ಚಾಮರಾಜನಗರ

ಇಂದು ತಾಳವಾಡಿಗೆ ಮುತ್ತಿಗೆ

Published On :

ಚಾಮರಾಜನಗರ: ತಾಳವಾಡಿ ಕನ್ನಡಿಗರ ಬಂಧನ, ತಾಳವಾಡಿ ಫಿರ್ಕಾ ಶಾಲೆಗಳಲ್ಲಿ ತಮಿಳನ್ನು ಪ್ರಥಮ ಭಾಷೆಯಾಗಿಸಿದ್ದರ ವಿರುದ್ಧ ಫೆ.2ರಂದು ಬೆಳಗ್ಗೆ 10 ಗಂಟೆಗೆ ನಗರದ ಭುವನೇಶ್ವರಿ ವೃತ್ತದಿಂದ ತಾಳವಾಡಿವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಮುತ್ತಿಗೆ ಕಾರ್ಯಕ್ರಮದ ನೇತೃತ್ವವನ್ನು ಮಾಜಿ ಶಾಸಕ ವಾಟಾಳ್ ನಾಗರಾಜ್ ವಹಿಸಲಿದ್ದಾರೆ.
ಜ.13ರಂದು ನಡೆದ ಗಡಿನಾಡು ಕನ್ನಡಿಗರ ಸಮಾವೇಶದಲ್ಲೂ ವಾಟಾಳ್ ನಾಗರಾಜ್ ತಮಿಳುನಾಡಿನ ಧೋರಣೆ ಖಂಡಿಸಿ ಚಾಮರಾಜನಗರ ಬಂದ್ ಮಾಡಿ, ಪ್ರತಿಭಟಿಸಿ ಜಯಲಲಿತಾ ಅವರ ಪ್ರತಿಕೃತಿಯನ್ನು ದಹಿಸಿದ್ದರು. ಅಲ್ಲಿ ತಮಿಳುನಾಡಿಗೆ ಫೆ.2ರೊಳಗೆ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿಸಿ ಮತ್ತೆ ಆದೇಶ ನೀಡಬೇಕು. ಬಂಧನದಲ್ಲಿರುವ ಕನ್ನಡಿಗರನ್ನು ಬಿಡುಗಡೆ ಮಾಡಬೇಕು. ತಪ್ಪಿದರೆ ಫೆ.2ರಂದು ಸಾವಿರಾರು ಕನ್ನಡಪರ ಸಂಘಟನೆಗಳ ಜೊತೆ ತಾಳವಾಡಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೂ ತಮಿಳುನಾಡು ಸ್ಪಂದಿಸದ ಹಿನ್ನೆಲೆಯಲ್ಲಿ ನಾಗರಾಜ್ ಅವರು ಕನ್ನಡಪರ ಸಂಘಟನೆಗಳ ಜೊತೆಗೂಡಿ ಶನಿವಾರ ತಾಳವಾಡಿಗೆ ಮುತ್ತಿಗೆ ಹಾಕಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.