ಬಿಜಾಪುರ

ಸಾಮೂಹಿಕ ವಿವಾಹ ಬಡವರಿಗೆ ಅನುಕೂಲ

Published On :

ಆಲಮೇಲ:  ಇಂದು ವಿವಾಹ ಎಂಬುವುದು ಬಡವರ ಪಾಲಿಗೆ ಸವಾಲಾಗುತ್ತಿದೆ. ಇದನ್ನು ತಪ್ಪಿಸಲು ಸಾಮೂಹಿಕ ವಿವಾಹ ಸೂಕ್ತವಾದ ಮಾರ್ಗ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಅವರು ಪಟ್ಟಣದ ನಿತ್ಯಾನಂದ ಆರೂಡ ಮಠದಲ್ಲಿ ಸಂಗನಬಸವೇಶ್ವರ ಜಾತ್ರೆ ಮಹೋತ್ಸವದ ನಿಮಿತ್ತ ಗುರುವಾರ ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ, ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದರು. ಜಿಪಂ ಸದಸ್ಯ ಮಲ್ಲಪ್ಪ ತೋಡಕರ, ಶಿವಕುಮಾರ ಗುಂದಗಿ, ಸಿದ್ದರಾಮ ಪಾಟೀಲ, ರಮೇಳ ಭಂಟನೂರ, ಶಂಭುಲಿಂಗ ಕಕ್ಕಳಮೇಲಿ, ಡಾ. ಗೌತಮ ಚೌಧರಿ ಇತರರು ಮಾತನಾಡಿದರು. ರಾಂಪೂರ ಆರೂಡ ಮಠದ ವಿರೇಶ್ವರ ಶರಣರು ಹಾಗೂ ಆಲಮೇಲ ಆರೂಡ ಮಠದ ಪೀಠಾಧಿಕಾರಿ ಶರಣಬಸವ ಶರಣರು ನೇತೃತ್ವ ವಹಿಸಿದ್ದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಹಿರೂರೀನ ಶಾಂತವೀರ ಶಿವಾಚಾರ್ಯರು, ಆಸಂಗೀಹಾಳದ ಶಂಕಂಕರಾನಂದ ಸ್ವಾಮೀಜಿ, ಗೋಳಸಾರದ ಅಭಿನವ ಪುಂಡಲಿಂಗ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.  ಸುಮಾರು 20 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಕಾಶೀನಾಥ ಲೋಣಿ, ಡಾ. ಜಿ.ಎ.ಪಾಟೀಲ, ಜೆ.ಡಿ. ಹುಕ್ಕೇರಿ, ಬಸವರಾಜ ತೆಲ್ಲೂರ, ಅಶೋಕ ಕೋಳಾರಿ, ಪ್ರಭು ವಾಲೀಕಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.