆಯವರು ಸಿಂದಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಫೆ.26ರಂದು ಕೊಲ್ಲಾಪುರದಲ್ಲಿ ಸಿಂದಗಿ ಪೊಲೀಸರು ಮಹಿಳೆಯನ್ನು ಬಂಧಿಸಿ ಕರೆ ತಂದು ಪತಿಯ ಮನೆಯವರಿಗೆ ಹಾಗೂ ತಾಂಡಾದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು.
ಆದರೆ, ಮಹಿಳೆಯ ಅನೈತಿಕ ವರ್ತನೆ ವಿಚಾರದಲ್ಲಿ ನಾಗಾವಿ ಹಾಗೂ ಸುತ್ತಲಿನ ತಾಂಡಾ ಜನತೆ ಒಂದಾಗಿದ್ದನ್ನು ಅರಿತ ಪೊಲೀಸರು ಮಹಿಳೆಯನ್ನು ಬಿಜಾಪುರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಬುಧವಾರ ಬೆಳಗ್ಗೆ ಠಾಣೆ ಎದುರು ಜಮಾಯಿಸಿದ 200ಕ್ಕೂ ಹೆಚ್ಚು ಜನರು ಮಹಿಳೆಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿದರು. ಈ ಕುರಿತು ಎಷ್ಟೇ ತಿಳಿ ಹೇಳಿದರೂ ಪರಿಸ್ಥಿತಿ ಸರಿ ಹೋಗಲಿಲ್ಲ. ಇದ್ದಕ್ಕಿದ್ದಂತೆ ಮಹಿಳೆ ಹಾಗೂ ಪ್ರಿಯಕರನನ್ನು ಪೊಲೀಸರು ಮತ್ತೆ ಕೊಲ್ಲಾಪುರಕ್ಕೆ ಕಳುಹಿಸಿದ್ದಾರೆ ಎಂದು ಗಾಳಿ ಸುದ್ದಿ ಹಬ್ಬುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿದರು. ಠಾಣೆಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಲ್ಲದೇ, ಠಾಣೆಯ ಎದುರಿದ್ದ ಪೊಲೀಸ್ ವಾಹನವನ್ನೂ ಜಖಂಗೊಳಿಸಿದರು. ಮಾರಕಾಸ್ತ್ರಗಳಿಂದ ಒಳ ಹೊಕ್ಕು ಪಿಎಸ್‌ಐ ಮಂಜುನಾಥ ಹಾಗೂ ಸಿಪಿಐ ಚಿದಂಬರ, ಮಹಿಳಾ ಸಿಬ್ಬಂದಿ (ಕಂಪ್ಯೂಟರ್ ಆಪರೇಟರ್) ಶೈಲಶ್ರೀ ನ್ಯಾಮಣ್ಣವರ ಅವರನ್ನು ಅವರನ್ನು ಹೊರಗೆಳೆದು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ 11 ಸಿಬ್ಬಂದಿ ಗಾಯಗೊಂಡಿದ್ದು ಬಿಜಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ಮಾಡಿದರೂ ಪ್ರಯೋಜನವಾಗದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.