ಚಾಮರಾಜನಗರ

19 ನಗರಸಭೆ ಮಾಜಿ ಸದಸ್ಯರು ಕಣದಲ್ಲಿ

Published On :

ಕೊಳ್ಳೇಗಾಲ: ನಗರಸಭೆ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ 19 ಮಂದಿ ಮಾಜಿ ಸದಸ್ಯರು ಅಂತಿಮ ಕಣದಲ್ಲಿದ್ದು, ಗೆಲುವಿಗಾಗಿ ಅವಿರತ ಪರಿಶ್ರಮ ಪಡುತ್ತಿದ್ದಾರೆ.  
ಕಳೆದ ಬಾರಿ ಆಯ್ಕೆಯಾಗಿದ್ದ ಮಾಜಿ ಅಧ್ಯಕ್ಷರಾದ ಪರಮೇಶ್ವರಯ್ಯ, ಸೆಲ್ವರಾಜು, ಮಂಗಳಗೌರಿ, ಪುರಸಭಾ  ಮಾಜಿ ಅಧ್ಯಕ್ಷ ಮಹದೇವು, ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಮಹದೇವಪ್ಪ, ಮಾಜಿ ಉಪಾಧ್ಯಕ್ಷರಾದ ಅಕ್ಮಲ್ ಪಾಶಾ, ಜೆ.ಹರ್ಷ, ಸದಸ್ಯರಾದ ಶಾಂತು, ಮುಡಿಗುಂಡ ಶಾಂತರಾಜು, ಮಲ್ಲಿಕಾರ್ಜುನ, ವೀಣಾ, ಮೂರ್ತಿ,  ಮಂಗಳಗೌರಿ, ಚೌಡಮ್ಮ, ಸೆಲ್ವರಾಜು, ಎಂ.ಸುರೇಶ್, ಎ.ಪಿ.ಶಂಕರ್, ಪ್ರತಿಮಾಕಾಂತ, ಪಿ.ಎಂ.ಕೃಷ್ಣಯ್ಯ, ಜಿ.ಪಿ.ಶಿವಕುಮಾರ, ಎಂ.ಸುರೇಶ ಸೇರಿದಂತೆ 19 ಮಂದಿ ಮರು ಆಯ್ಕೆ ಬಯಸಿದ್ದಾರೆ.
ಹ್ಯಾಟ್ರಿಕ್ ಕನಸು: 8ನೇ ವಾರ್ಡ್‌ನಿಂದ 3ನೇ ಬಾರಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪಿ.ಎಂ.ಕೃಷ್ಣಯ್ಯ, 18ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಮೀನಾಕ್ಷಿ  ಮಹದೇವಪ್ಪ, ಮತ್ತು 17ನೇ ವಾರ್ಡ್‌ನ ಮಾಜಿ ಅಧ್ಯಕ್ಷ  ಪರಮೇಶ್ವರಯ್ಯ 3ನೇ ಬಾರಿ ನಗರಸಭೆ ಪ್ರವೇಶಿಸಿ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. 1997ರಲ್ಲಿನ ಪುರಸಭೆ ಚುನಾವಣೆಯಲ್ಲಿ ಗೆದ್ದಿದ್ದ ಮಾಜಿ ಸದಸ್ಯ ಮನೋಹರ, ಲಕ್ಷ್ಮಿಕಾಂತ, ಸಿಂಗಾರಿ ಪರಮೇಶ್ ಸಹ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.
ಅಲ್ಲದೆ 1997ರ ಪುರಸಭೆ ಹಾಗೂ 2007ರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ನಿಂದ 2 ಬಾರಿ ಪರಾಭವಗೊಂಡಿದ್ದ ಚಿಂತು ಪರಮೇಶ್ ಸಹ 15ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.