'ಕೆಜೆಪಿಯಿಂದಲೆ ಸ್ಪರ್ಧೆ'
ಕ.ಪ್ರ.ವಾರ್ತೆ ಕೊಳ್ಳೇಗಾಲ ಮಾ. 19
ಕೆಜೆಪಿ ನಮ್ಮ ಪಕ್ಷ. ಈ ಬಾರಿ ಕೆಜೆಪಿಯಿಂದಲೇ ಚುನಾವಣೆ ಎದುರಿಸೋಣ. ನಾಗಪ್ಪ ಅಭಿಮಾನಿಗಳಾದ ನೀವೇ ನನಗೆ ಶಕ್ತಿ ತುಂಬಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮನವಿ ಮಾಡಿದರು.
ತಾಲೂಕಿನ ಕಾಮಗೆರೆಯಲ್ಲಿ ನಡೆದ ನಾಗಪ್ಪ ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹನೂರು ಕ್ಷೇತ್ರ ಕುಟುಂಬ ರಾಜಕಾರಣಕ್ಕೆ ಮೀಸಲಾಗಿದೆ. ಈ ಕ್ಷೇತ್ರ ನಮ್ಮದೇ ರಾಜ್ಯವಿದ್ದಂತೆ. ಇಲ್ಲಿ ನಾಗಪ್ಪ ಅಭಿಮಾನಿಗಳೇ ಮಂತ್ರಿ ಹಾಗೂ ಸೈನಿಕರಿದ್ದಂತೆ. ಹಾಗಾಗಿ 3ನೇ ಶಕ್ತಿಗೆ ಇಲ್ಲಿ ಪ್ರವೇಶವಿಲ್ಲ ಎಂದು ಪರಿಮಳಾ ನಾಗಪ್ಪ. ಸಚಿವ ವಿ.ಸೋಮಣ್ಣ ಹೆಸರೇಳದೆ ಪರೋಕ್ಷವಾಗಿ ಕುಟುಕಿದರು.
ಜೆಡಿಎಸ್ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಾಗಪ್ಪ ಅಭಿಮಾನಿಗಳೆಲ್ಲ ಒಗ್ಗಟ್ಟು ಪ್ರದರ್ಶಿಸಿ ಮಾ.24ರಂದು ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಮಾಜಿ ಸಿ.ಎಂ. ಯಡಿಯೂರಪ್ಪ ಅವರ ಗಮನ ಸೆಳೆದು ಟಿಕೇಟ್ ನೀಡಿ ಎಂದು ಮನವಿ ಮಾಡೋಣ. ಅಲ್ಲಿಯವರೆಗೂ ಯಾರೂ ದೃತಿಗೆಡಬಾರದು. ಕಾರ್ಯಕರ್ತರು ಶಾಂತಿ ಕದಡುವ ಹಾಗೂ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಮುಂದಾಗಬಾರದು ಎಂದು ಸಲಹೆ ನೀಡಿದರು.
ತಪ್ಪಾಗಿದೆ ತಿದ್ದಿಕೊಳ್ಳುವೆ: ರಾಜಕೀಯ ಒತ್ತಡದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನಾನು ಸಿದ್ಧ. ನಾಗಪ್ಪ ಅಭಿಮಾನಿಗಳೇ ನನಗೆ ಧೈರ್ಯ, ಶಕ್ತಿ ತುಂಬುವ ಕೆಲಸ ಮಾಡಬೇಕು. ಜೀವನದಲ್ಲಿ ನನಗೆ ರಾಜಕೀಯ ಅನಿವಾರ್ಯ ಎಂದರು.
ಅಭಿಮಾನಿಗಳೇ ವಾಪಸ್ ಬನ್ನಿ: ಹನೂರು ಕುಟುಂಬ ರಾಜಕಾರಣಕ್ಕೆ ಮೀಸಲಾದ ಕ್ಷೇತ್ರ. ಇಲ್ಲಿ ನಾಗಪ್ಪ ಹಾಗೂ ರಾಜೂಗೌಡರ ಕುಟುಂಬಗಳೆರಡು ಆಲದಮರವಿದ್ದಂತೆ. ಅದನ್ನು ಬಿಟ್ಟು 3ನೇ ಶಕ್ತಿಯತ್ತ ನಾಗಪ್ಪ ಅಭಿಮಾನಿಗಳು ವಾಲುವುದು ಸರಿಯಲ್ಲ. ಸೋಮಣ್ಣ ಪರ ಗುರ್ತಿಸಿಕೊಂಡಿರುವ ನಾಗಪ್ಪ ಅಭಿಮಾನಿಗಳು ತಕ್ಷಣ ಬರಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಯಾರ್ಯಾರು ಸಚಿವ ಸೋಮಣ್ಣ ಅವರ ಬಳಿ ಗುರುತಿಸಿಕೊಂಡಿದ್ದಾರೋ, ಅವರ ಕೈ-ಕಾಲು ಹಿಡಿದು ಕರೆತರೋಣ ಎಂದು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

