ಯಾವುದೇ ಪಕ್ಷ ಸೋಲಿಸುವ ಘೋಷಣೆಯೊಂದಿಗೆ ಸಿಪಿಐ ಸ್ಪರ್ಧಿಸುತ್ತಿಲ್ಲ
ಕ.ಪ್ರ ವಾರ್ತೆ, ಮೂಡಿಗೆರೆ, ಏ.5
ಪ್ರಸಕ್ತ ಅಸೆಂಬ್ಲಿ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಸೋಲಿಸುವ ಘೋಷಣೆಯೊಂದಿಗೆ ಸಿಪಿಐ ಸ್ಪರ್ಧಿಸುತ್ತಿಲ್ಲ. ಬದಲು ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಸಿಪಿಐ ಪಕ್ಷದ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸುವ ಸಂಕಲ್ಪದಿಂದ ಶ್ರಮಿಸಲಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್ ಹೇಳಿದರು.
ಮೂಡಿಗೆರೆ ಶಾದಿಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಸಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಚುನಾವಣಾ ವಿಚಾರದಲ್ಲಿ ಮೇಲ್ನೋಟದ ಸಮೀಕ್ಷೆಗಳನ್ನು ನಂಬುವುದಿಲ್ಲ. ಆದರೆ ಯಾವುದೇ ರಾಜಕೀಯ ಪಕ್ಷಗಳಿಗೂ ಸುಲಭವಾಗಿ ಗೆಲುವು ದಕ್ಕಿಸಿಕೊಳ್ಳಲು ಅಸಾಧ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಕಣಕ್ಕಿಳಿಯುವ ಮೊದಲೇ ಟಿಕೆಟ್ ಹಂಚಿಕೆಯಲ್ಲಿ ಗೊಂದಲಗಳು ನಡೆದಿದೆ. ಪರಸ್ಪರ ಕಾಲೆಳೆದು ಅವರವರೇ ನಾಮಾವಶೇಷದ ಹಾದಿಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ದೇವರುಂದ ರವಿ ಮಾತನಾಡಿ, ಕ್ಷೇತ್ರದಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ತಲಾ 20 ಮಂದಿ ಇರುವ 115 ಸಮಿತಿಯನ್ನು ರಚಿಸಲಾಗಿದೆ ಎಂದರು. ಪಕ್ಷದ ಅಭ್ಯರ್ಥಿ ಸಾತಿ ಸುಂದರೇಶ್, ರೇಣುಕಾರಾಧ್ಯ, ಗುಣಶೇಖರನ್, ಗೋಪಾಲ್ ಎನ್. ಶೆಟ್ಟಿ ಇದ್ದರು.
ಪೊಲೀಸ್ ನೋಡಲ್ ಅಧಿಕಾರಿಗಳ ನೇಮಕ
ಚಿಕ್ಕಮಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸ್ವೀಕೃತ ಪ್ರಕ್ರಿಯೆಯು ಏ. 10 ರಿಂದ 20ರವರೆಗೆ ನಡೆಯಲಿದ್ದು, ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಾದರಿ ನೀತಿ ಸಂಹಿತೆಯನ್ವಯ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಗೆ ಪೊಲೀಸ್ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಶೃಂಗೇರಿ ಕ್ಷೇತ್ರಕ್ಕೆ ಕೊಪ್ಪ ಡಿ.ಎಸ್.ಪಿ. ಡಾ. ಕೆ.ವಿ. ಜಗದೀಶ್ (ಮೊಬೈಲ್ ನಂಬರ್ 9480805121), ಮೂಡಿಗೆರೆ ಕ್ಷೇತ್ರಕ್ಕೆ ಮೂಡಿಗೆರೆ ಸಿಪಿಐ ಆರ್. ರಮೇಶ್ (9480805132), ಚಿಕ್ಕಮಗಳೂರು ಕ್ಷೇತ್ರಕ್ಕೆ ಚಿಕ್ಕಮಗಳೂರು ಡಿ.ಎಸ್.ಪಿ. ಸುರೇಶ್ ಲಕ್ಷ್ಮಣ ನಾಯಕ್ (9480805120), ತರೀಕೆರೆ ಕ್ಷೇತ್ರಕ್ಕೆ ತರೀಕೆರೆ ಡಿ.ಎಸ್.ಪಿ. ಸದಾನಂದ ಬಿ.ನಾಯಕ್ (9480805122), ಕಡೂರು ಕ್ಷೇತ್ರಕ್ಕೆ ಕಡೂರು ಸಿಪಿಐ ಸಿ.ಪಿ. ಬಾಲಚಂದ್ರೇಗೌಡ (9480805138) ನೇಮಕಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

