ಯಳಂದೂರು ಪಪಂ: ಉಳಿತಾಯ ಬಜೆಟ್ ಮಂಡನೆ
ಕ.ಪ್ರ. ವಾರ್ತೆ ್ಣ ಯಳಂದೂರು ್ಣ ಮಾ.21
ಪಟ್ಟಣ ಪಂಚಾಯಿತಿಯ 2013- 14ನೇ ಸಾಲಿನ ಉಳಿತಾಯ ಬಜೆಟ್ಅನ್ನು ಅಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಶಿವನಾಗಯ್ಯ ಮಂಡಿಸಿದರು.
ತಾಲೂಕಿನ ಪಪಂ ಕಚೇರಿ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ತಹಸೀಲ್ದಾರ್, ಪಪಂ ಆಡಳಿತಾಧಿಕಾರಿ ಶಿವನಾಗಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉತ್ತಮ ಬಜೆಟ್ ತಯಾರಿಸಲಾಗಿದೆ ಎಂದು ಬಜೆಟ್ ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು.
ಪಪಂಗೆ ವಿವಿಧ ಮೂಲಗಳಿಂದ ಆದಾಯ: ಎಸ್ಎಫ್ಸಿ ಮುಕ್ತನಿಧಿಯಿಂದ 1.95 ಕೋಟಿ, ಸಿಎಂಎಸ್ಎಂಟಿಡಿಪಿ ಅನುದಾನದಿಂದ 1.95 ಕೋಟಿ, ವಿಶೇಷ ಅನುದಾನಗಳು 45 ಲಕ್ಷ, ಎಸ್ಎಫ್ಸಿ ವೇತನ ಅನುದಾನದಿಂದ 54 ಲಕ್ಷ, 13ನೇ ಹಣಕಾಸು ಯೋಜನೆಯಿಂದ 45 ಲಕ್ಷ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ 5 ಲಕ್ಷ, ನೆಲಗುತ್ತಿಗೆ ಬಾಡಿಗೆಯಿಂದ 4 ಲಕ್ಷ, ಕಟ್ಟಡ ಪರವಾನಗಿಯಿಂದ 1.50 ಲಕ್ಷ, ಶೌಚಾಲಯಗಳಿಂದ ಬಾಡಿಗೆ 1.50 ಲಕ್ಷ, ನೀರು ಸರಬರಾಜು ಶುಲ್ಕ 15 ಲಕ್ಷ, ಆಸ್ತಿ ತೆರಿಗೆಯಿಂದ ನಿರೀಕ್ಷಣೆ ಎಸ್ಎಎಸ್ 12 ಲಕ್ಷ.
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕಾಯ್ದಿರಿಸುವ ಅನುದಾನ: ವಿವಿಧ ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ಕಾಮಗಾರಿಗಳಿಗೆ 2.80 ಕೋಟಿ, ರಸ್ತೆ ಮತ್ತು ಚರಂಡಿ ದುರಸ್ಥಿ 15 ಕೋಟಿ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗಾಗಿ 2 ಲಕ್ಷ, ಒಳರಂಡಿ ಯೋಜನೆಗೆ 25 ಲಕ್ಷ, ಮೂಲ ಸೌಕರ್ಯ ಮತ್ತು ಬೀದಿ ದೀಪಗಳಿಗೆ 2.6 ಲಕ್ಷ, ಮೂಲ ಸೌಕರ್ಯಗಳ ಆಸ್ತಿ ಹಾಗೂ ಕೊಳವೆ ದುರಸ್ತಿಗೆ 8.50 ಲಕ್ಷ, ನೀರು ಸರಬರಾಜು ಯಂತ್ರೋಪಕರಣಗಳ ದುರಸ್ತಿ ಮತ್ತು ನಿರ್ವಹಣೆ 25 ಲಕ್ಷ, ಕಚೇರಿ ಸಿಬ್ಬಂದಿ ವೇತನಕ್ಕಾಗಿ 54 ಲಕ್ಷ, ಶೇ.3ರ ಮೀಸಲಾತಿ ಅಂಗವಿಕಲರ ಕಲ್ಯಾಣಕ್ಕಾಗಿ 5.50 ಲಕ್ಷ, ಶೇ.7.25 ಮೀಸಲಾತಿ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣಕ್ಕಾಗಿ 13.50 ಲಕ್ಷ, ಶೇ.22.75ರ ಮೀಸಲಾತಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ 39 ಲಕ್ಷ, ಶೇ.1ರ ಮೀಸಲಾತಿ ಕ್ರೀಡಾಭಿವೃದ್ಧಿಗಾಗಿ 1.85 ಲಕ್ಷ.
ಪ್ರಾರಂಭಿಕ ಶುಲ್ಕ 7.82 ಕೋಟಿ, ರಾಜಸ್ವ ಸ್ವೀಕ್ರತಿಗಳು 6.04 ಕೋಟಿ, ಬಂಡವಾಳ ಸ್ವೀಕೃತಿಗಳು 1.30 ಕೋಟಿ, ಅಸಾಧಾರಣ ಸ್ವೀಕೃತಿಗಳು 3.31 ಕೋಟಿ, ಒಟ್ಟು 10.65 ಕೋಟಿ, ರಾಜಸ್ವ ಪಾವತಿಗಳು 3.27 ಕೋಟಿ, ಬಂಡವಾಳ ಪಾವತಿಗಳು 11.05 ಕೋಟಿ, ಅಸಾಧಾರಣ ಪಾವತಿಗಳು 3.82 ಕೋಟಿ, ಒಟ್ಟು 18.15 ಕೋಟಿ, ಅಲ್ಲದೆ 32.95 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು.
ಪಪಂ ಮುಖ್ಯಾಧಿಕಾರಿ ವಿಜಯ್, ಗಿರೀಶ್, ಕೆಂಪಯ್ಯ, ಚಲುವರಾಜು, ನಂಜುಂಡಯ್ಯ, ಜೆಇ ಬೆಟ್ಟಸ್ವಾಮಿ, ಲಕ್ಷ್ಮಿ, ಹಾಗೂ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

