ಪುರಸಭಾ ಚುನಾವಣೆ; ಹೊಸ ಮುಖಗಳಿಗೆ ಮಣೆ
ಗುಂಡ್ಲುಪೇಟೆ: 2007ರಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ 9 ಮಂದಿ ಮತ್ತೆ ಸ್ಪರ್ಧಿಸುವ ಮೂಲಕ ಅಖಾಡಕ್ಕೆ ಇಳಿದಿದ್ದು, ಗೆದ್ದಿದ್ದ 7 ಮಂದಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಹಾಲಿ ಸದಸ್ಯರಲ್ಲಿ 5 ಮಂದಿಗೆ ಟಿಕೆಟ್ ಕೊಟ್ಟರೆ, 18 ಮಂದಿ ಹಾಲಿ ಸದಸ್ಯರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಸೋತ 7 ಪ್ರಮುಖರಿಗೆ ಕಾಂಗ್ರೆಸ್ ಮಣೆ ಹಾಕಿದೆ.
ಕೆಜೆಪಿ ಮಾತ್ರ ಹಾಲಿ ಮೂರು ಸದಸ್ಯರಿಗೆ ಟಿಕೆಟ್ ನೀಡಿದ್ದರೆ, ಕಳೆದ ಚುನಾವಣೆಯಲ್ಲಿ ಸೋತ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಇದೇ ಮೊದಲ ಬಾರಿಗೆ ಕೆಜೆಪಿ ಅಂಗವಿಕಲ ವಿದ್ಯಾವಂತ ಯುವಕನೊಬ್ಬನಿಗೆ 18ನೇ ವಾರ್ಡ್ಗೆ ಟಿಕೆಟ್ ನೀಡಿದೆ. ಅಲ್ಲದೆ, ಪತಿ-ಪತ್ನಿಯರಿಬ್ಬರಿಗೂ 7 ಮತ್ತು 9ನೇ ವಾರ್ಡಿಗೆ ಟಿಕೆಟ್ ನೀಡಿದೆ.
ಬಿಜೆಪಿಯಿಂದ ಸತತ ಎರಡನೇ ಬಾರಿಗೆ 3 ಮತ್ತು 7ನೇ ವಾರ್ಡ್ನಲ್ಲಿ ಸೋತ ಇಬ್ಬರಿಗೆ ಟಿಕೆಟ್ ನೀಡಿದ್ದರೆ, ಉಳಿದ 10 ಮಂದಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಪುರಸಭೆಯ ಮಾಜಿ ಸದಸ್ಯರಾಗಿದ್ದ 17ನೇ ವಾರ್ಡಿನ ರಮೇಶ್, 18 ನೇ ವಾರ್ಡಿನ ಪಿ.ಚಂದ್ರಪ್ಪ, 16ನೇ ವಾರ್ಡಿನ ಬಿ.ವೆಂಕಟಾಚಲ, 13ನೇ ವಾರ್ಡಿನ ಎಸ್.ಲಿಂಗರಾಜು, 1 ನೇ ವಾರ್ಡಿನ ಟಿ.ರಂಗಸ್ವಾಮಿ, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ 9 ನೇ ವಾರ್ಡಿನ ಎಂ.ನಾಗರತ್ನಮ್ಮ, 6 ನೇ ವಾರ್ಡಿನ ಶಫಿ, 15 ನೇ ವಾರ್ಡಿನ ಜಿ.ಜಿ.ವೆಂಕಟೇಶನಾಯಕ ಇವರು ಕಾಂಗ್ರೆಸ್ ಟಿಕೆಟ್ ಪಡೆದವರಾಗಿದ್ದಾರೆ.
ಹಾಲಿ ಸದಸ್ಯರಾಗಿದ್ದ 20ನೇ ವಾರ್ಡಿನ ಮೋಹನ್, 21ನೇ ವಾರ್ಡಿನ ಲತಾ ಜತ್ತಿ, 23 ನೇ ವಾರ್ಡಿನ ಎನ್. ಮಂಜುಳಾ, 14 ನೇ ವಾರ್ಡಿನ ಎಲ್.ಮಣಿಕಾಂತ್, 8 ನೇ ವಾರ್ಡಿನ ಭಾಗ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಧಕ್ಕಿದೆ. 22ನೇ ವಾರ್ಡ್ ಸದಸ್ಯೆಯಾಗಿದ್ದ ರಾಣಿ ಲಕ್ಷ್ಮೀದೇವಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಕೆಜೆಪಿಯಿಂದ 17 ನೇ ವಾರ್ಡಿನ ಪುರಸಭಾ ಮಾಜಿ ಅಧ್ಯಕ್ಷ ಎಲ್.ಸುರೇಶ್ ಹಾಗೂ 13ನೇ ವಾರ್ಡಿನ ಪಿ.ಗಿರೀಶ್ ಮತ್ತು 6ನೇ ವಾರ್ಡ್ನಿಂದ ಗೆಲವು ಸಾಧಿಸಿದ್ದ ಪತ್ನಿಗೆ ಬದಲಾಗಿ ಇಲಿಯಾಸ್ ಎಂಬುವವರಿಗೆ ಕೆಜೆಪಿ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸದಸ್ಯ ಎನ್.ಮಲ್ಲೇಶ್ 2ನೇ ವಾರ್ಡ್ ಮಲ್ಲರಾಜು ಅವರಿಗೆ 20ನೇ ವಾರ್ಡಿಗೆ ಟಿಕೆಟ್ ನೀಡಿದೆ.
ಬಿಜೆಪಿ ಮಾತ್ರ ಇಬ್ಬರು ಮುಖಂಡರಾದ ನಾಗೇಶ್, ಬಾಲುಸುಬ್ರಹ್ಮಣ್ಯಂ ಅವರಿಗೆ ಸತತ ಎರಡನೇ ಬಾರಿಗೆ 3 ಮತ್ತು 7 ನೇ ವಾರ್ಡಿಗೆ ಟಿಕೆಟ್ ನೀಡಿದೆ. ಇನ್ನುಳಿದ 10 ಹೊಸ ಮುಖಕ್ಕೆ ಟಿಕೆಟ್ ನೀಡಿದೆ.
ಹಳಬರಿಗೆ ಟಿಕೆಟಿಲ್ಲ-ಪಕ್ಷಾಂತರಿಗಳಿಗೆ ಟಿಕೆಟ್: ಹಳಬರ ಬಗ್ಗೆ ಎಲ್ಲಾ ಪಕ್ಷಗಳು ಬಹುತೇಕ ಟಿಕೆಟ್ ನಿರಾಕರಿಸಿರುವುದು ಕಳೆದ ಬಾರಿ ಸದಸ್ಯರಾಗಿದ್ದವರಿಗೆ ನುಂಗಲಾರದ ತುತ್ತಾಗಿದೆ. ಕಳೆದ ಚುನಾವಣೆಯಲ್ಲಿ ಶಾಸಕರ ಪಕ್ಷದ ವಿರುದ್ಧ ಸೋತ ರಮೇಶ್, ಬಿ.ವೆಂಕಟಾಚಲ, ಎಂ.ನಾಗರತ್ನ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ, ಆದರೆ ಕೆಜೆಪಿಯೂ ಕಾಂಗ್ರೆಸ್ನಿಂದ ಹೊರಬಂದ ಎಲ್.ಸುರೇಶ್ ಅವರಿಗೆ ಟಿಕೆಟ್ ನೀಡಿದೆ.
ಈ ಬಾರಿ ಚುನಾವಣೆ ಅಗ್ನಿ ಪರೀಕ್ಷೆ: ಕಳೆದ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ 17ನೇ ವಾರ್ಡಿನ ಸದಸ್ಯ ಎಲ್.ಸುರೇಶ್, 21ನೇ ವಾರ್ಡ್ನ ಲತಾ ಜತ್ತಿ, 23 ನೇ ವಾರ್ಡ್ನ ಮಂಜುಳ, 20 ನೇ ವಾರ್ಡಿನ ಮೋಹನ್, 13 ನೇ ವಾರ್ಡಿನ ಗಿರೀಶ್, 14 ನೇ ವಾರ್ಡಿನ ಎಲ್.ಮಣಿಕಾಂತ್, 22 ನೇ ವಾರ್ಡಿನ ರಾಣಿ ಲಕ್ಮೀದೇವಿ ಅವರು ಈ ಬಾರಿ ಕಣದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

