ನಾಗಪ್ಪ ಅಭಿಮಾನಿಗಳ ಗದ್ದಲ
ಕ.ಪ್ರ.ವಾರ್ತೆ ್ಣ ಕೊಳ್ಳೇಗಾಲ ್ಣ ಮಾ.19
ಕಾಮಗೆರೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪರಿಮಳಾ ನಾಗಪ್ಪ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಗಿ ಗದ್ದಲಕ್ಕೆ ಕಾರಣವಾಗಿ ಚರ್ಚೆಗೆ ಗ್ರಾಸವಾದ ಘಟನೆ ಮಂಗಳವಾರ ಜರುಗಿತು.
ಸಚಿವ ಸೋಮಣ್ಣ ಹನೂರು ಕ್ಷೇತ್ರದಲ್ಲಿ ಕೆಜೆಪಿಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆ ಪರಿಮಳಾ ನಾಗಪ್ಪ ಅವರು ಮಾಜಿ ಸಚಿವ ನಾಗಪ್ಪ ಅಭಿಮಾನಿಗಳ ಸಭೆ ಕರೆದಿದ್ದರು.
ಸಭೆಯಲ್ಲಿ ಕಾಳೇಗೌಡ ಎಂಬುವರು ಮಾತನಾಡುತ್ತಿದ್ದ ವೇಳೆ ಲಿಂಗಾಯಿತರು ಈ ಭಾಗದಲ್ಲಿ 40000 ಸಂಖ್ಯೆಯಲ್ಲಿದ್ದಾರೆ. ಮೊದಲು ಲಿಂಗಾಯಿತರು 10 ಮಂದಿಗೆ ಒಬ್ಬ ನಾಯಕರಾಗಿ ರೂಪುಗೊಂಡು ಪರಿಮಳಾ ಅವರ ಗೆಲುವಿಗೆ ಶ್ರಮಿಸಬೇಕು. 40 ಸಾವಿರ ಲಿಂಗಾಯಿತರಿದ್ದರೂ ಸೋಲುತ್ತಿರುವುದು ಸರಿಯಲ್ಲ ಎಂದರು.
ಆಗ ಉಗನಿಯದ ಕಾರ್ಯಕರ್ತ ರಮೇಶ ಎಂಬಾತ ಇಲ್ಲಿ ಎಲ್ಲಾ ಸಮುದಾಯದ ಮುಖಂಡರೂ ಇದ್ದೇವೆ. ಒಂದೆ ಸಮುದಾಯ ಉದ್ದೇಶಿಸಿ ಮಾತನಾಡಿ ಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕೆಲವು ಕಾರ್ಯಕರ್ತರು ಸಹಾ ಸಹಮತ ಸೂಚಿಸಿದರು. ಈ ಹಿನ್ನೆಲೆ ಕೆಲಕಾಲ ಮಾತಿಗೆ ಮಾತು ಬೆಳೆದು ಗದ್ದಲ ಉಂಟಾಯಿತು.
ಈ ಸಂದರ್ಭ ಪರಿಮಳಾ ನಾಗಪ್ಪ ಅವರೇ ನಿಂತು ಮೈಕ್ನಲ್ಲಿ ಮಾತನಾಡಿದರೂ ಕಾರ್ಯಕರ್ತರು ಸಮಾಧಾನಗೊಳ್ಳಲಿಲ್ಲ. ಬಳಿಕ ವೇದಿಕೆ ಮುಂಭಾಗದಲ್ಲಿ ಕೆಲವು ಮುಖಂಡರು ಉಗನಿಯ ರಮೇಶ ಸೇರಿದಂತೆ ಹಲವರನ್ನು ಸಮಾಧಾನಪಡಿಸಿದ ಬಳಿಕ ಏರ್ಪಟ್ಟಿದ್ದ ಗೊಂದಲಕ್ಕೆ ತೆರೆಬಿತ್ತು.
ಇನ್ನು ಮುಂದೆ ಪಕ್ಷಾಂತರಬೇಡ: ಆಗ್ರಹ: ಇನ್ನು ಮುಂದೆ ನೀವು ಕೆಜೆಪಿಯಲ್ಲೆ ಇರಿ. ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡಬೇಡಿ. ನಿಮ್ಮ ತಪ್ಪು ತಿದ್ದುಕೊಳ್ಳಿ. ಹಳ್ಳಿಹಳ್ಳಿಗೆ ತೆರಳಿ ದೂರಾಗಿರುವ ಮತ್ತಷ್ಟು ಕಾರ್ಯಕರ್ತರನ್ನು ಒಟ್ಟಾಗಿ ಕರೆ ತನ್ನಿ ಎಂದು ಪರಿಮಳಾ ನಾಗಪ್ಪ ಅವರಿಗೆ ನಾಗಪ್ಪ ಅಭಿಮಾನಿಗಳು ತಾಕೀತು ಮಾಡಿದರು.
ಸಭೆಯಲ್ಲಿ ಮಾತನಾಡಿದ ಮಣಿ. ಶಂಕರ ಸೇರಿದಂತೆ ಹಲವು ಕಾರ್ಯಕರ್ತರು ಈಗಾಗಲೇ ನೀವು ಮೊದಲು ಜೆಡಿಎಸ್ ಪಾರ್ಟಿ, ನಂತರ ಬಿಎಸ್ಪಿ. ಬಿಜೆಪಿ ಈಗ ಕೆಜೆಪಿ ಪಕ್ಷ ಸೇರ್ಪಡೆಗೊಂಡಿದ್ದೀರಿ. ಪುನಃ ಜೆಡಿಎಸ್ ಸೇರುತ್ತಾರೆ ಎಂಬ ಸುದ್ದಿ ಇದೆ. ನೀವು ಕೆಜೆಪಿಯಲ್ಲೆ ಉಳಿದು ಸ್ಪರ್ಧಿಸಿ ಮುಂದಿನ ಚುನಾವಣೆ ಎದುರಿಸಿ ಎಂದು ಸಲಹೆ ನೀಡಿದರಲ್ಲದೆ ನಾಗಪ್ಪ ಅಭಿಮಾನಿಗಳಾದ ನಾವು ನಿಮ್ಮ ಜೊತೆ ಇರುತ್ತೆವೆ ಎಂದು ಭರವಸೆ ನೀಡಿದರು.
ಅಲ್ಲದೆ, ನೀವು ಆಗಿಂದಾಗ್ಗೆ ಪಕ್ಷ ಬದಲಾವಣೆಯಿಂದ ನೀವು ಯಾವ ಪಾರ್ಟಿಗೆ ಮತ ಹಾಕ್ತೀರಿ ಎಂದು ಕೆಲವರು ಟೀಕಿಸುತ್ತಿದ್ದಾರೆ ಎಂದು ಸಹಾ ನಾಗಪ್ಪ ಅಭಿಮಾನಿಗಳು ಪರಿಮಳಾ ನಾಗಪ್ಪ ಅವರಲ್ಲಿ ತಮ್ಮ ಅಳವು ತೊಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

