ಚಾಮರಾಜನಗರ

ಇಒ ವಿರುದ್ಧ ದೂರು

Published On :

ಕೊಳ್ಳೇಗಾಲ: ತಾಪಂ ಇಒ ಹಾಗೂ ಚುನಾವಣಾಧಿಕಾರಿ ಮಹದೇವಸ್ವಾಮಿ ಅವರು 22ನೇ ವಾರ್ಡ್ ಅಭ್ಯರ್ಥಿಯಾದ ನನ್ನ ನಾಮಪತ್ರ ಸಿಂಧುವಾಗಿದ್ದರೂ ತಿರಸ್ಕರಿಸಿ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದು 22ನೇ ವಾರ್ಡ್ ನ ನಾಮಪತ್ರ ತಿರಸ್ಕೃತ ಅಭ್ಯರ್ಥಿ ಬಿ.ಬಿ. ಅಜೀರಾ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ನಮ್ಮ ಅಧಿಕೃತ ಅಭ್ಯರ್ಥಿ ಬಿ.ಬಿ.ಅಜೀರಾ ಎಂದು ಪತ್ರದಲ್ಲಿ ನಮೂದಿಸಿದ್ದಾರೆ. ಬರ್ನಾಡೇಟಾ ಲೇವಿಸ್ ಅಭ್ಯರ್ಥಿಯಲ್ಲ ಎಂದು ತಿಳಿಸಿದ್ದರೂ, ಅವರ ನಾಮಪತ್ರವನ್ನೇ ಸಿಂಧು ಮಾಡಿ ಚುನಾವಣಾಧಿಕಾರಿ ನನಗೆ ಅನ್ಯಾಯ ಮಾಡಿದ್ದಾರೆ. ನನ್ನ ಮಾತು ಕೇಳುವ ಸೌಜನ್ಯವಿಲ್ಲದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಇಒ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದರು.
ಚುನಾವಣಾ ಆಯೋಗ 22ನೇ ವಾರ್ಡ್ ಚುನಾವಣೆ ಪಟ್ಟಿ ಪ್ರಕಟಿಸದಂತೆ ತಡೆ ಹಿಡಿಯಬೇಕು. ಈ ನಿಟ್ಟಿನಲ್ಲಿ ಚುನಾವಣಾ ಅಯೋಗ ಇಒಗೆ ಆದೇಶ ನೀಡಬೇಕು ಎಂದು ಕೋರಿದ್ದೇನೆ ಎಂದರು.
ಸಯ್ಯದ್ ಸಲೀಂ, ಜಾಹೀದ್ ಅಹಮದ್, ಸಯ್ಯದ್ ಗೌಸ್, ಫಾರೂಕ್ ಅಹಮದ್, ಇದಾಯತ್-ಉಲ್ಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.