ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ; ಪರಿಕರಗಳ ವಶ
ಯಳಂದೂರು: ಅಕ್ರಮ ಮರಳು ತೆಗೆಯುತ್ತಿದ ಅಡ್ಡೆ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮರಳು ತಗೆಯಲು ಬಳಸುತ್ತಿದ್ದ ಮಾವಟಿ, ಹಾರೆ ಮತ್ತು ಮಂಕರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಯಳಂದೂರಿನ ಸುನೀಲ್ ಎಂಬುವರು ಸುವರ್ಣಾವತಿ ನದಿ ಹಂಚಿನಲ್ಲಿರುವ ಜಮೀನಿನಲ್ಲಿ ಪ್ರತಿದಿನ ರಾತ್ರಿ ವೇಳೆ ಕದ್ದು ಅಕ್ರಮ ಮರಳು ದಂಧೆ ನಿರಂತರವಾಗಿ ಮಾಡುತ್ತಿದರು ಎನ್ನಲಾಗಿದೆ.
ಈ ಸಂಬಂಧ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಹತ್ತಾರು ಟ್ರಾಕ್ಟರ್ಗಳು ಮರಳು ಸಾಗಣೆ ಮಾಡುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಸಾವಿತ್ರಮ್ಮರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲೂಕು ದಂಡಾಧಿಕಾರಿ ಶಿವನಾಗಯ್ಯ ಅವರು ಅಧಿಕಾರಿಗಳೊಂದಿಗೆ ದಿಡೀರ್ ಭೇಟಿ ನೀಡಿದಾಗ ತೆಗೆದು ಸಂಗ್ರಹಿಸಿದ್ದ ಮರಳನ್ನು ಮತ್ತೆ ಗುಂಡಿಯೊಳಗೆ ತಳ್ಳಿ ಮುಚ್ಚಿದ್ದರು.
ಆ ಸಂದರ್ಭದಲ್ಲಿ ಮರಳು ತೆಗೆಯಲು ಬಳಸುತಿದ್ದ ಪರಿಕರಗಳನ್ನು ವಶಪಡಿಸಿಕೊಂಡರು.
ನಂತರ ಅವರು ಮಾತನಾಡಿ, ಅಕ್ರಮ ಮರಳು ದಂಧೆ ತಡೆಯಲು ಈಗಾಗಲೇ ನಾಲ್ಕು ತಂಡ ರಚನೆ ಮಾಡಲಾಗಿದೆ.
ನದಿ ಹಂಚಿನಲ್ಲಿ ಅಕ್ರಮ ಮರಳು ದಂಧೆ ಮಾಡುವ ಜಮೀನು ಮಾಲೀಕರ ವಿರುದ್ದ ಕ್ರಿಮೀನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಮರಳು ಇರುವ ಜಮೀನುಗಳನ್ನು ಕೃಷಿಗೆ ಬಳಸಿ ಕೊಳ್ಳದೆ ಇದ್ದರೆ ಮರಳು ತೆಗೆಯುವ ಜಮೀನುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜಸ್ವ ನಿರೀಕ್ಷಕ ಮಹದೇವಪ್ಪ, ಗ್ರಾಮಲೆಕ್ಕಿಗ ನಂಜುಂಡಸ್ವಾಮಿ, ಇತರೇ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

