'ಮಹಾಪುರುಷರ ತತ್ವಾದರ್ಶ ಅಳವಡಿಸಿಕೊಳ್ಳಿ'
ಬಿಜಾಪುರ: ಸರ್ವ ಕಾಲದಲ್ಲಿ ಎಲ್ಲ ಜನಾಂಗಕ್ಕೆ ಬೆಳಕು ನೀಡುವುದೇ ಧರ್ಮ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವವರೇ ಧರ್ಮಗುರುಗಳು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಶಿವಾನಂದ ಪಾಟೀಲ ಹೇಳಿದರು.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೌಲಗಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಕ್ಕಾಗಿ ವೈರಾಗ್ಯನಿಧಿ ಶಂಕರಲಿಂಗ ಮಹಾರಾಜರು ಕೈಗೊಂಡ 108 ದಿನಗಳ ಮೌನಾನುಷ್ಠಾನ ಮಂಗಲ, ಸೊನ್ನಲಗಿಯ ಸಿದ್ದರಾಮೇಶ್ವರರ ಪುರಾಣ ಮಹಾಮಂಗಲೋತ್ಸವ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಧು, ಸಂತರು, ಜ್ಞಾನಿಗಳು ಹುಟ್ಟಿದ ಭೂಮಿ ನಮ್ಮದಾಗಿದೆ. ಅಂತಹ ಮಹಾಪುರುಷರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಚಿಮ್ಮಲಗಿಯ ನೀಲಕಂಠ ಶ್ರೀ, ಮುತ್ತಗಿಯ ಪಂಡಿತಾರಾಧ್ಯ ಶ್ರೀ, ಖಾಸ್ಗತೇಶ್ವರ ಮಠದ ವಿರಕ್ತ ಶ್ರೀ, ಯರಝರಿಯ ಮಲ್ಲಾರಲಿಂಗ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ದೇಸಾಯಿ, ಸಂಗರಾಜ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮಸಿಂಗ್ ಲಮಾಣಿ, ಗೋಪಾಲ ಧನಶೆಟ್ಟಿ, ಸಿ.ಎಸ್. ಗಿಡ್ಡಪ್ಪಗೋಳ, ಎಂ.ಜಿ. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿದ್ದರು.
ಅಪ್ಪಾಸಾಹೇಬಗೌಡ ಚೀರಲದಿನ್ನಿ, ಬಸನಗೌಡ ಚೀರಲದಿನ್ನಿ, ಅರ್ಜುನ ಚೀರಲದಿನ್ನಿ, ಭೀಮರಾಯ ಬಿರಾದಾರ, ಯಲ್ಲಪ್ಪ ದಳವಾಯಿ, ಜಗದೀಶ ದಳವಾಯಿ, ಜಗದೀಶ ಗಾಣಗೇರ, ರಾಮಣ್ಣ ಚಲವಾದಿ, ಸಂಗಮೇಶ ಚಲವಾದಿ, ರಮೇಶ ಕುಂಬಾರ, ಸುಭಾಸ ಪಡೇಕನೂರ, ಈರಯ್ಯ ಮಠಪತಿ, ಹನುಮಂತ ದೇಸಾಯಿ, ಶಂಕರಣ್ಣ ಕುಳಗೇರಿ, ರುದ್ರಗೌಡ ಚೀರಲದಿನ್ನಿ, ಬಸಪ್ಪ ಸಜ್ಜನ, ಅಶೋಕ ಘಾಟಗೆ, ಮುತ್ತಪ್ಪ ನಿಡಗುಂದಿ, ಯಮನೂರಿ ನಿಡಗುಂದಿ, ವಿಶ್ವನಾಥ ಮಠ ಮುಂತಾದವರು ಉಪಸ್ಥಿತರಿದ್ದರು.
ಬಿ.ಎಚ್. ಕೊಲ್ಹಾರ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

