ಚಾಮರಾಜನಗರ

ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿಗೆ ಚಾಲನೆ

Published On :

ಗುಂಡ್ಲುಪೇಟೆ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ವಿಜಯಪುರ ಅಮಾನಿಕೆರೆ ಒತ್ತುವರಿಯಾಗಿದ್ದು, ಯಾವುದೇ  ಪ್ರಭಾವಕ್ಕೆ ಒಳಗಾಗದೆ ಕೂಡಲೇ ತೆರವುಗೊಳಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಎಚ್.ಎಸ್.ಮಹದೇವಪ್ರಸಾದ್ ಆದೇಶ ನೀಡಿದರು.
ತಾಲೂಕಿನ ಹಾಲಹಳ್ಳಿ ಪಿಕಪ್, ಗುಂಡ್ಲುಪೇಟೆ ಬಳಿಯ ವಿಜಯಪುರ ಅಮಾನಿಕೆರೆ, ಶಿವಪುರದ ಕಲ್ಕೆಟ್ಟೆ ಕೆರೆಗಳನ್ನು 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ,   ಕೆರೆಯ ಅಂಗಳ ಸುಮಾರು 129 ಎಕರೆಯಿದ್ದು, ಇಲ್ಲಿ ಕೆಲ ಪ್ರಭಾವಿಗಳು ಕೆರೆಯನ್ನೇ ಕಬಳಿಸಿದ್ದಾರೆ. ಕೆರೆ ಅಭಿವೃದ್ಧಿಗೆ 30 ಲಕ್ಷ ಬಿಡುಗಡೆಯಾಗಿದ್ದು, ಮೊದಲು ಕೆರೆಯ ಗಡಿ ಗುರುತಿಸುವ ಕೆಲಸ ಮಾಡಬೇಕು. ಸಣ್ಣ ನೀರಾವರಿ ಇಲಾಖೆಯಿಂದ 4707 ವಿಶೇಷ ಅಭಿವೃದ್ಧಿ ಯೋಜನೆಯಡಿ ಕೆರೆಗೆ ನೀರು ಬರುವ ಪೋಷಕ ನಾಲೆಗಳ ಒತ್ತುವರಿ ತೆರೆವುಗೊಳಿಸಿ, ಕೆರೆಯ ಗಡಿ ಕಂದಕ ನಿರ್ಮಿಸಿ ತೂಬು, ಏರಿ ಮತ್ತು ಕಾಲುವೆಗಳ ದುರಸ್ತಿ ಮಾಡಲಾಗುವುದು ಎಂದರು.
ಇದೇ ರೀತಿ ಕಲ್ಕಟ್ಟೆ ಕೆರೆಗೆ 30 ಲಕ್ಷ ಮತ್ತು ಹಾಲಹಳ್ಳಿ ಪಿಕಪ್ ಅಭಿವೃದ್ಧಿಗೆ 40 ಲಕ್ಷ ಬಿಡುಗಡೆಯಾಗಿದೆ.
ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇಂಥ ದೊಡ್ಡ ಕೆರೆಗಳನ್ನು ಕನಿಷ್ಠ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸಲು ಚಿಂತಿಸಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಕಬ್ಬಹಳ್ಳಿಮಹೇಶ್, ಜಿಪಂ ಸದಸ್ಯ ಡಿ.ಸಿ.ನಾಗೇಂದ್ರ, ತಾಪಂ ಸದಸ್ಯರಾದ ಕನ್ನೇಗಾಲಸ್ವಾಮಿ, ಬಂಗಾರನಾಯಕ, ಸರಸ್ವತಮ್ಮ, ಜ್ಯೋತಿಕುಮಾರಸ್ವಾಮಿ, ಪುರಸಭಾ ಉಪಾಧ್ಯಕ್ಷ ಸಯ್ಯದ್ ದಸ್ತಗೀರ್, ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ನಂಜುಂಡಪ್ರಸಾದ್, ವಕೀಲ ಜಗದೀಶಮೂರ್ತಿ, ಎಸ್.ರಾಜಶೇಖರ್, ಶಿವಸ್ವಾಮಿ, ಚಂದ್ರಶೇಖರ್, ಜಿ.ಎಲ್.ರಾಜು, ಮೋಹನ್‌ಕುಮಾರ್, ಅಣ್ಣಯ್ಯಸ್ವಾಮಿ, ಜಿ.ಕೆ.ನಾಗೇಂದ್ರ, ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಮಲ್ಲು, ಗುತ್ತಿಗೆದಾರ ಶ್ರೀನಿವಾಸರೆಡ್ಡಿ ಸೇರಿದಂತೆ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.