ಇಂದು ತಾಪಂ ಕೆಡಿಪಿ ಸಭೆ
ಚಾಮರಾಜನಗರ: ಚಾಮರಾಜನಗರ ತಾಲೂಕು ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಅಧ್ಯಕ್ಷ ಬಸವಣ್ಣ ಅವರ ಅಧ್ಯಕ್ಷತೆಯಲ್ಲಿ ಮಾ.20 ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
23ರಂದು ನೇರ ನೇಮಕಾತಿ
ಚಾಮರಾಜನಗರ: ಬೆಂಗಳೂರಿನ ಪ್ರತಿಷ್ಠಿತ ಅರವಿಂದ್ ಲಿಮಿಟೆಡ್ ಸಂಸ್ಥೆಯು ಹೆಲ್ಪರ್ ಮತ್ತು ಟ್ರೈನೀ ಆಪರೇಟರ್ ಹುದ್ದೆಗಳಿಗೆ ಮಾ.23ರಂದು ನಗರದ ಜಿಲ್ಲಾಡಳಿತ ಭವನದ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನೇರವಾಗಿ ನೇಮಕಾತಿ ಮಾಡಿಕೊಳ್ಳಲಿದೆ. 7ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ ಇಲ್ಲವೇ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ 18 ರಿಂದ 40ರ ವಯೋವುತಿಯೊಳಗಿನ ಪುರುಷ ಅಭ್ಯರ್ಥಿಗಳು ತಮ್ಮ ಸ್ವವಿವರಗಳೊಂದಿಗೆ ಅಂದು ಹಾಜರಾಗಬಹುದು. ಮಾಹಿತಿಗೆ 08226- 222009 ಸಂಪರ್ಕಿಸಿ.
ಕೃಷಿ ಸಾಲ ಮನ್ನಾ
ಚಾಮರಾಜನಗರ: ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2005-06ನೇ ಸಾಲಿನ ಅಂತ್ಯದವರೆಗೆ ಮಂಜೂರು ಮಾಡಲಾಗಿರುವ 25000 ವರೆಗಿನ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳ ಸಾಲ ಮನ್ನಾ ಮಾಡಲಾಗಿದೆ. ಸರ್ಕಾರದ ಆದೇಶ ದಿನಾಂಕ 2012 ಡಿಸೆಂಬರ್ನ ಅನ್ವಯದಂತೆ 2012ರ ಮಾ.31ರ ಅಂತ್ಯಕ್ಕೆ ಬಾಕಿ ಇರುವ ಅಸಲು,ಬಡ್ಡಿ ಮೊತ್ತ ಮನ್ನಾ ಮಾಡಲಾಗಿದೆ.
ಕೃಷಿಯೇತರ ಸಾಲದ ಬಾಕಿ ಬಡ್ಡಿ ಮನ್ನಾ: ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2005-06ನೇ ಸಾಲಿನ ಅಂತ್ಯದವರೆಗೆ ಮಂಜೂರು ಮಾಡಲಾಗಿರುವ 25000 ವರೆಗಿನ ಕೃಷಿಯೇತರ ಚಟುವಟಿಕೆ ಸಾಲದ ಅಸಲಿನ ಮೊತ್ತ ಮಾ.31 ರೊಳಗೆ ಮರುಪಾವತಿಸಿದರೆ ಬಾಕಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ನೀಲಕಂಠಪ್ಪ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

