ಚಾಮರಾಜನಗರ

ತಾನೂ ಆತ್ಮಹತ್ಯೆ ಮಾಡಿಕೊಂಡ

Published On :

ಕ.ಪ್ರ. ವಾರ್ತೆ ತುರುವೇಕೆರೆ ಮಾ. 2
ಇದ್ದ ಜಮೀನನ್ನು ಮಾರಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿದ್ದವ ಮುಂಬರುವ ದಿನಗಳಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡುವುದಾದರೂ ಹೇಗೆ ಎಂದು ಚಿಂತೆಗೆ ಬಿದ್ದು ತನ್ನ ಜೊತೆ ಇದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ನೇಣಿಗೆ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳ್ಳದಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
 ಬೋರೇಗೌಡರಿಗೆ ಇಬ್ಬರು ಹೆಣ್ಣು ಮಕ್ಕಳು. ಸ್ವರೂಪ ಮತ್ತು ಸ್ವಪ್ನ. ಸ್ವರೂಪಳನ್ನು ಎಸ್ಎಸ್ಎಲ್ಸಿಯ ವರೆಗೆ ವಿದ್ಯಾಭ್ಯಾಸ ಮಾಡಿಸಿ ಮನೆಯಲ್ಲೇ ಉಳಿಸಿಕೊಂಡಿದ್ದ ಬೋರೇಗೌಡ ತನ್ನ ಎರಡನೇ ಮಗಳು ಸ್ವಪ್ನಳನ್ನು ದ್ವಿತೀಯ ಪಿಯುಸಿಗೆ ಕಳಿಸುತ್ತಿದ್ದರು. ಬೋರೇಗೌಡರು ತಮ್ಮ ಜಮೀನನ್ನು ಮಾರಿ ಜೀವನ ನಿರ್ವಹಣೆ ಮಾಡುವುದನ್ನು ರೂಢಿಸಿಕೊಂಡಿದ್ದರು. ಎಲ್ಲೂ ಕೆಲಸಕ್ಕೆಂದು ಹೋಗುತ್ತಿರಲಿಲ್ಲ ಎಂದು ಹೇಳಲಾಗಿದೆ. ಈತನ ಹೆಂಡತಿ ರತ್ನಮ್ಮ ಸ್ಪಲ್ಪ ಮಾನಸಿಕ ಅಸ್ಪಸ್ಥೆ. ಹಾಗಾಗಿ ಆಕೆಯನ್ನೇ ಅವರ ಮನೆಯ ಮುಂಭಾಗವೇ ಇರುವ ಕೊಠಡಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿ ದಿನವೂ ಆಹಾರ ನೀಡುತ್ತಿದ್ದರು ಎಂದು ಹೇಳಲಾಗಿದೆ. ಕಳೆದ ಹತ್ತಾರು ವರ್ಷಗಳಿಂದಲೂ ದಂಪತಿಗಳಲ್ಲಿ ಸಾಮರಸ್ಯ ಇರಲಿಲ್ಲವೆನ್ನಲಾಗಿದೆ.
4 ಮಂದಿ ನೇಣಿಗೆ ಶರಣು:  ಶುಕ್ರವಾರ ರಾತ್ರಿ 10 ಗಂಟೆಯಲ್ಲೂ ರತ್ನಮ್ಮಳಿಗೆ ಊಟ ಕೊಡಲಾಗಿದೆ. ಆದರೆ ಬೆಳಗ್ಗೆ ಎದ್ದು ಕಾಫಿ ಕೊಡಬೇಕಾದ ಮಗಳಲಾಗಲೀ, ಮನೆಯರಾಗಲೀ ಯಾರೂ ಮನೆ ಬಾಗಿಲು ತೆಗೆಯದೇ ಇದ್ದುದನ್ನು ಮನಗಂಡ ರತ್ನಮ್ಮ ಮನೆಯ ಹಿಂದಿನ ಕಿಟಿಕಿಯನ್ನು ತೆರೆದು ನೋಡಲಾಗಿ ನಾಲ್ಕು ಮಂದಿಯೂ ನೇಣಿಗೆ ಶರಣಾಗಿದ್ದು ಕಂಡು ಬಂದಿದೆ.
ಉತ್ತಮ ಬಾಂಧವ್ಯ ಇರಲಿಲ್ಲ:  ಬೋರೇಗೌಡ ತನ್ನ ಜಮೀನನ್ನು ಮಾರಿ ಜೀವನ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದ. ಗ್ರಾಮದ ಯಾರೊಬ್ಬರ ಬಳಿಯೂ ಉತ್ತಮ ಭಾಂಧವ್ಯ ಹೊಂದಿರಲಿಲ್ಲ. ಬೆಳೆದು ನಿಂತ ಹೆಣ್ಣು ಮಕ್ಕಳ ಮದುವೆ ಮಾಡುವುದು ಇವನಿಗೆ ದೊಡ್ಡ ಸವಾಲಾಗಿತ್ತು. ಎಲ್ಲೂ ಕೆಲಸಕ್ಕೆ ಹೋಗದೆ ಓಡಾಡಿಕೊಂಡಿದ್ದ ಈತನಿಗೆ ಮದುವೆ ಮಾಡುವುದು  ಕನಸಿನ ಮಾತೇ ಆಗಿತ್ತು.
 ಅಂತಿಮವಾಗಿ ಸಾವೇ ಇವಕ್ಕೆಲ್ಲಾ ಮುಕ್ತಿ ಎಂದು ಭಾವಿಸಿದ ಬೋರೇಗೌಡ ತನ್ನ ಎರಡು ಹೆಣ್ಣು ಮಕ್ಕಳನ್ನು ಹಾಗೂ ತಾಯಿಯನ್ನು ಅಡಿಗೆ ಮನೆಯಲ್ಲಿ ಮೊದಲು ಸಾಯಿಸಿ ನಂತರ ನೇಣಿಗೆ ಹಾಕಿರಬಹುದು ಎಂದು ಸಂಶಯಿಸಲಾಗಿದೆ.
ನೇಣಿಗೆ ಶರಣು:  ಎಲ್ಲರ ಸಾವು ಖಚಿತವಾದ ನಂತರ ತಾನೂ ಸಹ ನೇಣಿಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ. ತಾಯಿ ಹಾಗೂ ಮಕ್ಕಳ ಬಾಯಿಗೆ ಬಟ್ಟೆ ತುರುಕಲಾಗಿದೆ. ಆದರೆ ಬೋರೇಗೌಡನ ಬಾಯಿಯಲ್ಲಿ ಯಾವುದೇ ಬಟ್ಟೆ ಇರಲಿಲ್ಲ. ಸಾವಿಗೆ ಖಚಿತ ಮಾಹಿತಿ ಏನು ಎಂಬುದನ್ನು ತಿಳಿಸಲು ಆತನ ಹೆಂಡತಿ ರತ್ನಮ್ಮಳೂ ಅಸಮರ್ಥಳು. ಗ್ರಾಮಸ್ಥರಿಗೂ ಖಚಿತ ಮಾಹಿತಿ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.