ಕ.ಪ್ರ.ವಾರ್ತೆ ್ಣ ಕೊಳ್ಳೇಗಾಲ ್ಣ ಮಾ.30
ತಾಲೂಕಿನ ರಾಮಾಪುರದ ಕೆಲವು ಹೊಟೇಲ್ಗಳಲ್ಲಿ ಬಳಸುವ ಪ್ಲಾಸ್ಟಿಕ್ ಪ್ಲೇಟ್ಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿದ್ದು, ಯಾರು ಇಂಥ ಕೃತ್ಯದಲ್ಲಿ ತೊಡಗಿದ್ದಾರೆ ಅಂಥವರ ವಿರುದ್ಧ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಛಲವಾಧಿ ಮಹಾಸಭಾ ಆಗ್ರಹಿಸಿದೆ.
ರಾಮಾಪುರದಲ್ಲಿ ತಿಂಡಿ ತಿಂದು ಬಿಸಾಡುವ ಪ್ಲೇಟ್ಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿದ್ದು, ಇಂಥ ಪ್ಲೇಟ್ ಬಳಸಿ ಬಿಸಾಡುವುದರಿಂದ ರಾಷ್ಟ್ರನಾಯಕರಿಗೆ ಅಪಚ್ಯುತಿ ಉಂಟು ಮಾಡಿದಂತಾಗಿದೆ. ಯಾವ ಕಿಡಿಗೇಡಿಗಳು ಇಂಥ ಕೃತ್ಯದಲ್ಲಿ ತೊಡಗಿದ್ದಾರೋ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾಡಳಿತ ಇಂಥ ಪ್ಲೇಟ್ ವಶಕ್ಕೆ ಪಡೆಯುವ ಮೂಲಕ ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ರಿಪಬ್ಲಿಕ್ ಡೆಮಾಕ್ರಟಿಕ್ ಪಾರ್ಟಿಯ ಜಿಲ್ಲಾಧ್ಯಕ್ಷ ವಂಗಪ್ಪ, ಮುಖಂಡರಾದ ಮಲೆ ಮಹದೇವಸ್ವಾಮಿ ಇದ್ದರು.