'ಬಿಎಸ್ವೈಗೆ ದ್ರೋಹ ಮಾಡಲ್ಲ'
ಕ.ಪ್ರ.ವಾರ್ತೆ ಕೊಳ್ಳೇಗಾಲ ಮಾ.19
ಹಾಲಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾಡಿದಂತೆ ನಾನು ಯಡಿಯೂರಪ್ಪ ಅವರಿಗೆ ನಾನು ದ್ರೋಹ ಮಾಡುವುದಿಲ್ಲ ಎಂದು ಮಾಜಿ ಶಾಸಕ ಎಸ್.ಬಾಲರಾಜು ಹೇಳಿದರು.
ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಶಾಸಕರು ಯಡಿಯೂರಪ್ಪ ಅವರ ಆಶೀರ್ವಾದದಿಂದ ಆರಿಸಿಬಂದರು. ಆದರೆ, ಅವರು ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದ್ದಾರೆ. ನಾನು ಅವರ ನಾಯಕತ್ವ ನಂಬಿ ಕೆಜೆಪಿ ಸೇರ್ಪಡೆಗೊಂಡಿದ್ದೇನೆ. ಸೋತರೂ ಸರಿ, ಗೆದ್ದರೂ ಸರಿ. ನನಗೆ ಯಡಿಯೂರಪ್ಪ ಅವರೇ ನಾಯಕರು. ಅವರ ನೇತೃತ್ವದಲ್ಲಿ ನಾನು ಕೆಜೆಪಿಯಲ್ಲೆ ದುಡಿಯುವೆ ಎಂದು ಹೇಳಿದರು.
ಮಾ.24ರ ಸಮಾವೇಶಕ್ಕೆ 30000ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಕ್ಷದ ಮುಖಂಡರು ಶ್ರಮ ಪಟ್ಟು ಕೆಜೆಪಿ ಶಕ್ತಿ ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಜಿಪಂ ಸದಸ್ಯೆ ಚಂದ್ರಕಲಾಬಾಯಿ, ಮುಖಂಡರಾದ ಸರ್ವೇಶ ಬಸವಯ್ಯ ಅವರು ನನ್ನ ಜೊತೆಗಿದ್ದು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಪ್ರೊ. ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಅವರನ್ನು ಉಸ್ತುವಾರಿ ಮಂತ್ರಿ ಮಾಡಬೇಕು ಎಂಬುದು ಸಹಾ ನಮ್ಮ ಅಭಿಲಾಷೆ ಎಂದು ಬಾಲರಾಜು ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಯಡಿಯೂರಪ್ಪ ಜಾರಿಗೆ ತಂದ ಯೋಜನೆಗಳ ನಮಗೆ ಬಂಡವಾಳವಾಗಿದೆ. ಈ ನಿಟ್ಟಿನಲ್ಲಿ ಅವರ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಕಾರ್ಯಕರ್ತರು ಜನತೆಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ನಗರಸಭೆ ಸದಸ್ಯೆ ಲಕ್ಷ್ಮಿ, ಜಿಪಂ ಮಾಜಿ ಸದಸ್ಯೆ ನಾಗರತ್ನಮ್ಮ, ಇಂದ್ರೇಶ್, ಕೃಪಾಶಂಕರ, ದಿನೇಶ ಗುಪ್ತಾ, ಮೂರ್ತಿ, ಜೆ.ಮಹದೇವಪ್ಪ, ಪುಟ್ಟಸುಬ್ಬಪ್ಪ, ನಿರಂಜನ, ರವಿ, ರಂಗಸ್ವಾಮಿ, ಸಿದ್ದೇಶ, ಇಕ್ಕಡಹಳ್ಳಿ ಸುಂದ್ರ, ಯಳಂದೂರು ಗೋಪಾಲ, ಪರಮೇಶ ನಾಯಕ, ಸುಂದ್ರಪ್ಪ, ಮಧುವನಹಳ್ಳಿ ವಿಜಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

